IND vs ENG: ಇಂಡೋ-ಆಂಗ್ಲರ ಸೆಮಿಸ್ ಪಂದ್ಯಕ್ಕೆ ಮಳೆ ಅಡ್ಡಿಯಾದ್ರೆ ಮುಂದೇನು? ಯಾವ ತಂಡ ಫೈನಲ್ಗೆ ಹೋಗಲಿದೆ?

IND vs ENG Semi Final: ಇಲ್ಲಿಯವರೆಗೆ, ಟಿ20 ವಿಶ್ವಕಪ್ 2022 ರ ಸೆಮಿಫೈನಲ್ ಪಂದ್ಯಗಳಿಗೆ ಯಾವುದೇ ಅಡೆತಡೆ ಇಲ್ಲ ಎಂದು ವರದಿಯಾಗಿದೆ. ಆದರೆ ಒಂದು ವೇಳೆ ಸೆಮಿಸ್ ಪಂದ್ಯಗಳ ವೇಳೆ ಭಾರೀ ಮಳೆ ಸುರಿದರೆ, ಯಾವ ತಂಡ ಫೈನಲ್‌ಗೆ ಹೋಗಲಿದೆ ಎಂಬ ಅನುಮಾನ ಅನೇಕರಲ್ಲಿದೆ. ಅವರಿಗಾಗಿಯೇ ಈ ಸ್ಪಷ್ಟನೆ.

Written by - Bhavishya Shetty | Last Updated : Nov 9, 2022, 09:40 AM IST
    • ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಸೆಮಿಫೈನಲ್ ಪಂದ್ಯ ಅಡಿಲೇಡ್‌ನಲ್ಲಿ ನಡೆಯಲಿದೆ
    • ಸೆಮಿಸ್ ಪಂದ್ಯಗಳ ವೇಳೆ ಮಳೆ ಸುರಿದರೆ,ಯಾವ ತಂಡ ಫೈನಲ್‌ಗೆ ಹೋಗಲಿದೆ?
    • ಆಟವಾಡಲು ಸಾಧ್ಯವಾಗದಿದ್ದರೆ ಇಡೀ ಪಂದ್ಯವನ್ನು ಮೀಸಲು ದಿನದಂದು ಮುಂದುವರಿಸಲಾಗುತ್ತದೆ
IND vs ENG: ಇಂಡೋ-ಆಂಗ್ಲರ ಸೆಮಿಸ್ ಪಂದ್ಯಕ್ಕೆ ಮಳೆ ಅಡ್ಡಿಯಾದ್ರೆ ಮುಂದೇನು? ಯಾವ ತಂಡ ಫೈನಲ್ಗೆ ಹೋಗಲಿದೆ? title=
India vs Engalnd Semi Final

T20 World Cup Semi Final: ಆಸ್ಟ್ರೇಲಿಯಾದ ನೆಲದಲ್ಲಿ ನಡೆಯುತ್ತಿರುವ T20 ವಿಶ್ವಕಪ್ 2022 ರ ಸೆಮಿಫೈನಲ್ ಪಂದ್ಯಗಳಿಗೆ ಸಮಯ ಬಂದಿದೆ. ಮೊದಲ ಸೆಮಿಫೈನಲ್ ಇಂದು (ಸೆಪ್ಟೆಂಬರ್ 9) ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ನಡುವೆ ನಡೆಯಲಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಸೆಮಿಫೈನಲ್ ಪಂದ್ಯ ಗುರುವಾರ (ನವೆಂಬರ್ 10) ಅಡಿಲೇಡ್‌ನಲ್ಲಿ ನಡೆಯಲಿದೆ. ಸೆಮಿಫೈನಲ್‌ನಲ್ಲಿ ಗೆಲ್ಲುವ ತಂಡಗಳು ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಈ ಹಿನ್ನೆಲೆಯಲ್ಲಿ ಗೆಲುವಿನ ಗುರಿಯೊಂದಿಗೆ ಎಲ್ಲರೂ ಕಣಕ್ಕೆ ಇಳಿಯುತ್ತಿದ್ದಾರೆ.

ಇದನ್ನೂ ಓದಿ: T20 World Cup 2022:13 ವರ್ಷಗಳ ಸೇಡು ತೀರಿಸಿಕೊಳ್ಳಲು ಅಡಿಲೇಡ್ ತಲುಪಿದ ಟೀಂ ಇಂಡಿಯಾ! ಚುಕ್ತಾ ಆಗುತ್ತಾ ಲೆಕ್ಕ?

ಇಲ್ಲಿಯವರೆಗೆ, ಟಿ20 ವಿಶ್ವಕಪ್ 2022 ರ ಸೆಮಿಫೈನಲ್ ಪಂದ್ಯಗಳಿಗೆ ಯಾವುದೇ ಅಡೆತಡೆ ಇಲ್ಲ ಎಂದು ವರದಿಯಾಗಿದೆ. ಆದರೆ ಒಂದು ವೇಳೆ ಸೆಮಿಸ್ ಪಂದ್ಯಗಳ ವೇಳೆ ಭಾರೀ ಮಳೆ ಸುರಿದರೆ, ಯಾವ ತಂಡ ಫೈನಲ್‌ಗೆ ಹೋಗಲಿದೆ ಎಂಬ ಅನುಮಾನ ಅನೇಕರಲ್ಲಿದೆ. ಅವರಿಗಾಗಿಯೇ ಈ ಸ್ಪಷ್ಟನೆ.

ICC ಪ್ರಕಟಿಸಿದ ವೇಳಾಪಟ್ಟಿಯ ಪ್ರಕಾರ, T20 ವಿಶ್ವಕಪ್ 2022 ಸೆಮಿಫೈನಲ್ ಪಂದ್ಯಗಳಿಗೆ ಮತ್ತು ಅಂತಿಮ ಪಂದ್ಯಕ್ಕೆ ಮೀಸಲು ದಿನವನ್ನು ಹೊಂದಿದೆ. ಸೆಮಿಸ್ ಮತ್ತು ಫೈನಲ್ ಪಂದ್ಯಗಳಿಗೆ ಮಳೆ ಅಡ್ಡಿಪಡಿಸಿದರೆ ಮತ್ತು ಒಂದೇ ಒಂದು ಚೆಂಡು ಆಟವಾಡಲು ಸಾಧ್ಯವಾಗದಿದ್ದರೆ ಇಡೀ ಪಂದ್ಯವನ್ನು ಮೀಸಲು ದಿನದಂದು ಮುಂದುವರಿಸಲಾಗುತ್ತದೆ. ನಿಗದಿತ ದಿನದಂದು ಅರ್ಧ ಪಂದ್ಯ ನಡೆದರೂ ಉಳಿದ ಪಂದ್ಯವನ್ನು ಮೀಸಲು ದಿನದಂದು ಮುಂದುವರಿಸಲಾಗುವುದು.

ಇದನ್ನೂ ಓದಿ: T20 World Cup: ಸೆಮಿಫೈನಲ್ ಪಂದ್ಯದ ‘ಅಂಪೈರ್’ ಪಟ್ಟಿ ಘೋಷಿಸಿದ ಐಸಿಸಿ

ಮಳೆಯ ಕಾರಣ ಮೀಸಲು ದಿನದಂದು ಸಹ ಸೆಮಿಸ್ ಪಂದ್ಯಗಳು ಸಾಧ್ಯವಾಗದಿದ್ದರೆ, ಸೂಪರ್ 12 ಹಂತದಲ್ಲಿ ಅಗ್ರಸ್ಥಾನದಲ್ಲಿರುವ ತಂಡಗಳು ಫೈನಲ್‌ಗೆ ಅರ್ಹತೆ ಪಡೆಯುತ್ತವೆ. ಮೊದಲ ಸೆಮಿ ರದ್ದಾದರೆ ನ್ಯೂಜಿಲೆಂಡ್, ಎರಡನೇ ಸೆಮಿ ರದ್ದಾದರೆ ಭಾರತ ಫೈನಲ್ ತಲುಪಲಿದೆ. ಮೀಸಲು ದಿನದಂದು ಅಂತಿಮ ಪಂದ್ಯ ಸಾಧ್ಯವಾಗದಿದ್ದರೆ, ಎರಡೂ ತಂಡಗಳನ್ನು ಜಂಟಿ ವಿಜೇತರು ಎಂದು ಘೋಷಿಸಲಾಗುತ್ತದೆ. ಸೆಮಿಸ್ ಮತ್ತು ಫೈನಲ್ ಪಂದ್ಯಗಳು ಮಳೆಯಿಂದಾಗಿ ನಡೆಯದಿದ್ದರೆ, ನ್ಯೂಜಿಲೆಂಡ್ ಮತ್ತು ಭಾರತವು ವಿಜೇತರಾಗಲಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News