`ಧೋನಿ ಅನುಭವವನ್ನು ಮಾರುಕಟ್ಟೆಯಲ್ಲಿ ಕೊಳ್ಳಲು ಅಸಾಧ್ಯ`
2019 ರ ವಿಶ್ವಕಪ್‌ನಲ್ಲಿ ಎಂ.ಎಸ್.ಧೋನಿ ಆಟದ ಬಗ್ಗೆ ಹಲವು ತಜ್ಞರು ಪ್ರಶ್ನಿಸಿದ್ದಾರೆ. ಆದರೆ ಇಂದಿಗೂ ಕೂಡ ತಂಡ ಆಟಗಾರರಿಗೆ ಧೋನಿ ಫೇವರೆಟ್, ಇದಕ್ಕೆ ಪೂರಕ ಎನ್ನುವಂತೆ ಇತ್ತೀಚಿಗೆ ವಿರಾಟ್ ಕೊಹ್ಲಿ, ಹಾಗೂ ರೋಹಿತ್ ಶರ್ಮಾ ಅವರ ಹೇಳಿಕೆಗಳೇ ಇದಕ್ಕೆ ಸಾಕ್ಷಿ ಎನ್ನಬಹುದು.
ನವದೆಹಲಿ: 2019 ರ ವಿಶ್ವಕಪ್‌ನಲ್ಲಿ ಎಂ.ಎಸ್.ಧೋನಿ ಆಟದ ಬಗ್ಗೆ ಹಲವು ತಜ್ಞರು ಪ್ರಶ್ನಿಸಿದ್ದಾರೆ. ಆದರೆ ಇಂದಿಗೂ ಕೂಡ ತಂಡ ಆಟಗಾರರಿಗೆ ಧೋನಿ ಫೇವರೆಟ್, ಇದಕ್ಕೆ ಪೂರಕ ಎನ್ನುವಂತೆ ಇತ್ತೀಚಿಗೆ ವಿರಾಟ್ ಕೊಹ್ಲಿ, ಹಾಗೂ ರೋಹಿತ್ ಶರ್ಮಾ ಅವರ ಹೇಳಿಕೆಗಳೇ ಇದಕ್ಕೆ ಸಾಕ್ಷಿ ಎನ್ನಬಹುದು.
ಈಗ ಐಎಎನ್‌ಎಸ್‌ನೊಂದಿಗೆ ಮಾತನಾಡಿದ ತಂಡದ ಸದಸ್ಯರೊಬ್ಬರು ಮಾತನಾಡುತ್ತಾ 'ಎಲ್ಲರೂ ಅವರ ಸ್ಟ್ರೈಕ್ ದರವನ್ನು ನೋಡುತ್ತಿದ್ದರೂ ಸಹಿತ ಅವರ ಅನುಭವ ನಿಜಕ್ಕೂ ಮಹತ್ವದ್ದು ಎಂದು ಹೇಳಿದ್ದಾರೆ. "ಮೈದಾನದಲ್ಲಿ ಅವರ ಅನುಭವಕ್ಕೆ ಸಂಬಂಧಿಸಿದಂತೆ, ಅವರು ನಮ್ಮಲ್ಲಿರುವ ಪ್ರತಿಯೊಂದು ಪ್ರಶ್ನೆಗೆ ಉತ್ತರವನ್ನು ಹೊಂದಿದ್ದಾರೆ. ಪ್ಲಾನ್ ಎ ಕೆಲಸ ಮಾಡದಿದ್ದರೆ, ಅವರು ನಿಮಗೆ ಬಿ, ಸಿ ಮತ್ತು ಡಿ ಪ್ಲಾನ್ ನೀಡುತ್ತಾರೆ. ವಾಸ್ತವವಾಗಿ, ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲೂ ಸಹ ಅವರು ನಿರಂತರವಾಗಿ ರಿಷಭ್ ಪಂತ್ ಅವರಿಗೆ ಮಾರ್ಗದರ್ಶನ ನೀಡುತ್ತಿರುವುದನ್ನು ಮತ್ತು ಅವರು ಗುರಿಯಿರಿಸಬೇಕಾದ ಕ್ಷೇತ್ರಗಳ ಬಗ್ಗೆ ಹೇಳುತ್ತಿರುವುದನ್ನು ನೀವು ಗಮನಿಸಿದ್ದೀರಾ? ಆ ಅನುಭವವನ್ನು ನೀವು ಮಾರುಕಟ್ಟೆಯಲ್ಲಿ ಖರೀದಿಸಲು ಸಾಧ್ಯವಿಲ್ಲ "ಎಂದು ಹೇಳಿದರು.
ಇನ್ನೊಬ್ಬ ಆಟಗಾರ ಹೇಳುವಂತೆ ಮಹೇಂದ್ರ ಸಿಂಗ್ ಧೋನಿ ಉಪಸ್ಥಿತಿಯಿಂದಾಗಿ ಕೊಹ್ಲಿಯಂತಹ ಆಟಗಾರರು ನೆಮ್ಮದಿಯಿಂದ ಕಣಕ್ಕಿಳಿಯಬಹುದು. ಏಕೆಂದರೆ ಅವರು ಕ್ಷೇತ್ರದಲ್ಲಿ ಸೂಕ್ತ ಬದಲಾವಣೆಗಳನ್ನು ತರಲು ಧೋನಿ ನೆರವಾಗುತ್ತಾರೆ ಎಂದು ತಿಳಿಸಿದ್ದಾರೆ. ಅಲ್ಲದೆ ಅವರು ಬೌಲರ್ ಗಳಿಗೆ ವಿಕೆಟ್ ಕೀಪಿಂಗ್ ಹಿಂದೆ ನಿಂತು ಬೌಲರ್ ಗಳಿಗೆ ನಿಖರವಾಗಿ ಬೌಲ್ ಮಾಡಬೇಕಾದ ಪ್ರದೇಶಗಳ ಬಗ್ಗೆ ತಿಳಿ ಹೇಳುತ್ತಾರೆ ಎಂದು ಅವರು ಸ್ಮರಿಸಿದರು.