Australia vs South Africa 2nd Test​: ಮೆಲ್ಬೋರ್ನ್‌ನಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಎರಡನೇ ದಿನವಾದ ಮಂಗಳವಾರ ಆಸ್ಟ್ರೇಲಿಯಾದ ಸ್ಫೋಟಕ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ದ್ವಿಶತಕ ಬಾರಿಸುವ ಮೂಲಕ ದೊಡ್ಡ ದಾಖಲೆ ನಿರ್ಮಿಸಿದ್ದಾರೆ. ಡೇವಿಡ್ ವಾರ್ನರ್ ಅವರು ತಮ್ಮ ಟೆಸ್ಟ್ ವೃತ್ತಿಜೀವನದ 100 ನೇ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದಾರೆ. ಇದರಲ್ಲಿ 254 ಎಸೆತಗಳಲ್ಲಿ 200 ರನ್ ಗಳಿಸಿದ್ದಾರೆ. ಡೇವಿಡ್ ವಾರ್ನರ್ ಅವರ ಇನ್ನಿಂಗ್ಸ್‌ನಲ್ಲಿ 16 ಬೌಂಡರಿ ಮತ್ತು 2 ಸಿಕ್ಸರ್‌ಗಳನ್ನು ಸಹ ಹೊಡೆದಿದ್ದಾರೆ. ಈ ಅವಧಿಯಲ್ಲಿ ಡೇವಿಡ್ ವಾರ್ನರ್ ಅವರ ಸ್ಟ್ರೈಕ್ ರೇಟ್ 78.74 ಆಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: KL Rahul : 'ಈಗ ಟೀಂ ಇಂಡಿಯಾದಿಂದ ಕೆಎಲ್ ರಾಹುಲ್ ಹೊರಗಿಡಿ'


ಆಸ್ಟ್ರೇಲಿಯಾದ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ತಮ್ಮ 100ನೇ ಟೆಸ್ಟ್ ಪಂದ್ಯದಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಡೇವಿಡ್ ವಾರ್ನರ್ ತಮ್ಮ 100ನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ ಮೊದಲ ಆಸ್ಟ್ರೇಲಿಯನ್ ಮತ್ತು ವಿಶ್ವದ ಎರಡನೇ ಬ್ಯಾಟ್ಸ್‌ಮನ್. ಮೂರು ವರ್ಷಗಳ ನಂತರ ಫಾರ್ಮ್‌ಗೆ ಮರಳಿದ ಡೇವಿಡ್ ವಾರ್ನರ್ 254 ಎಸೆತಗಳಲ್ಲಿ 200 ರನ್ ಗಳಿಸಿ ಬ್ಯಾಟ್‌ನಿಂದ ಬೆಂಕಿ ಉಗುಳಿದ್ದರು. ಡೇವಿಡ್ ವಾರ್ನರ್ ತಮ್ಮ ಅಬ್ಬರವನ್ನು ಇನ್ನಷ್ಟು ಮುಂದುವರಿಸಬಹುದಾಗಿದ್ದರೂ ಸಹ 200 ರನ್ ಗಳಿಸಿದ ನಂತರ ಗಾಯಗೊಂಡು ಪೆವಿಲಿಯನ್ ಗೆ ಮರಳಿದರು.


ಈ ಪಂದ್ಯದಲ್ಲಿ ಡೇವಿಡ್ ವಾರ್ನರ್ ಅವರು ದಕ್ಷಿಣ ಆಫ್ರಿಕಾದ ವೇಗದ ಬೌಲರ್‌ಗಳಾದ ಕಗಿಸೊ ರಬಾಡ, ಎನ್ರಿಕ್ ನೋರ್ಖಿನ್ಯಾ ಮತ್ತು ಲುಂಗಿ ಎನ್‌ಗಿಡಿ ಬೌಲಿಂಗ್ ಗಳನ್ನು ಎದುರಿಸಿದ್ದಾರೆ. ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಈ ಹಿಂದೆ ಜನವರಿ 2021 ರಲ್ಲಿ ತಮ್ಮ ಕೊನೆಯ ಟೆಸ್ಟ್ ಶತಕವನ್ನು ಗಳಿಸಿದ್ದರು ಮತ್ತು ಈಗ 2022 ರಲ್ಲಿ ಅವರು 200 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಅನ್ನು ಆಡಿದ್ದಾರೆ.


ಡೇವಿಡ್ ವಾರ್ನರ್ ಸಚಿನ್ ತೆಂಡೂಲ್ಕರ್ ಅವರ ದೊಡ್ಡ ದಾಖಲೆಯನ್ನು ಸರಿಗಟ್ಟಿದ್ದಾರೆ. ಡೇವಿಡ್ ವಾರ್ನರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆರಂಭಿಕರಾಗಿ 45 ಶತಕಗಳನ್ನು ಗಳಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆರಂಭಿಕರಾಗಿ 45 ಶತಕಗಳನ್ನು ಗಳಿಸಿದ್ದಾರೆ.


ಸಕ್ರಿಯ ಆಟಗಾರರಿಂದ ಟೆಸ್ಟ್‌ನಲ್ಲಿ ಅತಿ ಹೆಚ್ಚು ದ್ವಿಶತಕಗಳು:


1. ವಿರಾಟ್ ಕೊಹ್ಲಿ - 7


2. ಜೋ ರೂಟ್ - 5


3. ಸ್ಟೀವ್ ಸ್ಮಿತ್ - 4


4. ಕೇನ್ ವಿಲಿಯಮ್ಸನ್ - 4


5. ಡೇವಿಡ್ ವಾರ್ನರ್ - 3*


6. ಚೇತೇಶ್ವರ ಪೂಜಾರ - 3


ಇದನ್ನೂ ಓದಿ:  KL Rahul: ರಾಹುಲ್ ಸ್ಥಾನ ಕಸಿದುಕೊಳ್ತಾರಾ ಈ ಆಟಗಾರ? ಆಸೀಸ್ ದಿಗ್ಗಜ ಬಿಚ್ಚಿಟ್ಟ ರಹಸ್ಯವೇನು?


ಎಲ್ಲಾ ದಾಖಲೆಗಳನ್ನು ಮಾಡಿರುವ ಡೇವಿಡ್ ವಾರ್ನರ್


  • 100ನೇ ಟೆಸ್ಟ್‌ನಲ್ಲಿ ದ್ವಿಶತಕ

  • ಬಾಕ್ಸಿಂಗ್ ಡೇ ಟೆಸ್ಟ್ ನಲ್ಲಿ ದ್ವಿಶತಕ

  • MCG (ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್) ನಲ್ಲಿ ದ್ವಿಶತಕ

  • 100ನೇ ಟೆಸ್ಟ್ ನಲ್ಲಿ 200 ರನ್ ಗಳಿಸಿದ ಮೊದಲ ಆಸ್ಟ್ರೇಲಿಯನ್ ಆಟಗಾರ

  • 100ನೇ ಟೆಸ್ಟ್‌ನಲ್ಲಿ 200 ರನ್ ಗಳಿಸಿದ ವಿಶ್ವದ ಎರಡನೇ ಆಟಗಾರ

  • ಟೆಸ್ಟ್‌ನಲ್ಲಿ ಅವರ ಮೂರನೇ ದ್ವಿಶತಕ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ