ಈ ಡೆಡ್ಲಿ ಬ್ಯಾಟರ್ ಆಸೀಸ್ ವಿರುದ್ಧ ಆಡೋದು ಖಚಿತ! ಸೂರ್ಯಕುಮಾರ್ ಸುದ್ದಿಗೋಷ್ಠಿ ಬಳಿಕ ಹೊರಬಿತ್ತು ಭಾರತದ ಪ್ಲೇಯಿಂಗ್ 11
Suryakumar Yadav Press Conference: ಮೊದಲ ಬಾರಿಗೆ ಭಾರತದ ನಾಯಕತ್ವ ವಹಿಸಿಕೊಂಡ ಸೂರ್ಯಕುಮಾರ್ ಯಾದವ್, ತಂಡದ ನಿಯಮಿತ ನಾಯಕ ರೋಹಿತ್ ಶರ್ಮಾ ಬಗ್ಗೆ ಮಾತನಾಡಿದ್ದಾರೆ.
Suryakumar Yadav Press Conference: ODI ವಿಶ್ವಕಪ್ 2023ರ ಬಳಿಕ ಭಾರತೀಯ ಕ್ರಿಕೆಟ್ ತಂಡ ಇದೀಗ ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ T20 ಸರಣಿಯನ್ನು ಆಡಲಿದೆ. ಈ ಪಂದ್ಯಾವಳಿಯಲ್ಲಿ ಟೀಂ ಇಂಡಿಯಾವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದಾರೆ. ಸರಣಿಯ ಮೊದಲ ಪಂದ್ಯ ನಾಳೆ ಅಂದರೆ ಗುರುವಾರ, ನವೆಂಬರ್ 23 ರಂದು ವಿಶಾಖಪಟ್ಟಣದಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ಸೂರ್ಯಕುಮಾರ್ ಯಾದವ್ ಸುದ್ದಿಗೋಷ್ಠಿ ನಡೆಸಿ ಹಲವು ಪ್ರಮುಖ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ: ಸಂಕಷ್ಟದಲ್ಲಿದೆ ಈ ಆಟಗಾರನ ವೃತ್ತಿಜೀವನ! ವಿಶ್ವಕಪ್ ಅಂತ್ಯವಾಗ್ತಿದ್ದಂತೆ ತಂಡದಿಂದ ಹೊರಬಿದ್ದ ಓಪನರ್
ಮೊದಲ ಬಾರಿಗೆ ಭಾರತದ ನಾಯಕತ್ವ ವಹಿಸಿಕೊಂಡ ಸೂರ್ಯಕುಮಾರ್ ಯಾದವ್, ತಂಡದ ನಿಯಮಿತ ನಾಯಕ ರೋಹಿತ್ ಶರ್ಮಾ ಬಗ್ಗೆ ಮಾತನಾಡಿದ್ದಾರೆ. “ರೋಹಿತ್ ಶರ್ಮಾ ಅವರು ಈ ವಿಶ್ವಕಪ್’ನಲ್ಲಿ ತಂಡವನ್ನು ಉದಾಹರಣೆಯಾಗಿ ಮುನ್ನಡೆಸಿದರು. ಈ ವಿಶ್ವಕಪ್’ನಲ್ಲಿ ರೋಹಿತ್ ಶರ್ಮಾ ಏನೇ ಮಾಡಿದರೂ ಸಂಪೂರ್ಣವಾಗಿ ವಿಭಿನ್ನವಾಗಿತ್ತು. ಅವರು ಹೇಳಿದ್ದನ್ನೇ ಮಾಡಿದರು” ಎಂದಿದ್ದಾರೆ.
ಪಿಚ್ ವರದಿ:
ಇನ್ನು ವಿಶಾಖಪಟ್ಟಣದ ಪಿಚ್ ಸ್ಪಿನ್’ಗೆ ಅನುಕೂಲಕರವಾಗಿದೆ. ಸದ್ಯ ಈ ಕ್ರೀಡಾಂಗಣದಲ್ಲಿ ಡ್ಯೂ ದೊಡ್ಡ ಪಾತ್ರ ವಹಿಸಲಿದೆ. ಹವಾಮಾನವು ತಂಪಾಗಿರಲಿದ್ದು, ರಾತ್ರಿಯಲ್ಲಿ ಇಬ್ಬನಿ ಇರುತ್ತದೆ. ವಿಶೇಷವೆಂದರೆ ಈ ಕ್ರೀಡಾಂಗಣದ ಬೌಂಡರಿ ಚಿಕ್ಕದಾಗಿದ್ದು, ಇದರಿಂದಾಗಿ ಬ್ಯಾಟ್ಸ್’ಮನ್’ಗಳು ದೊಡ್ಡ ಸ್ಕೋರ್ ಮಾಡಲು ಸಹಾಯ ಮಾಡುವ ಸಾಧ್ಯತೆಯಿದೆ. ಇತ್ತೀಚಿನ ಪಂದ್ಯಗಳಲ್ಲಿಯೂ ಈ ವಿಕೆಟ್ ಸ್ಪಿನ್ನರ್’ಗಳಿಗೆ ಸಾಕಷ್ಟು ಸಹಾಯ ಮಾಡಿದೆ. ಇಂತಹ ಪರಿಸ್ಥಿತಿಯಲ್ಲಿ ಎರಡೂ ತಂಡಗಳು ಅತ್ಯಂತ ಎಚ್ಚರಿಕೆಯಿಂದ ಪ್ಲೇಯಿಂಗ್-11 ಅನ್ನು ಆಯ್ಕೆ ಮಾಡಬೇಕಿದೆ.
ಟೀಂ ಇಂಡಿಯಾ ಸಂಭಾವ್ಯ ಪ್ಲೇಯಿಂಗ್ 11: ಯಶಸ್ವಿ ಜೈಸ್ವಾಲ್, ರಿತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್, ಶಿವಂ ದುಬೆ, ರವಿ ಬಿಷ್ಣೋಯ್, ಅಕ್ಷರ್ ಪಟೇಲ್, ಅರ್ಶ್ದೀಪ್ ಸಿಂಗ್ ಮತ್ತು ಪ್ರಸಿದ್ಧ್ ಕೃಷ್ಣ.
ಇದನ್ನೂ ಓದಿ: ಟಿ-20 ಕ್ರಿಕೆಟ್’ಗೆ ನಿವೃತ್ತಿ!? ಬಿಸಿಸಿಐಗೆ ಹೀಗೆಂದು ತನ್ನ ನಿರ್ಧಾರ ತಿಳಿಸಿದ ರೋಹಿತ್ ಶರ್ಮಾ
ಆಸ್ಟ್ರೇಲಿಯಾ ಸಂಭಾವ್ಯ ಪ್ಲೇಯಿಂಗ್ 11: ಮ್ಯಾಥ್ಯೂ ಶಾರ್ಟ್, ಟ್ರಾವಿಸ್ ಹೆಡ್, ಗ್ಲೆನ್ ಮ್ಯಾಕ್ಸ್‌ವೆಲ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್ (ನಾಯಕ/ವಿಕೆಟ್ ಕೀಪರ್), ಮಾರ್ಕಸ್ ಸ್ಟೊಯಿನಿಸ್, ಸೀನ್ ಅಬಾಟ್, ನಾಥನ್ ಎಲ್ಲಿಸ್, ಜೇಸನ್ ಬೆಹ್ರೆನ್‌ಡಾರ್ಫ್ ಮತ್ತು ಆಡಮ್ ಝಂಪಾ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ