Ravi Dahiya Wins Gold: ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ ತಂದುಕೊಟ್ಟ ರವಿ ದಹಿಯಾ

Ravi Dahiya Wins Gold: ಭಾರತದ ಸ್ಟಾರ್ ಕ್ರೀಡಾ ಕುಸ್ತಿಪಟು ರವಿಕುಮಾರ್ ದಹಿಯಾ ಮೊಟ್ಟಮೊದಲಬಾರಿಗೆ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ,   

Written by - Nitin Tabib | Last Updated : Aug 6, 2022, 10:34 PM IST
  • ಕಾಮನ್ವೆಲ್ತ್ ಕ್ರೀಡಾಕೂಟ 2022
  • ಭಾರತಕ್ಕೆ 10ನೇ ಚಿನ್ನದ ಪದಕ ತಂದು ಕೊಟ್ಟ ರವಿ ದಹಿಯಾ
  • ಕುಸ್ತಿಯಲ್ಲಿ ಇದು ಭಾರತದ 8ನೇ ಪದಕ
Ravi Dahiya Wins Gold: ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ ತಂದುಕೊಟ್ಟ ರವಿ ದಹಿಯಾ title=
Commonwealth Games 2022

Ravi Dahiya Wins Gold in CWG 2022: ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ 2022 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಕುಸ್ತಿಪಟು ರವಿ ದಹಿಯಾ ಅದ್ಭುತ ಪ್ರದರ್ಶನ ತೋರಿದ್ದಾರೆ. ಅವರು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ತಮ್ಮ ಮೊದಲ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ. ರವಿ ದಹಿಯಾ ಮೊದಲ ಬಾರಿಗೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾಗವಹಿಸಿದ್ದಾರೆ ಎಂಬುದು ಇಲ್ಲಿ ಗಮನಾರ್ಹ.

ಇದನ್ನೂ ಓದಿ-CWG 2022: ಕುಸ್ತಿಯಲ್ಲಿ ಕಂಚಿನ ಪದಕ ತನ್ನದಾಗಿಸಿಕೊಂಡ ಪೂಜಾ ಗೆಹಲೋತ್, ಭಾರತಕ್ಕೆ 31ನೇ ಪದಕ

ಭಾರತದ ಸ್ಟಾರ್ ಕುಸ್ತಿಪಟು ರವಿಕುಮಾರ್ ದಹಿಯಾ ಮೊದಲ ಬಾರಿಗೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದಿದ್ದಾರೆ ಮತ್ತು ಇದು ಅವರ ಮೊದಲ ಚಿನ್ನದ ಪದಕವಾಗಿದೆ. ರವಿ ಅವರು ಫ್ರೀಸ್ಟೈಲ್ 57 ಕೆಜಿ ವಿಭಾಗದ ಫೈನಲ್‌ನಲ್ಲಿ ನೈಜೀರಿಯಾದ ಅಬಿಕೆವೆನಿಮೊ ವಿಲ್ಸನ್ ಅವರನ್ನು 10-0 ಅಂತರದಿಂದ ಸೋಲಿಸಿದ್ದಾರೆ. ಇದು ಕುಸ್ತಿಯಲ್ಲಿ ಭಾರತದ ನಾಲ್ಕನೇ ಚಿನ್ನದ ಪದಕವಾಗಿದೆ. ಇದು ಕುಸ್ತಿಯಲ್ಲಿ ಭಾರತಕ್ಕೆ ಎಂಟನೆ ಪದಕವಾಗಿದೆ.

ಇದನ್ನೂ ಓದಿ-CWG 2022: ಭಾರತೀಯ ಪುರುಷರ ತಂಡದ ಕಮಾಲ್ ! ಲಾನ್ ಬೌಲ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಬೆಳ್ಳಿ ಪದಕ

ಪೂಜಾ ಗೆಹ್ಲೋಟ್ ಕಂಚಿನ ಪದಕ ಗೆದ್ದಿದ್ದಾರೆ
ಇದಕ್ಕೂ ಮೊದಲು ಭಾರತೀಯ ಕುಸ್ತಿಪಟು ಪೂಜಾ ಗೆಹ್ಲೋಟ್ ಕಂಚಿನ ಪದಕ ಗೆದ್ದಿದ್ದಾರೆ. ಫ್ರೀಸ್ಟೈಲ್ 50 ಕೆಜಿ ವಿಭಾಗದಲ್ಲಿ ಅವರು ಕಂಚಿನ ಪದಕ ತನ್ನದಾಗಿಸಿಕೊಂಡಿದ್ದಾರೆ. ಪೂಜಾ 12-2 ಅಂಕಗಳ ಮೂಲಕ ಸ್ಕಾಟ್ಲೆಂಡ್‌ನ ಕ್ರಿಸ್ಟೆಲ್ಲೆ ಲೆಮೊಫಾಕ್ ಅವರನ್ನು ಸೋಲಿಸಿದರು. ಇದು ಕುಸ್ತಿಯಲ್ಲಿ ಭಾರತಕ್ಕೆ ಏಳನೇ ಪದಕವಾಗಿತ್ತು. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News