Safa Baig and Irfan Pathan relationship story: ಟೀಂ ಇಂಡಿಯಾದ ಮಾಜಿ ಸ್ಟಾರ್ ಬೌಲರ್ ಇರ್ಫಾನ್ ಪಠಾಣ್ ದಂಪತಿ ಇತ್ತೀಚೆಗೆ ತಮ್ಮ 8ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ಈ ಸಂದರ್ಭದಲ್ಲಿ, ಇರ್ಫಾನ್ ಪಠಾಣ್ ತಮ್ಮ ಸಂಗಾತಿ ಸಫಾ ಬೇಗ್ ಅವರೊಂದಿಗೆ ಮೊದಲ ಬಾರಿಗೆ ಫೋಟೋಗಳನ್ನು ಹಂಚಿಕೊಂಡಿದ್ದು... ಅವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ನೆಟ್ಟಿಗರು ಸಫಾ ಬೇಗ್ ಯಾರು ಎಂದು ವಿಚಾರಿಸುತ್ತಿದ್ದಾರೆ. ಇದೇ ವೇಳೆ ಇರ್ಫಾನ್ ಪಠಾಣ್ ಪತ್ನಿ ಬಗ್ಗೆ ಕುತೂಹಲಕಾರಿ ಸಂಗತಿಗಳು ಬೆಳಕಿಗೆ ಬಂದಿವೆ..


COMMERCIAL BREAK
SCROLL TO CONTINUE READING

ಇದನ್ನೂ ಓದಿ-IND vs ENG, 2nd Test: ಇಂಗ್ಲೆಂಡ್‌ ವಿರುದ್ಧ ಚೊಚ್ಚಲ ದ್ವಿಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್!


ಇರ್ಫಾನ್ ಪಠಾಣ್ ಅವರು 2016 ರಲ್ಲಿ ಸಫಾ ಬೇಗ್ ಅವರನ್ನು ವಿವಾಹವಾದರು. ಇವರು ಮೂಲತಃ ಸೌದಿ ಅರೇಬಿಯಾದವರಾಗಿದ್ದು.. ವೃತ್ತಿಪರ ರೂಪದರ್ಶಿಯಾಗಿ ಗಮನ ಸೆಳೆದಿದ್ದಾರೆ.. ಅಲ್ಲದೇ ಸಫಾ ಈ ಹಿಂದೆ ಮಾಡೆಲ್ ಮತ್ತು ಪತ್ರಕರ್ತೆಯಾಗಿ ಕಾರ್ಯನಿರ್ವಹಿಸಿದ್ದರು. ಅವರು ಗಲ್ಫ್‌ನ ವಿವಿಧ ಫ್ಯಾಷನ್ ನಿಯತಕಾಲಿಕೆಗಳ ಪುಟಗಳನ್ನು ಅಲಂಕರಿಸಿದ್ದಾರೆ, ಒಪಿಆರ್ ಸಂಸ್ಥೆಯಲ್ಲಿ ಕಾರ್ಯನಿರ್ವಾಹಕ ಸಂಪಾದಕರಾಗಿ ಕೆಲಸ ಮಾಡಿದ್ದಾರೆ.. 


ಇದನ್ನೂ ಓದಿ-Yashaswi Jaiswal GF ಯಾರು? ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಛಾಯಾಚಿತ್ರಗಳು!


ಇರ್ಫಾನ್ ಪಠಾಣ್ ಅವರನ್ನು ವಿವಾಹವಾದಾಗ ಸಫಾ ಅವರಿಗೆ ಕೇವಲ 21 ವರ್ಷ. ಇರ್ಫಾನ್ ಪಠಾಣ್-ಸಫಾ ಬೇಗ್ ಮದುವೆಯಾಗುವ ಮೊದಲು ಸುಮಾರು ಎರಡು ವರ್ಷಗಳ ಕಾಲ ಡೇಟಿಂಗ್ ಮಾಡುತ್ತಿದ್ದರು ಎಂದು ವರದಿಯಾಗಿದೆ. ಸದ್ಯ ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.