IND vs ENG Matches Winning Rate: ಟಿ20 ವಿಶ್ವಕಪ್ ಫೈನಲ್ ಪಂದ್ಯ ದೂರವಿಲ್ಲ. ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನವು ಕಿವೀಸ್ ತಂಡವನ್ನು ಸೋಲಿಸಿ ಫೈನಲ್ ತಲುಪಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ವಿಶ್ವಕಪ್ ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ಯಾವ ತಂಡ ಗೆದ್ದು, ಫೈನಲ್ ನಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ ಎಂಬುದು ಕುತೂಹಲ ಮೂಡಿಸಿದೆ. ಈ ಹಿನ್ನಲೆಯಲ್ಲಿ ಗುರುವಾರ ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ vs ಇಂಗ್ಲೆಂಡ್ ಸೆಮಿಫೈನಲ್ ಪಂದ್ಯದ ರೋಚಕತೆ ಹೆಚ್ಚುತ್ತಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Team India: ಟೀಂ ಇಂಡಿಯಾಗೆ ಆಘಾತ! ಕೊಹ್ಲಿಗೆ ಗಾಯ, ರೋಹಿತ್ ಸ್ಥಿತಿ ಏನು?


ಭಾರತ ಮತ್ತು ಇಂಗ್ಲೆಂಡ್ ನಡುವಿನ ಕ್ರಿಕೆಟ್ ಪಂದ್ಯದ ಹಿನ್ನೆಲೆಯಲ್ಲಿ ಈ ಎರಡು ತಂಡಗಳ ನಡುವಿನ ಟಿ20 ಅಂತಾರಾಷ್ಟ್ರೀಯ ಪಂದ್ಯಗಳ ಯಶಸ್ಸಿನ ಪ್ರಮಾಣವನ್ನು ನೋಡೋಣ.


ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಇದುವರೆಗೆ ಒಟ್ಟು 22 ಪಂದ್ಯಗಳು ನಡೆದಿದ್ದು, ಭಾರತ 12 ಪಂದ್ಯಗಳನ್ನು ಗೆದ್ದಿದ್ದರೆ, ಇಂಗ್ಲೆಂಡ್ 10 ಪಂದ್ಯಗಳನ್ನು ಗೆದ್ದಿದೆ.


ಭಾರತ ಮತ್ತು ಇಂಗ್ಲೆಂಡ್ ತಂಡಗಳು ವಿಶ್ವಕಪ್‌ನಲ್ಲಿ ಮೂರು ಬಾರಿ ಮುಖಾಮುಖಿಯಾಗಿವೆ. ಅವುಗಳಲ್ಲಿ ಒಂದು 2007 ರ ಟಿ 20 ವಿಶ್ವಕಪ್ ಮತ್ತು ಎರಡನೇ ಪಂದ್ಯವು 2009 ರ ಟಿ 20 ವಿಶ್ವಕಪ್‌ನ ಅಂಗವಾಗಿ ನಡೆದ ಪಂದ್ಯವಾಗಿತ್ತು. 2012ರ ವಿಶ್ವಕಪ್‌ನ ಭಾಗವಾಗಿ ಉಭಯ ತಂಡಗಳು ಮೂರನೇ ಬಾರಿ ಮುಖಾಮುಖಿಯಾಗಿದ್ದವು. ಈ ಮೂರು ಪಂದ್ಯಗಳಲ್ಲಿ ಭಾರತ ಎರಡು ಪಂದ್ಯಗಳನ್ನು ಗೆದ್ದರೆ ಇಂಗ್ಲೆಂಡ್ ಒಂದು ಪಂದ್ಯವನ್ನು ಗೆದ್ದಿದೆ.


ಭಾರತ, ಇಂಗ್ಲೆಂಡ್ ಎರಡೂ ತಂಡಗಳು ಆರಂಭಿಕರಿಂದ ಕೊನೆಯವರೆಗೆ ಬಲಿಷ್ಠ ಲೈನಪ್ ಹೊಂದಿವೆ. ಉಭಯ ತಂಡಗಳು ಸಮಬಲದಲ್ಲಿ ಮುಂದುವರಿದಿದ್ದರಿಂದ ಸೆಮಿಫೈನಲ್ ಹಂತ ತಲುಪಲು ಸಾಧ್ಯವಾಯಿತು. ಆದರೆ ಈ ಪಂದ್ಯಕ್ಕೂ ಮುನ್ನ ಉಭಯ ತಂಡಗಳ ಒಂದಿಬ್ಬರು ಆಟಗಾರರು ಗಾಯದಿಂದ ಬಳಲುತ್ತಿರುವುದು ಆಯಾ ತಂಡದ ಆಟಗಾರರು ಹಾಗೂ ಅಭಿಮಾನಿಗಳ ಚಿಂತೆಗೆ ಕಾರಣವಾಗಲಿದೆ.


ಇದನ್ನೂ ಓದಿ: IND vs ENG: ಇಂಡೋ-ಆಂಗ್ಲರ ನಡುವೆ ಸೆಮಿಸ್ ಸಮರ: ಪಾಕ್ ವಿರುದ್ಧ ಫೈನಲ್ ಆಡುವವರು ಯಾರು?


ಭಾರತ vs ಇಂಗ್ಲೆಂಡ್ ಸಂಭಾವ್ಯ ಆಟಗಾರರ ಪಟ್ಟಿ:


ಭಾರತ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್


ಇಂಗ್ಲೆಂಡ್: ಜೋಸ್ ಬಟ್ಲರ್ (ನಾಯಕ, ವಿಕೆಟ್ ಕೀಪರ್), ಅಲೆಕ್ಸ್ ಹೇಲ್ಸ್, ಫಿಲಿಪ್ ಸಾಲ್ಟ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಮೊಯಿನ್ ಅಲಿ, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರ್ರಾನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಮಾರ್ಕ್ ವುಡ್.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.