Bizarre instance in Cricket: ಕ್ರಿಕೆಟ್’ನಲ್ಲಿ ವಿಲಕ್ಷಣ ಘಟನೆಗಳು ಹೆಚ್ಚಾಗಿ ಕಂಡುಬರುತ್ತವೆ. ನಂತರ ಅವುಗಳ ಮೇಲೆ ಚರ್ಚೆ ನಡೆದಾಗ, ನಿಯಮಗಳಲ್ಲಿ ಸಹ ಅವು ಉಲ್ಲೇಖಿಸಲ್ಪಟ್ಟಿರುತ್ತದೆ ಎಂದು ತಿಳಿದುಬರುತ್ತದೆ. ಇದೀಗ ಆಸ್ಟ್ರೇಲಿಯನ್ ಗ್ರೇಡ್ ಕ್ರಿಕೆಟ್’ನಲ್ಲಿ ಇದೇ ರೀತಿಯ ಪ್ರಕರಣ ಕಂಡುಬಂದಿದೆ, ಸ್ಟಂಪ್ ಕಿತ್ತು ನೆಲಕ್ಕೆ ಬಿದ್ದರೂ ಕೂಡ ಅದನ್ನು ಅಂಪೈರ್ ನಾಟೌಟ್ ಎಂದು ಘೋಷಿಸಿದ್ದಾರೆ. ಇದೀಗ ಈ ವಿಚಿತ್ರ ವಿಚಾರಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ.
ಇದನ್ನೂ ಓದಿ: ಮದುವೆ ಆಗುವಂತೆ ಹಠ ಮಾಡಿದ ನಟಿ: ದಿಕ್ಕುತೋಚದೆ 46ನೇ ವಯಸ್ಸಲ್ಲಿ ತಾಳಿ ಕಟ್ಟಿದ ಹಾಸ್ಯನಟ!
ಈ ಘಟನೆ ನಡೆದಿದ್ದು, ಆಸ್ಟ್ರೇಲಿಯಾದಲ್ಲಿ ನಡೆದ ಸ್ಥಳೀಯ ACT ಪ್ರೀಮಿಯರ್ ಕ್ರಿಕೆಟ್ ಮೂರನೇ ದರ್ಜೆಯ ಪಂದ್ಯದಲ್ಲಿ.
ಭಾನುವಾರ Ginninderra Cricket Club and West District Cricket Club ನಡುವಿನ ಪಂದ್ಯದಲ್ಲಿ ಈ ಘಟನೆ ನಡೆದಿದೆ. ಕ್ರಿಕೆಟ್ ಎಸಿಟಿಯ ಸಾಮಾಜಿಕ ಮಾಧ್ಯಮ ಪೇಜ್ ಇದರ ಫೋಟೋವನ್ನು ಶೇರ್ ಮಾಡಿಕೊಂಡಿದೆ.
ಇದನ್ನೂ ಓದಿ: ಮತ್ತೆ ಬರ್ತಿದ್ದಾರೆ ಜೂ. ಧೋನಿ… ವರ್ಷದ ಬಳಿಕ ತಂಡಕ್ಕೆ ಮರಳಿದ 26ರ ಹರೆಯದ ಈ ಆಟಗಾರನಿಗೆ ನಾಯಕತ್ವ!
ಮೇರಿಲ್‌ಬೋನ್ ಕ್ರಿಕೆಟ್ ಕ್ಲಬ್ (MCC)ನ ನಿಯಮದ 29ರ ಪ್ರಕಾರ, “ಸ್ಟಂಪ್’ಗಳ ಮೇಲಿರುವ ಕನಿಷ್ಠ ಒಂದು ಬೇಲ್’ಗಳನ್ನು ಸಂಪೂರ್ಣವಾಗಿ ತೆಗೆದು ಹಾಕಿದಾಗ ಅಥವಾ ಹೆಚ್ಚಿನ ಸ್ಟಂಪ್‌ಗಳನ್ನು ತೆಗೆದುಹಾಕಿದಾಗ ಔಟ್ ಎಂದು ಘೋಷಿಸಲಾಗುತ್ತದೆ’ ಆದರೆ ಇಲ್ಲಿ ಬೇಲ್ ಹಾಗೆ ಉಳಿದುಕೊಂಡು, ಮಿಡಲ್ ಸ್ಟಂಪ್ ಮಾತ್ರ ನೆಲಕ್ಕೆ ಬಿದ್ದಿತ್ತು. ಇದು ಬ್ಯಾಟ್ಸ್’ಮನ್ ಅದೃಷ್ಟವೋ.. ಬೌಲರ್ ದುರಾದೃಷ್ಟವೋ ತಿಳಿಯದು…
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ