ನವದೆಹಲಿ: ಇಂದು ಐಪಿಎಲ್ (IPL 2020) ಕ್ರಿಕೆಟ್ನ ಫೈನಲ್  ಪಂದ್ಯ ಆಡಲಾಗುವುದು. ದುಬೈನಲ್ಲಿ ನಡೆಯಲಿರುವ ಐಪಿಎಲ್ ಚಾಂಪಿಯನ್ ಟ್ರೋಫಿಗಾಗಿ ಇಂದು ಸಂಜೆ ದೆಹಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಘರ್ಷಣೆ ನಡೆಯಲಿದೆ. ಐಪಿಎಲ್‌ನಲ್ಲಿ ಒಟ್ಟು 8 ತಂಡಗಳು ಆಡುತ್ತವೆ.


COMMERCIAL BREAK
SCROLL TO CONTINUE READING

ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ಸನ್‌ರೈಸರ್ಸ್ ಹೈದರಾಬಾದ್ ಅನ್ನು 17 ರನ್‌ಗಳಿಂದ ಮಣಿಸಿ ಫೈನಲ್‌ಗೆ ಪ್ರವೇಶಿಸಿದೆ. ಇದೆ ಮೊದಲ ಬಾರಿಗೆ ದೆಹಲಿ ಕ್ಯಾಪಿತಲ್ಸ್ ಐಪಿಎಲ್ ಫೈನಲ್ ಪ್ರವೇಶಿಸಿದೆ. ಮುಂಬೈ ಇಂಡಿಯನ್ಸ್ ನಾಲ್ಕು ಬಾರಿ ಈ ಪಂದ್ಯಾವಳಿಯ ಚಾಂಪಿಯನ್ ಆಗಿದೆ.


ಇದನ್ನು ಓದಿ- ಎಲ್ಲ ಮಾದರಿಯ ಕ್ರಿಕೆಟ್ ಗೆ ವಿದಾಯ ಹೇಳಿದ ಚೆನ್ನೈ ಸೂಪರ್ ಕಿಂಗ್ಸ್ ನ ಆಟಗಾರ ಶೇನ್ ವಾಟ್ಸನ್!


ಐಪಿಎಲ್ ಟ್ರೋಫಿ ಗೆದ್ದ ತಂಡಕ್ಕೆ 20 ಕೋಟಿ ರೂ. ಬಹುಮಾನದ ರೂಪದಲ್ಲಿ ನೀಡಲಾಗುತ್ತದೆ. ಆದರೆ,  ಈ ಬಾರಿ ಕರೋನಾ ಸಾಂಕ್ರಾಮಿಕದ  ಪರಿಣಾಮ ಈ ಚಾಂಪಿಯನ್‌ಶಿಪ್‌ ನಲ್ಲಿ ಗಮನಿಸಲಾಗುತ್ತಿದೆ. ಈ ಬಾರಿ ಬಹುಮಾನದ ಮೊತ್ತವನ್ನು 10 ಕೋಟಿ ರೂ.ಗೆ ಇಳಿಸಲಾಗಿದೆ. ಅಂದರೆ, ಈ ಬಾರಿ ಚಾಂಪಿಯನ್ ತಂಡಕ್ಕೆ 10 ಕೋಟಿ ಮೊತ್ತ ಸಿಗಲಿದೆ. ಕರೋನಾ ಸಾಂಕ್ರಾಮಿಕದಿಂದಾಗಿ, ಬಿಸಿಸಿಐ ಈ ಖರ್ಚು ಕಡಿತವನ್ನು ಘೋಷಿಸಿದೆ.


ಫೈನಲ್ ನಲ್ಲಿ ಸೋಲುವ ತಂಡಕ್ಕೆ ಈ ಮೊದಲು 12 ಕೋಟಿ ರೂ.ಗಳನ್ನು ನೀಡಲಾಗುತ್ತಿತ್ತು. ಆದರೆ ಈ ಬಾರಿ ಕೇವಲ ರೂ.6.25 ಕೋಟಿ ರೂ.ಗಳು ಮಾತ್ರ ಸಿಗಲಿವೆ.


ಇದನ್ನು ಓದಿ- IPL 2020: ವೈರಲ್ ಆಗುತ್ತಿದೆ MS Dhoni ಅವರ 'ಸೂಪರ್‌ಮ್ಯಾನ್ ಕ್ಯಾಚ್'- watch video


ಪ್ಲೇ ಆಫ್ ನಲ್ಲಿ ತಲುಪುವ ತಂಡಗಳಿಗೆ ಉತ್ತಮ ಮೊತ್ತ ನೀಡಲಾಗುತ್ತಿತ್ತು. ಪ್ಲೇ ಆಫ್ ನಲ್ಲಿ ಗೆಲ್ಲುವ ಹಾಗು ರನರ್ ಅಪ್ ಆಗುವ ತಂಡಗಳಿಗೆ ಈ ಬಾರಿ 4.35-4.35 ಕೋಟಿ ರೂ. ಬಹುಮಾನದ ರೂಪದಲ್ಲಿ ನೀಡಲಾಗುವುದು. ಇದಕ್ಕೂ ಮೊದಲು ಈ ಮೊತ್ತ 8.37 ಕೋಟಿಯಷ್ಟಿತ್ತು. ಈ ಬಾರಿ ಪ್ಲೇ ಆಫ್ ನಲ್ಲಿ ಆರ್ ಸಿ ಬಿ ಹಾಗೂ ಸನ್ ರೈಸರ್ಸ್ ತಂಡಗಳಿಗೆ ಈ ಮೊತ್ತ ನೀಡಲಾಗುತ್ತಿದೆ.


ಈ ಚಾಂಪಿಯನ್ ಶಿಪ್ ನಲ್ಲಿ ಅತಿ ಹೆಚ್ಚು ರನ್ ಗಳಿಸುವ ಆಟಗಾರನಿಗೆ (ಆರೆಂಜ್ ಕ್ಯಾಪ್) ಹಾಗೂ ಅತಿ ಹೆಚ್ಚು ವಿಕೆಟ್ ಪಡೆಯುವ (ಪರ್ಪಲ್ ಕ್ಯಾಪ್) ಆಟಗಾರನಿಗೂ ಕೂಡ ಉತ್ತಮ ಮೊತ್ತ ನೀಡಲಾಗುತ್ತಿತ್ತು. ಕಳೆದ ಬಾರಿ ಈ ಆಟಗಾರರಿಗೆ ಬಹುಮಾನದ ರೂಪದಲ್ಲಿ 10-10 ಲಕ್ಷ ರೂ. ನೀಡಲಾಗಿತ್ತು. ಈ ಬಾರಿ ಎಷ್ಟು ಸಿಗಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.