Cricket and General Knowledge Quiz: ಪ್ರಸ್ತುತ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಏಕದಿನ ಸರಣಿ ಆಡುತ್ತಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಗೆಲುವನ್ನು ಸಾಧಿಸಿದೆ. ಇನ್ನು ಈ ಟೂರ್ನಿ ಮುಗಿದಂತೆ, ವಿಶ್ವಕಪ್ ಆರಂಭವಾಗಲಿದೆ. ಈ ಬಾರಿ ವಿಶ್ವಕಪ್’ಗೆ ಭಾರತದ ಆತಿಥ್ಯವಿದೆ.
ಇನ್ನು ನಾವಿಂದು ಈ ವರದಿಯಲ್ಲಿ, ಏಕದಿನ ಕ್ರಿಕೆಟ್’ನಲ್ಲಿ ವಿಶ್ವದ ಯಾವುದೇ ಬೌಲರ್’ನಿಂದ ಔಟ್ ಮಾಡಲು ಸಾಧ್ಯವಾಗದ ಆಟಗಾರನ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಇದನ್ನೂ ಓದಿ: 50 ವರ್ಷಗಳ ಬಳಿಕ ಈ ರಾಶಿಯ ಜನರ ಜಾತಕದಲ್ಲಿ ವಿಷ್ಣುಪ್ರಿಯ ಶೋಭನಾ ಯೋಗ! ಹಣದ ಸುರಿಮಳೆ, ಕೋಟ್ಯಾಧಿಪತಿ ಭಾಗ್ಯ
ಟೀಂ ಇಂಡಿಯಾ ಪರ ಕೇವಲ ಮೂರು ODI ಪಂದ್ಯಗಳನ್ನು ಆಡಿರುವ ಸೌರಭ್ ತಿವಾರಿಯನ್ನು ಯಾವೊಬ್ಬ ಬೌಲರ್ ಕೂಡ ಔಟ್ ಮಾಡಲು ಸಾಧ್ಯವಾಗಿಲ್ಲ. ಆಯ್ಕೆಯಾದ ಮೂರು ODI ಪಂದ್ಯಗಳಲ್ಲಿ ಆಡಿದ್ದು ಎರಡು ಇನ್ನಿಂಗ್ಸ್ ಮಾತ್ರ.
ಸೌರಭ್ ತಿವಾರಿ:
ಸೌರಭ್ ತಿವಾರಿ ಅಂತರಾಷ್ಟ್ರೀಯ ಕ್ರಿಕೆಟ್ ಪದಾರ್ಪಣೆ ಮಾಡಿದ ಸಂದರ್ಭದಲ್ಲಿ ಅವರನ್ನು ಧೋನಿಯ ತದ್ರೂಪಿ ಎಂದು ಕರೆಯಲಾಗುತ್ತಿತ್ತು. ಸೌರಭ್ ತಿವಾರಿ ಅವರ ಉದ್ದನೆಯ ಕೂದಲನ್ನು ನೋಡಿದ ಜನರು ಅವರನ್ನು ಧೋನಿಯೊಂದಿಗೆ ಹೋಲಿಸುತ್ತಿದ್ದರು. ಇನ್ನು ಸೌರಭ್ ತಿವಾರಿ ಐಪಿಎಲ್’ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದರು. 2010ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಕ್ರಿಕೆಟ್’ಗೆ ಪಾದಾರ್ಪಣೆ ಮಾಡಿದ ಸೌರಭ್ ತಿವಾರಿ ಅವರನ್ನು ವಿಶ್ವದ ಯಾವುದೇ ಬೌಲರ್ ಏಕದಿನ ಕ್ರಿಕೆಟ್’ನಲ್ಲಿ ಔಟಾಗಲು ಸಾಧ್ಯವಾಗಲಿಲ್ಲ.
ಫೈಜ್ ಫಜಲ್:
ಫೈಜ್ ಫಜಲ್ ದೇಶಿಯ ಕ್ರಿಕೆಟ್’ನಲ್ಲಿ ತಮ್ಮ ಪ್ರದರ್ಶನದಿಂದ ಎಲ್ಲರ ಗಮನ ಸೆಳೆದಿದ್ದರು ಮತ್ತು ಟೀಂ ಇಂಡಿಯಾದಲ್ಲಿ ಅವರಿಗೆ ಅವಕಾಶ ನೀಡಲಾಗಿತ್ತು. ಆದರೆ ಈ ಆಟಗಾರ ಟೀಂ ಇಂಡಿಯಾ ಪರ ಕೇವಲ ಒಂದು ಏಕದಿನ ಪಂದ್ಯವನ್ನು ಆಡಿದ್ದಾರೆ. 2016ರಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಫೈಜ್ ಫಜಲ್ ಜಿಂಬಾಬ್ವೆ ವಿರುದ್ಧ 55 ರನ್’ಗಳ ಅಜೇಯ ಇನ್ನಿಂಗ್ಸ್ ಆಡಿದ್ದರು. ಈ ಅದ್ಭುತ ಅರ್ಧಶತಕದ ನಂತರವೂ ಅವರನ್ನು ತಂಡದಿಂದ ಕೈಬಿಡಲಾಗಿತ್ತು.
ಇದನ್ನೂ ಓದಿ: 6 ಎಸೆತಕ್ಕೆ 6 ವಿಕೆಟ್ ಕಬಳಿಸಿದ್ದ 42ರ ಹರೆಯದ ದಿಗ್ಗಜ ಆಲ್’ರೌಂಡರ್ ಕ್ರಿಕೆಟ್ ಲೋಕಕ್ಕೆ ನಿವೃತ್ತಿ
ಭರತ್ ರೆಡ್ಡಿ:
ಇಂದಿನ ಯುವ ಜನರಿಗೆ ಭರತ್ ರೆಡ್ಡಿ ಹೆಸರು ಗೊತ್ತಿಲ್ಲದಿರಬಹುದು, ಆದರೆ ಈ ಆಟಗಾರ ಭಾರತಕ್ಕಾಗಿ ಕೇವಲ ಮೂರು ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಭರತ್ ರೆಡ್ಡಿ ಅವರು 1978 ರಿಂದ 1981 ರವರೆಗೆ ಭಾರತಕ್ಕಾಗಿ ಮೂರು ODIಗಳನ್ನು ಆಡಿದ್ದರು, ಅದರಲ್ಲಿ ಅವರು ಎರಡು ಬಾರಿ ಬ್ಯಾಟಿಂಗ್ ಮಾಡಲು ಅವಕಾಶವನ್ನು ಪಡೆದಿದ್ದು, ಎರಡೂ ಬಾರಿ ಅಜೇಯರಾಗಿ ಉಳಿದಿದ್ದರು. ಇದಾದ ಬಳಿಕ ಭರತ್ ರೆಡ್ಡಿ ಅವರನ್ನೂ ಟೀಂ ಇಂಡಿಯಾದಿಂದ ಕೈಬಿಡಲಾಗಿದ್ದು, ಅವರ ವೃತ್ತಿಜೀವನವೂ ದುಃಖದ ಅಂತ್ಯ ಕಂಡಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ