CWG 2022: ಫೈನಲ್‌ನಲ್ಲಿ ಪಾಕಿಸ್ತಾನದ ಕುಸ್ತಿಪಟುವನ್ನು ಮಣಿಸಿ ಚಿನ್ನ ಗೆದ್ದ ನವೀನ್..!
ಕಾಮನ್ವೆಲ್ತ್ ಗೇಮ್ಸ್ 2022ರ ಪದಕ ಪಟ್ಟಿಯಲ್ಲಿ ಭಾರತ 5ನೇ ಸ್ಥಾನದಲ್ಲಿದೆ. 13 ಚಿನ್ನ, 11 ಬೆಳ್ಳಿ ಮತ್ತು 16 ಕಂಚಿನ ಪದಕ ಗೆಲ್ಲುವ ಮೂಲಕ ಭಾರತ ಒಟ್ಟು 40 ಪದಕಗಳನ್ನು ತನ್ನದಾಗಿಸಿಕೊಂಡಿದೆ.
ನವದೆಹಲಿ: ಕಾಮನ್‌ವೆಲ್ತ್ ಗೇಮ್ಸ್ 2022ರ 9ನೇ ದಿನದಂದು ಭಾರತೀಯ ಆಟಗಾರರ ಅಬ್ಬರದ ಪ್ರದರ್ಶನವಿತ್ತು. ಕುಸ್ತಿಪಟು ನವೀನ್ ಕೂಡ ಕುಸ್ತಿಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ನವೀನ್ ಫ್ರೀಸ್ಟೈಲ್ 74 ಕೆಜಿ ವಿಭಾಗದಲ್ಲಿ ಪಾಕಿಸ್ತಾನದ ಮುಹಮ್ಮದ್ ಶರೀಫ್ ತಾಹಿರ್ ಅವರನ್ನು 9-0 ಅಂತರದಿಂದ ಸೋಲಿಸಿ ಚಿನ್ನಕ್ಕೆ ಮುತ್ತಿಕ್ಕಿದರು.
9ನೇ ದಿನ ಪದಕ ಬೇಟೆ
9ನೇ ದಿನ ಭಾರತಕ್ಕೆ ಪ್ರಿಯಾಂಕಾ ಮೊದಲ ಪದಕ ದಕ್ಕಿಸಿಕೊಟ್ಟರು. ಬಳಿಕ ಭಾರತೀಯರ ಪದಕ ಬೇಟೆ ಶುರುವಾಯಿತು. 3000 ಮೀಟರ್ ಓಟದ ಸ್ಪರ್ಧೆಯಲ್ಲಿ ಅವಿನಾಶ್ ಸಾಬ್ಲೆ ಬೆಳ್ಳಿ ಪದಕ ಗೆದ್ದಿದ್ದಾರೆ. ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ರವಿ ದಹಿಯಾ ಮತ್ತು ಅನುಭವಿ ವಿನೇಶ್ ಫೋಗಟ್ ಅವರು ಕುಸ್ತಿ ಸ್ಪರ್ಧೆಯಲ್ಲಿ ನಿರೀಕ್ಷೆಯಂತೆ ಪ್ರದರ್ಶನ ನೀಡುವ ಮೂಲಕ ಭಾರತಕ್ಕೆ ಚಿನ್ನ ತಂದುಕೊಟ್ಟರು. ಇದಲ್ಲದೆ ಪೂಜಾ ಗೆಹ್ಲೋಟ್ ಕಂಚಿನ ಪದಕವನ್ನು ಗೆದ್ದು ಸಂಭ್ರಮಿಸಿದರು.
ಇದನ್ನೂ ಓದಿ: Ravi Dahiya Wins Gold: ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ ತಂದುಕೊಟ್ಟ ರವಿ ದಹಿಯಾ
ಚಿನ್ನದ ಪದಕ ಗೆದ್ದ ರವಿ ದಹಿಯಾ
ಪುರುಷರ 57 ಕೆಜಿ ವಿಭಾಗದ ಫೈನಲ್‌ನಲ್ಲಿ ದಹಿಯಾ 10-0ಯಿಂದ ನೈಜೀರಿಯಾದ ಅಬಿಕೆವೆನಿಮೊ ವೆಲ್ಸೆನ್ ಅವರನ್ನು ತಾಂತ್ರಿಕ ಶ್ರೇಷ್ಠತೆಯ ಮೇಲೆ ಸೋಲಿಸಿದರು. ಇದಕ್ಕೂ ಮುನ್ನ ಅವರು ತಾಂತ್ರಿಕ ಶ್ರೇಷ್ಠತೆಯ ಆಧಾರದ ಮೇಲೆ ನ್ಯೂಜಿಲೆಂಡ್‌ನ ಸೂರಜ್ ಸಿಂಗ್ ಮತ್ತು ಪಾಕಿಸ್ತಾನದ ಅಸದ್ ಅಲಿ ಅವರನ್ನು ಸೋಲಿಸಿದ್ದರು.
ವಿನೇಶ್ ಫೋಗಟ್ ಮೇಲುಗೈ
ಅದೇ ರೀತಿ ಟೋಕಿಯೊ ಒಲಿಂಪಿಕ್ಸ್‌ನ ವೈಫಲ್ಯ, ಹಿಂದಿನ ಮಾನಸಿಕ ಮತ್ತು ದೈಹಿಕ ಹೋರಾಟವನ್ನು ಬದಿಗಿಟ್ಟು ಕಣಕ್ಕಿಳಿದ ವಿನೇಶ್ ಫೋಗಟ್ ಮಹಿಳೆಯರ 53 ಕೆಜಿ ವಿಭಾಗದಲ್ಲಿ ಶ್ರೀಲಂಕಾದ ಆಟಗಾರ್ತಿಯನ್ನು ಕೆಲವೇ ಸೆಕೆಂಡುಗಳಲ್ಲಿ ಸೋಲಿಸುವ ಮೂಲಕ 4-0 ಗೆಲುವು ದಾಖಲಿಸಿದರು. ವಿಶ್ವ ಚಾಂಪಿಯನ್‌ಶಿಪ್ ಕಂಚಿನ ಪದಕ ವಿಜೇತೆ ಕೆನಡಾದ ಸಮಂತಾ ಲೀ ಸ್ಟೀವರ್ಟ್ ವಿರುದ್ಧ ವಿನೇಶ್ ಅವರ ಮೊದಲ ಪಂದ್ಯ ಕಠಿಣವಾಗಿತ್ತು. ಆದರೆ ಅವರು ಕೇವಲ 36 ಸೆಕೆಂಡುಗಳಲ್ಲಿ ಗೆಲುವು ಸಾಧಿಸಿದರು. ವಿನೇಶ್ ನಂತರ ನೈಜೀರಿಯಾದ ಮರ್ಸಿ ಬೊಲಾಫುನೊಲುವಾ ಅಡೆಕುರೊಯೆ ಅವರನ್ನು ಎದುರಿಸಿದರು. ಅವರ ಕಠಿಣ ಸವಾಲನ್ನು ಭಾರತೀಯ ಕುಸ್ತಿಪಟು ಉತ್ತಮವಾಗಿ ಎದುರಿಸುವ ಮೂಲಕ ಜಯ ಸಾಧಿಸಿದರು.
ಇದನ್ನೂ ಓದಿ: CWG 2022: ಸತತ ಮೂರನೇ ಬಾರಿಗೆ ಚಿನ್ನ ಗೆದ್ದು ಇತಿಹಾಸ ಸೃಷ್ಟಿಸಿದ ವಿನೆಸ್ ಫೋಗಾಟ್
ಪೂಜಾ ಗೆಹ್ಲೋಟ್‍ಗೆ 'ಕಂಚಿನ' ಹಾರ
ಮಹಿಳೆಯರ 50 ಕೆಜಿ ವಿಭಾಗದಲ್ಲಿ ಪೂಜಾ ಗೆಹ್ಲೋಟ್ ಕಂಚಿನ ಪದಕದ ಹೋರಾಟದಲ್ಲಿ ತಾಂತ್ರಿಕ ಶ್ರೇಷ್ಠತೆಯ ಮೇಲೆ 12-2 ರಿಂದ ಸ್ಕಾಟ್ಲೆಂಡ್‌ನ ಕ್ರಿಸ್ಟೆಲ್ಲೆ ಎಲ್ ಅವರನ್ನು ಸೋಲಿಸಿದರು. ಕ್ಯಾಮರೂನ್‌ನ ರೆಬೆಕಾ ಆಂಡೊಲೊ ಮುವಾಂಬೊ ಮೊದಲ ಪಂದ್ಯದಲ್ಲಿ ಅದೇ ಎದುರಾಳಿಯನ್ನು ಸೋಲಿಸಿದ ನಂತರ ವಾಕ್‌ಓವರ್ ಪಡೆದರು. ಆದಾಗ್ಯೂ ಅವರು ಸೆಮಿಫೈನಲ್‌ನಲ್ಲಿ ಕೆನಡಾದ ಮ್ಯಾಡಿಸನ್ ಬಿಯಾಂಕಾ ಪಾರ್ಕ್ಸ್ ವಿರುದ್ಧ ಸೋಲು ಕಂಡು ನಿರಾಸೆ ಅನುಭವಿಸಿದ್ದರು.
ಪದಕ ಪಟ್ಟಿಯಲ್ಲಿ ಭಾರತಕ್ಕೆ 5ನೇ ಸ್ಥಾನ
ಇನ್ನು ಕಾಮನ್‌ವೆಲ್ತ್ ಗೇಮ್ಸ್ 2022ರ ಪದಕ ಪಟ್ಟಿಯಲ್ಲಿ ಭಾರತ ಸದ್ಯ 5ನೇ ಸ್ಥಾನದಲ್ಲಿದೆ. 13 ಚಿನ್ನ, 11 ಬೆಳ್ಳಿ ಮತ್ತು 16 ಕಂಚಿನ ಪದಕ ಗೆಲ್ಲುವ ಮೂಲಕ ಭಾರತ ಒಟ್ಟು 40 ಪದಕಗಳನ್ನು ತನ್ನದಾಗಿಸಿಕೊಂಡಿದೆ. 59 ಚಿನ್ನ, 46 ಬೆಳ್ಳಿ ಮತ್ತು 50 ಕಂಚು ಸೇರಿದಂತೆ ಒಟ್ಟ 155 ಪದಕಗಳನ್ನು ಗೆದ್ದಿರುವ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.