12 ವರ್ಷಗಳ ನಂತರ ವಿಶ್ವಕಪ್ ನಲ್ಲಿ ವಿಜಯ ಪತಾಕೆ ಹಾರಿಸಲಿದೆಯಂತೆ ಭಾರತ ! ಯಾವ ಲೆಕ್ಕಾಚಾರದಲ್ಲಿ ಅನ್ನುವ ಮಾಹಿತಿ ಇಲ್ಲಿದೆ !

Indian Cricket Team:ವಿಶ್ವಕಪ್‌ಗೂ ಮುನ್ನ ಭಾರತ ಕ್ರಿಕೆಟ್ ತಂಡಕ್ಕೆ ಸಿಹಿ ಸುದ್ದಿಯೊಂದು ಸಿಕ್ಕಿದೆ.  12 ವರ್ಷಗಳ ನಂತರ ಭಾರತ ವಿಶ್ವಕಪ್ ನಲ್ಲಿ  ಗೆದ್ದು ಬೀಗಲಿದೆ ಎನ್ನುತ್ತಾರೆ ಕ್ರಿಕೆಟ್ ಪಂಡಿತರು. 

Written by - Ranjitha R K | Last Updated : Sep 26, 2023, 12:31 PM IST
  • ಈ ಬಾರಿ ಭಾರತ ಏಕದಿನ ವಿಶ್ವಕಪ್‌ನ ಆತಿಥ್ಯವನ್ನು ಪಡೆದುಕೊಂಡಿದೆ.
  • ಮೊದಲ ಬಾರಿಗೆ ಭಾರತ ಈ ಬೃಹತ್ ಟೂರ್ನಿಯನ್ನು ಆಯೋಜಿಸುತ್ತಿದೆ.
  • ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾ ನಂಬರ್-1
12 ವರ್ಷಗಳ ನಂತರ ವಿಶ್ವಕಪ್ ನಲ್ಲಿ ವಿಜಯ ಪತಾಕೆ ಹಾರಿಸಲಿದೆಯಂತೆ ಭಾರತ ! ಯಾವ ಲೆಕ್ಕಾಚಾರದಲ್ಲಿ ಅನ್ನುವ ಮಾಹಿತಿ  ಇಲ್ಲಿದೆ ! title=

Indian Cricket Team : ಈ ಬಾರಿ ಭಾರತ ಏಕದಿನ ವಿಶ್ವಕಪ್‌ನ ಆತಿಥ್ಯವನ್ನು ಪಡೆದುಕೊಂಡಿದೆ. 2011ರ ನಂತರ ಇದೇ ಮೊದಲ ಬಾರಿಗೆ ಭಾರತ ಈ ಬೃಹತ್ ಟೂರ್ನಿಯನ್ನು ಆಯೋಜಿಸುತ್ತಿದೆ. 2011 ರಲ್ಲಿ, ಭಾರತವು ಶ್ರೀಲಂಕಾವನ್ನು ಸೋಲಿಸುವ ಮೂಲಕ ಐಸಿಸಿ ಟ್ರೋಫಿಯನ್ನು ಗೆದ್ದುಕೊಂಡಿತ್ತು. ಇದಾದ ನಂತರ ಯಾವುದೇ ವಿಶ್ವಕಪ್ ಗೆಲುವು ಭಾರತಕ್ಕೆ ಸಾಧ್ಯವಾಗಲಿಲ್ಲ. ಇದೀಗ 12 ವರ್ಷಗಳ ನಂತರ  ಆ ವಿಜಯವನ್ನು ಪುನರಾವರ್ತಿಸುವ ಅವಕಾಶ  ಒದಗಿ ಬಂದಿದೆ. ಕೆಲವೊಂದು ಕಾಕತಾಳೀಯ ಕೂಡಾ ಇಲ್ಲಿ ತುಲನೆಯಾಗುತ್ತಿದೆ.   

ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾ ನಂಬರ್-1 : 
ವಿಶ್ವಕಪ್‌ಗೂ ಮುನ್ನ ಭಾರತ ಕ್ರಿಕೆಟ್ ತಂಡಕ್ಕೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಭಾರತ ನಂಬರ್-1  ಪಟ್ಟಕ್ಕೆ ಏರಿದೆ.  ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯ ಎರಡನೇ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ಈ  ಸಾಧನೆ ಮಾಡಿದೆ. ಇದರೊಂದಿಗೆ  ಕಾಕತಾಳೀಯವೊಂದು ತುಲನೆಯಾಗುತ್ತಿದೆ. ಈ ಕಾಕತಾಳೀಯದ ಆಧಾರದಲ್ಲಿ ಭಾರತ ಈ ಬಾರಿ ವಿಶ್ವಕಪ್ ಗೆಲ್ಲುತ್ತದೆ ಎನ್ನುತ್ತಿದ್ದಾರೆ ಕ್ರಿಕೆಟ್ ಅಭಿಮಾನಿಗಳು. 

ಇದನ್ನೂ ಓದಿ : World Cup 2023: ವಿಶ್ವಕಪ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಲಿವೆಯಂತೆ ಈ ನಾಲ್ಕು ತಂಡ- ಇರ್ಫಾನ್ ಪಠಾಣ್ ಭವಿಷ್ಯ

 ಏನಿದು ನಂಬಿಕೆ ? : 
ICC ODI ಶ್ರೇಯಾಂಕದಲ್ಲಿ ನಂಬರ್-1 ಆಗಿರುವ  ತಂಡವೇ ಕಳೆದ ಎರಡು ODI ವಿಶ್ವಕಪ್‌ಗಳಲ್ಲಿ  ಕಪ್ ಗೆ ಮುತ್ತಿಕ್ಕಿದೆ. ಆಸ್ಟ್ರೇಲಿಯಾ 2015ರ ವಿಶ್ವಕಪ್ ಗೆದ್ದಿತ್ತು. ಆ ಸಮಯದಲ್ಲಿ ಆಸ್ಟ್ರೇಲಿಯಾ ತಂಡವು ಐಸಿಸಿ ಶ್ರೇಯಾಂಕದಲ್ಲಿ ನಂಬರ್-1 ತಂಡವಾಗಿತ್ತು. ಇದರ ನಂತರ, 2019 ರಲ್ಲಿ ಕಪ್ ಗೆದ್ದ ಇಂಗ್ಲೆಂಡ್ ಐಸಿಸಿ ಶ್ರೇಯಾಂಕದಲ್ಲಿ ನಂಬರ್-1 ODI ತಂಡವಾಗಿತ್ತು. ಉಭಯ ತಂಡಗಳು ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಪ್ರಶಸ್ತಿ ಗೆದ್ದವು. ಹೀಗಾಗಿ ಈ ಬಾರಿ ಭಾರತ ತಂಡ ವಿಶ್ವ ಕಪ್ ಗೆದ್ದು ಬೀಗಲಿದೆ ಎನ್ನುವ ನಂಬಿಕೆ ಅಭಿಮಾನಿಗಳದ್ದು. 

ICC ಶ್ರೇಯಾಂಕಗಳು ಪ್ರಾರಂಭವಾದಾಗಿನಿಂದ, ICC  ರ್‍ಯಾಂಕಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿದ್ದ ತಂಡಗಳು 4 ಬಾರಿ ಪ್ರಶಸ್ತಿಯನ್ನು ಗೆದ್ದಿವೆ.  ಇದರಲ್ಲಿ ಆಸ್ಟ್ರೇಲಿಯಾ ಮೂರು ಬಾರಿ ಟ್ರೋಫಿ ಗೆದ್ದಿದೆ. ಆಸ್ಟ್ರೇಲಿಯಾ ತಂಡವು 2003, 2007 ಮತ್ತು 2015 ರಲ್ಲಿ ಚಾಂಪಿಯನ್ ಆಗಿದ್ದರೆ, 2019 ರಲ್ಲಿ ಒಮ್ಮೆ ಇಂಗ್ಲೆಂಡ್ ನಂಬರ್-1 ಆಗಿ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. 

ಇದನ್ನೂ ಓದಿ : ಮೂರು ಮಾದರಿಯಲ್ಲಿ ಟೀಂ ಇಂಡಿಯಾ ಮೋಡಿ : ಕೋಚ್ ದ್ರಾವಿಡ್ ನೇತೃತ್ವದಲ್ಲಿ ಭಾರತ ನಂ1.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=q9auZ2eqeZo

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News