ನವದೆಹಲಿ: ಸೋಷಿಯಲ್ ಮೀಡಿಯಾದಲ್ಲಿ ರನ್ ಮಷೀನ್ ಖ್ಯಾತಿಯ ವಿರಾಟ್ ಕೊಹ್ಲಿ ನೂರಾರು ಕೋಟಿ ರೂ. ಗಳಿಸುತ್ತಾರೆ ಅನ್ನೋ ಸುದ್ದಿಯನ್ನು ನೀವು ಕೇಳಿಯೇ ಇರ್ತೀರಾ. ಇನ್‍ಸ್ಟಾಗ್ರಾಂನಲ್ಲಿ ಹಾಕುವ ಒಂದೇ ಒಂದು ಪೋಸ್ಟ್‍ಗೆ 6 ರಿಂದ 15 ಕೋಟಿ ರೂ.ವರೆಗೆ ಗಳಿಸುತ್ತಾರೆ ಅನ್ನೋ ಸುದ್ದಿಗಳು ಸಹ ಆಗಾಗ ಕೇಳಿಬರುತ್ತಿರುತ್ತವೆ.


COMMERCIAL BREAK
SCROLL TO CONTINUE READING

ಇದೀಗ ಸಾಮಾಜಿಕ ಮಾಧ್ಯಮಗಳ ಮೂಲಕ ಗಳಿಕೆ ವಿಚಾರವಾಗಿ ಸ್ವತಃ ವಿರಾಟ್ ಕೊಹ್ಲಿಯೇ ಸ್ಪಷ್ಟನೆ ನೀಡಿದ್ದಾರೆ. ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಕಿಂಗ್ ಕೊಹ್ಲಿ ಇದು ಎಲ್ಲಾ ಸುಳ್ಳು ಸುದ್ದಿಗಳು, ನೀವು ಯಾರೂ ಇದನ್ನು ನಂಬಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.


ಇದನ್ನೂ ಓದಿ: 31 ವರ್ಷಗಳ ನಂತರ ಈ ವಿಶೇಷ ದಿನದಂದು ಮೈದಾನಕ್ಕೆ ಇಳಿಯಲಿದೆ ಟೀಂ ಇಂಡಿಯಾ ! ಈ ದಿನ ಆಡಿದರೆ ಗೆಲುವು ನಿಶ್ಚಿತವಂತೆ


ಈ ವಿಚಾರವಾಗಿ ಶನಿವಾರ ಟ್ವೀಟ್ ಮಾಡಿರುವ ವಿರಾಟ್ ಕೊಹ್ಲಿ, ‘ಇದು ಸತ್ಯಕ್ಕೆ ದೂರವಾದ ವಿಚಾರ’ ಎಂದು ಹೇಳಿದ್ದಾರೆ. ‘ನನ್ನ ಜೀವನದಲ್ಲಿ ನಾನು ಏನು ಗಳಿಸಿದ್ದೇನೋ ಅದಕ್ಕೆ ನಾನು ಕೃತಜ್ಞನಾಗಿದ್ದೇನೆ ಮತ್ತು ಋಣಿಯಾಗಿದ್ದೇನೆ. ಸೋಷಿಯಲ್ ಮೀಡಿಯಾ ಗಳಿಕೆಯ ಬಗ್ಗೆ ನನ್ನ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳು ನಿಜವಲ್ಲ’ ಎಂದು ಹೇಳಿದ್ದಾರೆ.


ODI ವಿಶ್ವಕಪ್ 2023 ಪಂದ್ಯಗಳ ಟಿಕೆಟ್‌ ಬುಕಿಂಗ್ ಹೀಗೆ ಮಾಡಿ.. ಇಲ್ಲಿದೆ ಡೈರೆಕ್ಟ್‌ ಲಿಂಕ್‌


ಇದೀಗ ಇದಕ್ಕೆ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿರುವ ಕೊಹ್ಲಿ, ಇದೆಲ್ಲಾ ಸುಳ್ಳುಸುದ್ದಿ, ನಂಬಬೇಡಿ ಎಂದು ಹೇಳಿದ್ದಾರೆ. ವೆಸ್ಟ್ ಇಂಡೀಸ್‍ನಲ್ಲಿ ನಡೆಯುತ್ತಿರುವ ಟಿ-20 ಅಂತಾರಾಷ್ಟ್ರೀಯ ಪಂದ್ಯದಿಂದ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದಿದ್ದು, ಮುಂಬರುವ ಏಷ್ಯಾಕಪ್ ಟೂರ್ನಿಗೆ ಸಿದ್ಧತೆ ನಡೆಸುತ್ತಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.