India’s Women's Railway Station Railways: ಮಹಿಳಾ ಸಬಲೀಕರಣದ ಉಪಕ್ರಮಕ್ಕಾಗಿ ವಿಶ್ವಸಂಸ್ಥೆಯು ಭಾರತೀಯ ರೈಲ್ವೆಯನ್ನು ಶ್ಲಾಘಿಸಿದೆ. ಏಕೆಂದರೆ ದೇಶದ ಮೊದಲ ಸಂಪೂರ್ಣ ಮಹಿಳಾ ರೈಲು ನಿಲ್ದಾಣವನ್ನು ರಾಜಸ್ಥಾನದ ಗಾಂಧಿ ನಗರದಲ್ಲಿ ಭಾರತೀಯ ರೈಲ್ವೆ ಘೋಷಿಸಿದೆ. ಭಾರತೀಯ ರೈಲ್ವೇ ಎಲ್ಲಾ ಮಹಿಳಾ ರೈಲ್ವೆ ಉದ್ಯೋಗಿಗಳನ್ನು ವಾಯುವ್ಯ ರೈಲ್ವೇ ಅಡಿಯಲ್ಲಿ ಜೈಪುರ ಜಿಲ್ಲೆಯ ಗಾಂಧಿ ನಗರ ರೈಲು ನಿಲ್ದಾಣಕ್ಕೆ ನಿಯೋಜಿಸಿದೆ. ಈ ರೈಲು ನಿಲ್ದಾಣವು ಮಹಿಳಾ ಉದ್ಯೋಗಿಗಳಿಂದ ಸಂಪೂರ್ಣ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಮಾಡುವ ಮೊದಲ ನಿಲ್ದಾಣವಾಗಿದೆ. ಟಿಕೆಟ್ ಮಾರಾಟಗಾರ ಮಾತ್ರವಲ್ಲದೆ ಟಿಕೆಟ್ ಕಲೆಕ್ಟರ್, ಸ್ಟೇಷನ್ ಮಾಸ್ಟರ್, ನೈರ್ಮಲ್ಯ ಸಿಬ್ಬಂದಿ ಸೇರಿದಂತೆ ಎಲ್ಲಾ ಕೆಲಸಗಳನ್ನು ಮಹಿಳಾ ಉದ್ಯೋಗಿಗಳೇ ನಿರ್ವಹಿಸುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Viral Video : ವಧುವನ್ನು ಎತ್ತಿಕೊಂಡು ಕಿಸ್‌ ಕೊಡಲು ಹೋದ ವರ! ಆದ್ರೆ ಸಿಕ್ಕಿದ್ದು ಬಹುದೊಡ್ಡ ಶಾಕ್‌


ವಿಶ್ವಸಂಸ್ಥೆ ಕೂಡ ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ರಾಜಸ್ಥಾನದ ಗಾಂಧಿ ನಗರ ರೈಲು ನಿಲ್ದಾಣವು 40 ಮಹಿಳಾ ಉದ್ಯೋಗಿಗಳನ್ನು ಹೊಂದಿದೆ. ಇದು ಪುರುಷ ಕೌಂಟರ್ಪಾರ್ಟ್ಸ್ಗಿಂತ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಒಂದು ದಿನದಲ್ಲಿ 50 ರೈಲುಗಳು ಈ ರೈಲು ನಿಲ್ದಾಣದ ಮೂಲಕ ಹಾದು ಹೋಗುತ್ತವೆ. ಇದರಲ್ಲಿ 24 ರೈಲುಗಳು ನಿಲ್ಲುತ್ತವೆ. ಪ್ರತಿದಿನ ಸುಮಾರು 7000 ಪ್ರಯಾಣಿಕರು ಈ ನಿಲ್ದಾಣವನ್ನು ಉಪಯೋಗಿಸುತ್ತಾರೆ. ವೇಗದ ಸೇವೆಗಳು, ಕಡಿಮೆ ಸರತಿ ಸಾಲುಗಳು, ಸಿಸಿಟಿವಿ ಕ್ಯಾಮೆರಾಗಳು ಮತ್ತು ಉತ್ತಮ ಶುಚಿತ್ವವನ್ನು ಒದಗಿಸುವ ವಿಷಯದಲ್ಲಿ ಪ್ರಯಾಣಿಕರ ಅನುಭವದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಮಹಿಳಾ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ನಿಲ್ದಾಣದಲ್ಲಿ ಮಹಿಳಾ ಪೊಲೀಸ್ ಠಾಣೆ ಉದ್ಘಾಟನೆ ಹಾಗೂ ಸ್ಯಾನಿಟರಿ ನ್ಯಾಪ್ಕಿನ್ ವೆಂಡಿಂಗ್ ಮೆಷಿನ್ ಅಳವಡಿಸಲಾಗಿದೆ.


Vistara Sale 2023: ಈ Airlinesನಿಂದ ಬಂಪರ್ ಗಿಫ್ಟ್: ಅತೀ ಕಡಿಮೆ ಬೆಲೆಯಲ್ಲಿ ವಿಮಾನಯಾನ: ಇಂದೇ ಬುಕ್ ಮಾಡಿ


ಮುಂಬೈ ವಲಯದ ಮಾಟುಂಗಾ ರೈಲು ನಿಲ್ದಾಣವು ಎಲ್ಲಾ ಮಹಿಳಾ ಸಿಬ್ಬಂದಿಯಿಂದ ನಿರ್ವಹಿಸಲ್ಪಡುತ್ತದೆ ಮತ್ತು ಉಪ-ನಗರ ವಿಭಾಗದಲ್ಲಿದೆ. ಆದರೆ ಗಾಂಧಿ ನಗರ ರೈಲು ನಿಲ್ದಾಣವು ಮುಖ್ಯ ಮಾರ್ಗ ವಿಭಾಗದಲ್ಲಿ ದೇಶದ ಮೊದಲನೆಯದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.