World Cup : ವಿಶ್ವಕಪ್ 2023 ಟ್ರೋಫಿ ಗೆಲ್ಲಲು ಸಹಾಯವಾಗಬಲ್ಲ ಆಟಗಾರ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದಾರೆ.  ಭಾರತ ತಂಡ ಅಕ್ಟೋಬರ್ 8 ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ವಿಶ್ವಕಪ್‌ನಲ್ಲಿ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಐಸಿಸಿ ವಿಶ್ವಕಪ್ 2023 ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಅಕ್ಟೋಬರ್ 14 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. 


COMMERCIAL BREAK
SCROLL TO CONTINUE READING

ಯುವರಾಜ್‌ನಂತಹ  ಸ್ಪೋಟಕ ಆಟಗಾರ : 
ಟೀಂ ಇಂಡಿಯಾದ ಈ ಸ್ಪೋಟಕ ಆಟಗಾರ ಈ ಬಾರಿಯ ವಿಶ್ವಕಪ್‌ನಲ್ಲಿ  ರನ್ ಗಳ ಮಳೆ ಸುರಿಸಬಹುದು ಎಂದು ಅಂದಾಜಿಸಲಾಗಿದೆ. ಈ ಬ್ಯಾಟ್ಸ್‌ಮನ್  ಮೈದಾನಕ್ಕೆ ಇಳಿದ ಸಂದರ್ಭದಲ್ಲಿ ಕೈ ಚೆಲ್ಲುವ ಪಂದ್ಯಗಳನ್ನು ಕೂಡಾ ಗೆಲುವಿನತ್ತ ಮುಖ ಮಾಡಿಸಿದ್ದಾರೆ. ಈ ಆಟಗಾರನ ರೂಪದಲ್ಲಿ ಟೀಂ ಇಂಡಿಯಾಗೆ ಹೊಸ ನಂಬರ್-6 ಬ್ಯಾಟ್ಸ್‌ಮನ್ ಸಿಕ್ಕಂತಾಗಿದೆ. ಈ ಆಟಗಾರ ಈಗ ಟೀಂ ಇಂಡಿಯಾದ ನೆಚ್ಚಿನ ಆಟಗಾರ.  ಇದಕ್ಕೆ ಕಾರಣ ಈ ಬ್ಯಾಟ್ಸ್‌ಮನ್‌ನ ಅತ್ಯುತ್ತಮ ಪ್ರದರ್ಶನ. ಹೌದು ಇದೀಗ ಟೀಂ ಇಂಡಿಯಾದ 6ನೇ ನಂಬರ್ ಬ್ಯಾಟ್ಸ್‌ಮನ್‌ ಆಗಿ ಸೂರ್ಯಕುಮಾರ್ ಯಾದವ್  ಸೇರ್ಪಡೆಯಾಗಿದ್ದಾರೆ. 


ಇದನ್ನೂ ಓದಿ : IND VS AUS ಸರಣಿಯ ನಡುವೆ ಶಾಕಿಂಗ್ ನ್ಯೂಸ್, ಈ ಆಟಗಾರನಿಗೆ ಎರಡು ಪಂದ್ಯಗಳಿಗೆ ನಿಷೇಧ


ವಿಶ್ವಕಪ್ ಟ್ರೋಫಿ ಗೆಲ್ಲುವ ಹಾದಿ ಸುಗಮ : 
ಬಿರುಸಿನ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಇದೀಗ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರ ನೆಚ್ಚಿನ ಆಟಗಾರ ಎನಿಸಿಕೊಂಡಿದ್ದಾರೆ. 2023ರ ವಿಶ್ವಕಪ್‌ಗೆ ಸೂರ್ಯಕುಮಾರ್ ಯಾದವ್ ಬಹಳ ಮುಖ್ಯ. ಆಸ್ಟ್ರೇಲಿಯ ವಿರುದ್ಧ ಇಂದೋರ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅವರ ಬಿರುಸಿನ ಫಾರ್ಮ್  ಎಲ್ಲರ ಗಮನ ಸೆಳೆದಿತ್ತು. ಸೂರ್ಯಕುಮಾರ್ ಯಾದವ್ 37 ಎಸೆತಗಳಲ್ಲಿ 6 ಬೌಂಡರಿ ಮತ್ತು 6 ಸಿಕ್ಸರ್ ಬಾರಿಸುವ ಮೂಲಕ 72 ರನ್ ಗಳಿಸಿ ಅಜೇಯವಾಗಿ ಉಳಿದಿದ್ದರು. ಸೂರ್ಯಕುಮಾರ್ ಯಾದವ್ ಈ ಕಿಲ್ಲರ್ ಫಾರ್ಮ್‌  ಟೀಂ ಇಂಡಿಯಾ ಪಾಲಿಗೆ ಪ್ಲಸ್ ಪಾಯಿಂಟ್. 


ಟೀಂ ಇಂಡಿಯಾಗೆ ಬಿಗ್ ನ್ಯೂಸ್ :
2011ರ ವಿಶ್ವಕಪ್‌ನಲ್ಲಿ ಯುವರಾಜ್ ಸಿಂಗ್ 28 ವರ್ಷಗಳ ನಂತರ ಭಾರತವನ್ನು ಚಾಂಪಿಯನ್ ಮಾಡಿದಂತೆ ಸೂರ್ಯಕುಮಾರ್ ಯಾದವ್ 2023ರ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾಕ್ಕೆ ಟ್ರೋಫಿಯನ್ನು  ತಂದು ಕೊಡುವಲ್ಲಿ ಮಹತ್ತರ ಪಾತ್ರ ವಹಿಸಬಹುದು. ODI ಕ್ರಿಕೆಟ್ ಮತ್ತು T-20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ, ಸೂರ್ಯಕುಮಾರ್ ಯಾದವ್ ತಮ್ಮದೇ ಆದ ಸ್ಫೋಟಕ ಬ್ಯಾಟಿಂಗ್‌ನಿಂದ ಟೀಮ್ ಇಂಡಿಯಾಕ್ಕೆ ಅನೇಕ ಪಂದ್ಯಗಳನ್ನು ಗೆದ್ದು ಕೊಟ್ಟಿದ್ದಾರೆ. 


ಇದನ್ನೂ ಓದಿ : 12 ವರ್ಷಗಳ ನಂತರ ವಿಶ್ವಕಪ್ ನಲ್ಲಿ ವಿಜಯ ಪತಾಕೆ ಹಾರಿಸಲಿದೆಯಂತೆ ಭಾರತ ! ಯಾವ ಲೆಕ್ಕಾಚಾರದಲ್ಲಿ ಅನ್ನುವ ಮಾಹಿತಿ ಇಲ್ಲಿದೆ !


2023ರ ವಿಶ್ವಕಪ್‌ನ ಟ್ರಂಪ್ ಕಾರ್ಡ್ :  
ಟೀಂ ಇಂಡಿಯಾಕ್ಕೆ ಸೂರ್ಯಕುಮಾರ್ ಯಾದವ್ ಕೊಡುಗೆ ಬಹಳ ಮುಖ್ಯ. ಕಳೆದ ಕೆಲವು ವರ್ಷಗಳಲ್ಲಿ, ಸೂರ್ಯಕುಮಾರ್ ಯಾದವ್ ಟೀಂ ಇಂಡಿಯಾದ ಅತಿದೊಡ್ಡ ಮ್ಯಾಚ್ ವಿನ್ನರ್ ಎಂದು ಸಾಬೀತಾಗುವುದರಲ್ಲಿ ಸಂಶಯವಿಲ್ಲ. ಅವರು ಭಾರತೀಯ ಅಭಿಮಾನಿಗಳ ಹೃದಯದಲ್ಲಿ ತಮ್ಮದೇ ಆದ ವಿಶೇಷ ಸ್ಥಾನವನ್ನು ಹೊಂದಿದ್ದಾರೆ. ಅವರ ಬಿರುಸಿನ ಬ್ಯಾಟಿಂಗ್ ಬಗ್ಗೆ ಎಲ್ಲರಿಗೂ  ಪರಿಚಯವಿದೆ. ಸೂರ್ಯಕುಮಾರ್ ಯಾದವ್ ತಮ್ಮ ಪ್ರತಿಭೆಯ ಆಧಾರದ ಮೇಲೆ ಪ್ರಪಂಚದಾದ್ಯಂತ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=q9auZ2eqeZo
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.