IPL 2022: ಇಂದಿನಿಂದ ಐಪಿಎಲ್ ಹಂಗಾಮ; ಉದ್ಘಾಟನಾ ಪಂದ್ಯಕ್ಕೆ ಕೌಂಟ್ಡೌನ್
ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ.
ನವದೆಹಲಿ: ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದ ಬಹುನಿರೀಕ್ಷಿತ ಐಪಿಎಲ್ ಪಂದ್ಯಾವಳಿಗೆ ಕ್ಷಣಗಣನೆ ಶುರುವಾಗಿದೆ. ಇಂದಿನಿಂದ(ಮಾ.26) ಚುಟುಕು ಕ್ರಿಕೆಟ್ ನ ಅಬ್ಬರ ಶುರುವಾಗಲಿದ್ದು, 15ನೇ ಆವೃತ್ತಿಯ ಉದ್ಘಾಟನಾ ಪಂದ್ಯ ಇಂದು ಸಂಜೆ 7.30ಕ್ಕೆ ಮುಂಬೈನ ವಾಂಖೆಡೆ ಕ್ರೀಡಾಂಗಣ(Wankhede Stadium Mumbai)ದಲ್ಲಿ ನಡೆಯಲಿದೆ.
ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್(CSK vs KKR) ತಂಡಗಳು ಮುಖಾಮುಖಿಯಾಗಲಿವೆ. ಇದುವರೆಗೆ ನಡೆದಿರುವ 14 ಟೂರ್ನಿಗಳಲ್ಲಿ ಚೆನ್ನೈ 4 ಬಾರಿ ಐಪಿಎಲ್ ಟ್ರೋಫಿ ಎತ್ತಿಹಿಡಿದಿದ್ದರೆ, ಕೋಲ್ಕತ್ತಾ 2 ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಐಪಿಎಲ್ ಶುರುವಾಗುವ ಮುನ್ನವೇ ಚೆನ್ನೈ ತಂಡದ ನಾಯಕತ್ವಕ್ಕೆ ಎಂ.ಎಸ್.ಧೋನಿ ಗುಡ್ ಬೈ ಹೇಳಿದ್ದು ಕೋಟ್ಯಂತರ ಅಭಿಮಾನಿಗಳಿಗೆ ನೋವುಂಟು ಮಾಡಿದೆ. ಹೀಗಾಗಿ CSK ತಂಡದ ಜವಾಬ್ದಾರಿ ರವೀಂದ್ರ ಜಡೇಜಾ(Ravindra Jadeja) ಹೆಗಲೇರಿದೆ.
IPL 2022: ಎಂ.ಎಸ್.ಧೋನಿ CSK ನಾಯಕತ್ವ ತೊರೆಯಲು ಕಾರಣವೇನು..?
ಈ ಬಾರಿಯ ಐಪಿಎಲ್ ಟೂರ್ನಿ(ndian Premier League 2022)ಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. 2 ಹೊಸ ತಂಡಗಳು ಸೇರಿ ಒಟ್ಟು ತಂಡಗಳು ಟ್ರೋಫಿಗಾಗಿ ಸೆಣಸಾಡಲಿವೆ. ಚೆನ್ನೈ ತಂಡವನ್ನು ಜಡೇಜಾ ಮುನ್ನೆಡಿಸಿದರೆ, ಕೋಲ್ಕತ್ತಾ ತಂಡವನ್ನು ಶ್ರೇಯಸ್ ಅಯ್ಯರ್ ಮುನ್ನೆಡೆಸಲಿದ್ದಾರೆ. ಉಭಯ ತಂಡಗಳು ಬಲಿಷ್ಠವಾಗಿರುವುದರಿಂದ ಭರ್ಜರಿ ಪೈಪೋಟಿ ನಿರೀಕ್ಷಿಸಲಾಗಿದೆ. ಚುಟುಕು ಕ್ರಿಕೆಟ್ ನ ಪ್ರಾರಂಭಿಕ ಕದನದಲ್ಲಿ ವಿಜಯಲಕ್ಷ್ಮೀ ಯಾವ ತಂಡಕ್ಕೆ ಒಲಿಯಲಿದ್ದಾಳೆಂಬುದು ಕುತೂಹಲ ಮೂಡಿಸಿದೆ.
ಬೌಲಿಂಗ್ ಹಾಗೂ ಬ್ಯಾಟಿಂಗ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್(Chennai Super Kings)ಬಲಿಷ್ಠವಾಗಿದೆ. ಋತುರಾಜ್ ಗಾಯಕ್ವಾಡ್, ರಾಬಿನ್ ಉತ್ತಪ್ಪ, ಡೆವೊನ್ ಕಾನ್ವೇ, ಅಂಬಟಿ ರಾಯ್ಡು, ಶಿವಂ ದುಬೆ ಮುಂತಾದವರು ಚೆನ್ನೈ ಬ್ಯಾಟಿಂಗ್ ವಿಭಾಗಕ್ಕೆ ಬಲ ತುಂಬಲಿದ್ದಾರೆ. ಎಂ.ಎಸ್.ಧೋನಿಯವರ ಮಾರ್ಗದರ್ಶನವೂ ತಂಡಕ್ಕೆ ಸಿಗಲಿದೆ. ನಾಯಕನ ಜವಾಬವ್ದಾರಿ ವಹಿಸಿಕೊಂಡಿರುವ ರವೀಂದ್ರ ಜಡೇಜಾ ಮತ್ತು ಡ್ವೇನ್ ಬ್ರಾವೋ ಮುಂತಾದವರ ಆಲ್ ರೌಂಡರ್ ಪ್ರದರ್ಶನ ತಂಡಕ್ಕೆ ಸಹಕಾರಿಯಾಗಲಿದೆ. ಅದೇ ರೀತಿ CSK ಬೌಲಿಂಗ್ ಪಡೆ ಕೂಡ ಬಲಿಷ್ಠವಾಗಿದ್ದು, ಎದುರಾಳಿ ತಂಡಕ್ಕೆ ಮಣ್ಣುಮುಕ್ಕಿಸುವ ಸಾಮರ್ಥ್ಯವನ್ನು ಹೊಂದಿದೆ.
Kolkata Knight Riders) ಕೂಡ ಬಲಿಷ್ಠ ತಂಡವಾಗಿದೆ. 13ನೇ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕನಾಗಿ ತಂಡವನ್ನು ಫೈನಲ್ ವರೆಗೂ ತೆಗೆದುಕೊಂಡು ಹೋಗಿದ್ದ ಶ್ರೇಯಸ್ ಅಯ್ಯರ್(Shreyas Iyer) ಅವರು ಈ ಬಾರಿ ಕೋಲ್ಕತ್ತಾ ಕ್ಯಾಪ್ಟನ್ ಆಗಿದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಬಲಿಷ್ಠವಾಗಿರುವ ಕೋಲ್ಕತ್ತಾ ಕೂಡ ಬಲಿಷ್ಠ ತಂಡಗಳಿಗೆ ಮಣ್ಣುಮುಕ್ಕಿಸಿ ಕಳೆದ ಋತುವಿನಲ್ಲಿ ಫೈನಲ್ ಪ್ರವೇಶೀಸಿತ್ತು. ಈ ಬಾರಿಯೂ ತಂಡದ ಮೇಲೆ ದೊಡ್ಡ ನಿರೀಕ್ಷೆಗಳಿವೆ. ಚೆನ್ನೈ ತಂಡಕ್ಕೆ ಎಲ್ಲ ವಿಭಾಗಗಳಲ್ಲಿಯೂ ಟಕ್ಕರ್ ಕೊಡುವಷ್ಟು ಕೋಲ್ಕತ್ತಾ ಸಮರ್ಥವಾಗಿದೆ ಎಂದೇ ಹೇಳಬಹುದು.
ಇದನ್ನೂ ಓದಿ: RCB ಮಾಜಿ ನಾಯಕನಿಗೆ ಆಲ್ ದಿ ಬೆಸ್ಟ್ ಹೇಳಿದ ಡಿಂಗ್ ಡಾಂಗ್..!
ಎರಡೂ ತಂಡಗಳ ಸ್ಕ್ವಾಡ್ ಹೀಗಿದೆ ನೋಡಿ...
ಕೋಲ್ಕತ್ತಾ ನೈಟ್ ರೈಡರ್ಸ್: ಶ್ರೇಯಸ್ ಅಯ್ಯರ್ (ನಾಯಕ), ಸ್ಯಾಮ್ ಬಿಲ್ಲಿಂಗ್ಸ್ (ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ಅಜಿಂಕ್ಯ ರಹಾನೆ, ನಿತೀಶ್ ರಾಣಾ, ಆಂಡ್ರೆ ರಸೆಲ್, ಸುನಿಲ್ ನರೈನ್, ಚಾಮಿಕಾ ಕರುಣಾರತ್ನೆ, ಶಿವಂ ಮಾವಿ, ವರುಣ್ ಚಕ್ರವರ್ತಿ, ಉಮೇಶ್ ಯಾದವ್, ರಸಿಕ್ ಜಬಿಸನ್, ಶೆಲ್ಡನ್ ಜಬಿಸನ್, ಬಾಬಾ ಇಂದ್ರಜಿತ್, ರಿಂಕು ಸಿಂಗ್, ಟಿಮ್ ಸೌಥಿ, ಅನುಕುಲ್ ರಾಯ್, ಪ್ರಥಮ್ ಸಿಂಗ್, ಅಭಿಜೀತ್ ತೋಮರ್, ಅಮನ್ ಹಕೀಮ್ ಖಾನ್, ಅಶೋಕ್ ಶರ್ಮಾ, ರಮೇಶ್ ಕುಮಾರ್
ಚೆನ್ನೈ ಸೂಪರ್ ಕಿಂಗ್ಸ್: ರವೀಂದ್ರ ಜಡೇಜಾ (ನಾಯಕ), ಎಂ.ಎಸ್.ಧೋನಿ (ವಿಕೆಟ್ ಕೀಪರ್), ಋತುರಾಜ್ ಗಾಯಕ್ವಾಡ್, ರಾಬಿನ್ ಉತ್ತಪ್ಪ, ಡೆವೊನ್ ಕಾನ್ವೇ, ಅಂಬಟಿ ರಾಯುಡು, ಶಿವಂ ದುಬೆ, ಡ್ವೇನ್ ಬ್ರಾವೋ, ಕ್ರಿಸ್ ಜೋರ್ಡಾನ್, ರಾಜವರ್ಧನ್ ಹಂಗರ್ಗೇಕರ್, ಮಹೇಶ್ ತೀಕ್ಷಣ, ಆಡಮ್ ಮಿಲ್ನೆ, ಮಿಚೆಲ್ ಸ್ಯಾಂಟ್ನರ್, ತುಷಾರ್ ದೇಶ್‌ಪಾಂಡೆ , ಎನ್.ಜಗದೀಸನ್, ಸುಭ್ರಾಂಶು ಸೇನಾಪತಿ, ಪ್ರಶಾಂತ್ ಸೋಲಂಕಿ, ಮುಖೇಶ್ ಚೌಧರಿ, ಕೆ ಎಂ ಆಸಿಫ್, ಸಿಮರ್ಜೀತ್ ಸಿಂಗ್, ಭಗತ್ ವರ್ಮಾ
ಐಪಿಎಲ್ ಪಂದ್ಯ: 01, ಉದ್ಘಾಟನಾ ಪಂದ್ಯ
ಚೆನ್ನೈ ಸೂಪರ್ ಕಿಂಗ್ಸ್ vs ಕೋಲ್ಕತ್ತಾ ನೈಟ್ ರೈಡರ್ಸ್
ದಿನಾಂಕ: ಮಾರ್ಚ್ 26, ಶನಿವಾರ
ಸ್ಥಳ: ಮುಂಬೈ ವಾಂಖೆಡೆ ಕ್ರೀಡಾಂಗಣ
ಸಮಯ: ಸಂಜೆ 7.30
=================================================================================================
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.