ನವದೆಹಲಿ: ಭಾರತದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ನಿಯಂತ್ರಣದ ಮತ್ತು ಅವರ ಸೂಕ್ಷ್ಮ ವೇಗದ ಬೌಲಿಂಗ್ ವ್ಯತ್ಯಾಸಗಳು ಅವರನ್ನು ಎದುರಿಸಲು ತುಂಬಾ ಕಷ್ಟಕರವಾಗುತ್ತದೆ ಎಂದು ನ್ಯೂಜಿಲೆಂಡ್ ಆರಂಭಿಕ ಮಾರ್ಟಿನ್ ಗಪ್ಟಿಲ್ ಹೇಳಿದ್ದಾರೆ.ಬುಧವಾರ ನಡೆದ ನ್ಯೂಜಿಲೆಂಡ್ ಮತ್ತು ಭಾರತ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಅಶ್ವಿನ್ ಎರಡು ವಿಕೆಟ್ ಪಡೆದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Viral Video: ನಡುರಸ್ತೆಯಲ್ಲಿಯೇ ಕ್ಯಾಬ್ ಚಾಲಕನನ್ನು ಎಳೆದಾಡಿ ಥಳಿಸಿದ ಮಹಿಳೆ, ವಿಡಿಯೋ ವೈರಲ್


ಈ ಕುರಿತಾಗಿ ಈಗ ಮೊದಲ ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗಪ್ಟಿಲ್ "ಅವರು ಕುತಂತ್ರದ ಬೌಲರ್, ಅವರು ತಮ್ಮ ಲೈನ್ ಮತ್ತು ಲೆಂಗ್ತ್ ಮೇಲೆ ಉತ್ತಮ ನಿಯಂತ್ರಣವನ್ನು ಹೊಂದಿದ್ದಾರೆ ಮತ್ತು ಅವರು ಕೆಟ್ಟ ಎಸೆತಗಳನ್ನು ಬೌಲ್ ಮಾಡುವುದಿಲ್ಲ.ಅವರು ತಮ್ಮ ವೃತ್ತಿಜೀವನದುದ್ದಕ್ಕೂ ನನಗೆ ಯಾವುದೇ ಕೆಟ್ಟ ಎಸೆತಗಳನ್ನು ಬೌಲ್ ಮಾಡಿದ್ದು ನನಗೆ ನೆನಪಿಲ್ಲ" ಎಂದು ಹೇಳಿದರು.


ಇದನ್ನೂ ಓದಿ:Delhi Pollution : ದೆಹಲಿಯಲ್ಲಿ ಮತ್ತೆ ಲಾಕ್‌ಡೌನ್ ಪರಿಸ್ಥಿತಿ : ಶಾಲೆಗಳಿಗೆ ರಜೆ, ನೌಕರರಿಗೆ ವರ್ಕ್ ಫ್ರಮ್ ಹೋಂ!


"ಅವರಿಂದ ತಪ್ಪಿಸಿಕೊಳ್ಳುವುದು ತುಂಬಾ ಕಷ್ಟ, ನಿಮಗೆ ಗೊತ್ತಾ, ಅವರ ವೇಗದ ಬದಲಾವಣೆಯು ತುಂಬಾ ಸೂಕ್ಷ್ಮವಾಗಿದೆ ಮತ್ತು ಚೆನ್ನಾಗಿ ನಿಯಂತ್ರಿಸಲ್ಪಡುತ್ತದೆ, ಅವರನ್ನು ತಪ್ಪಿಸಿಕೊಳ್ಳುವುದು ತುಂಬಾ ಕಷ್ಟ" ಎಂದು ಗುಪ್ಟಿಲ್ ಹೇಳಿದರು.ಶುಕ್ರವಾರದಂದು ರಾಂಚಿಯಲ್ಲಿ ಸರಣಿಯ ಎರಡನೇ ಟಿ20 ಪಂದ್ಯ ನಡೆಯಲಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.