Team India player who married twice: ಪ್ರಸ್ತುತ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಆಡುತ್ತಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಗೆಲುವನ್ನು ಸಾಧಿಸಿದೆ. ಇನ್ನು ಈ ಟೂರ್ನಿ ಮುಗಿದಂತೆ, ವಿಶ್ವಕಪ್ ಆರಂಭವಾಗಲಿದೆ. ಈ ಬಾರಿ ವಿಶ್ವಕಪ್’ಗೆ ಭಾರತದ ಆತಿಥ್ಯವಿದೆ.


COMMERCIAL BREAK
SCROLL TO CONTINUE READING

ಈ ಎಲ್ಲದರ ಮಧ್ಯೆ ನಾವಿಂದು ಭಾರತದ ಕ್ರಿಕೆಟಿಗರ ಬಗ್ಗೆ ಒಂದಿಷ್ಟು ವಿಶೇಷ ಮಾಹಿತಿಯನ್ನು ನೀಡಲಿದ್ದೇವೆ. ಇದರಲ್ಲಿ ಎರಡು ಬಾರಿ ಮದುವೆಯಾಗಿದ್ದ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗರ ವಿವರವನ್ನು ನೀಡಲಿದ್ದೇವೆ.


ಇದನ್ನೂ ಓದಿ: ODI ಕ್ರಿಕೆಟ್’ನಲ್ಲಿ ಇದುವರೆಗೆ ಒಂದೇ ಒಂದು ಬಾರಿಯೂ ಔಟ್ ಆಗದ ಭಾರತೀಯ ಬ್ಯಾಟ್ಸ್’ಮನ್ ಯಾರು ಗೊತ್ತಾ?


ವರದಿಗಳ ಪ್ರಕಾರ, ಟೀಂ ಇಂಡಿಯಾದ ಆಟಗಾರರಾಗಿದ್ದ ಅರುಣ್ ಲಾಲ್, ಮೇ 2, 2022 ರಂದು ಬುಲ್ ಬುಲ್ ಎಂಬಾಕೆಯ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅರುಣ್ ಲಾಲ್’ಗೆ 68 ವರ್ಷ ವಯಸ್ಸಾಗಿದ್ದು, ಬುಲ್ ಬುಲ್ 38 ಹರೆಯದ ಮಹಿಳೆ. ಇನ್ನು ಅರುಣ್ ಅವರ ಮೊದಲ ಪತ್ನಿ ರೀನಾ ಅನಾರೋಗ್ಯ ಪೀಡಿತರಾಗಿದ್ದು, ಅವರನ್ನು ನೋಡಿಕೊಳ್ಳುವುದು ಅರುಣ್ ಲಾಲ್ ಅವರೇ ಎಂದು ತಿಳಿದುಬಂದಿದೆ.


ಮಾಜಿ ಆಲ್‌ ರೌಂಡರ್ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಕೂಡ ಎರಡು ಬಾರಿ ವಿವಾಹವಾಗಿದ್ದಾರೆ. ಯುವರಾಜ್ ಅವರ ತಾಯಿ ಶಬ್ನಮ್ ಸಿಂಗ್ ಅವರೊಂದಿಗೆ ಮೊದಲ ವಿವಾಹವಾಗಿತ್ತು. ಯೋಗರಾಜ್ ನಂತರ ಸತ್ವೀರ್ ಕೌರ್ ಅವರನ್ನು ವಿವಾಹವಾದರು. ಯುವರಾಜ್ ತನ್ನ ತಾಯಿ ಶಬ್ನಮ್ ಜೊತೆ ವಾಸಿಸುತ್ತಿದ್ದಾರೆ, ಆದರೆ ತಂದೆ ಯೋಗರಾಜ್ ಎರಡನೇ ಪತ್ನಿ ಸತ್ವೀರ್ ಮತ್ತು 2 ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ.


ಸಚಿನ್ ತೆಂಡೂಲ್ಕರ್ ಅವರ ಬಾಲ್ಯದ ಗೆಳೆಯ ವಿನೋದ್ ಕಾಂಬ್ಳಿ ಅವರು 1998 ರಲ್ಲಿ ನೋಯೆಲ್ಲಾ ಲೂಯಿಸ್ ಅವರನ್ನು ವಿವಾಹವಾದರು. ಆದರೆ ಈ ಸಂಬಂಧವು ದೀರ್ಘಕಾಲ ಉಳಿಯಲಿಲ್ಲ. ಕೆಲವು ವರ್ಷಗಳ ನಂತರ ಇಬ್ಬರೂ ವಿಚ್ಛೇದನ ಪಡೆದರು. ಕಾಂಬ್ಳಿ ನಂತರ ಫ್ಯಾಶನ್ ಮಾಡೆಲ್ ಆಂಡ್ರಿಯಾ ಹೆವಿಟ್ ಅವರನ್ನು ಎರಡನೇ ಬಾರಿಗೆ ವಿವಾಹವಾದರು, ನಂತರ ಅವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರು.


ಭಾರತದ ಮಾಜಿ ವೇಗದ ಬೌಲರ್ ಜಾವಗಲ್ ಶ್ರೀನಾಥ್ 1999 ರ ವಿಶ್ವಕಪ್ ಮುಗಿದ ನಂತರ ಜ್ಯೋತ್ಸ್ನಾ ಅವರನ್ನು ವಿವಾಹವಾದರು. ಆದರೆ ಕೆಲವು ವರ್ಷಗಳ ನಂತರ ಇಬ್ಬರೂ ಪರಸ್ಪರ ಒಪ್ಪಿಗೆಯೊಂದಿಗೆ ವಿಚ್ಛೇದನ ಪಡೆದರು ಮತ್ತು ಪತ್ರಕರ್ತೆ ಮಾಧವಿ ಪತ್ರಾವಳಿ ಅವರನ್ನು ಶ್ರೀನಾಥ್ ವಿವಾಹವಾದರು.


ಇದನ್ನೂ ಓದಿ: 6 ಎಸೆತಕ್ಕೆ 6 ವಿಕೆಟ್ ಕಬಳಿಸಿದ್ದ 42ರ ಹರೆಯದ ದಿಗ್ಗಜ ಆಲ್’ರೌಂಡರ್ ಕ್ರಿಕೆಟ್ ಲೋಕಕ್ಕೆ ನಿವೃತ್ತಿ ಘೋಷಣೆ!


ಭಾರತೀಯ ವಿಕೆಟ್‌ ಕೀಪರ್-ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ 2007 ರಲ್ಲಿ ತನ್ನ ಬಾಲ್ಯದ ಗೆಳತಿ ನಿಕಿತಾ ವಂಜಾರಾ ಅವರನ್ನು ವಿವಾಹವಾದರು. ಆದರೆ ನಿಕಿತಾ ಮತ್ತೊಬ್ಬ ಕ್ರಿಕೆಟಿಗ ಮುರಳಿ ವಿಜಯ್ ಅವರನ್ನು ಪ್ರೀತಿಸುತ್ತಿದ್ದರು. ಈ ವಿಚಾರ ತಿಳಿದ ದಿನೇಶ್, ನಿಕಿತಾಗೆ ವಿಚ್ಛೇದನ ನೀಡಿದರು. ನಂತರ ನಿಕಿತಾ ಮುರಳಿ ವಿಜಯ್ ಅವರನ್ನು ವಿವಾಹವಾದರು. ಕಾರ್ತಿಕ್ 2015 ರಲ್ಲಿ ಚಾಂಪಿಯನ್ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್ ಅವರನ್ನು ವಿವಾಹವಾದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ