31 ವರ್ಷಗಳ ನಂತರ ಈ ವಿಶೇಷ ದಿನದಂದು ಮೈದಾನಕ್ಕೆ ಇಳಿಯಲಿದೆ ಟೀಂ ಇಂಡಿಯಾ ! ಈ ದಿನ ಆಡಿದರೆ ಗೆಲುವು ನಿಶ್ಚಿತವಂತೆ

ICC ODI World Cup 2023: ಕಳೆದ 31 ವರ್ಷಗಳಿಂದ ಈ ವಿಶೇಷ ದಿನದಂದು ಟೀಂ ಇಂಡಿಯಾ  ಮೈದಾನಕ್ಕೆ ಇಳಿದೇ ಇಲ್ಲ. 

Written by - Ranjitha R K | Last Updated : Aug 11, 2023, 02:06 PM IST
  • ODI ವರ್ಲ್ಡ್ ಕಪ್ 2023 ಅಕ್ಟೋಬರ್-ನವೆಂಬರ್ ನಡುವೆ ನಡೆಯಲಿದೆ.
  • ಟೂರ್ನಿಯ ಹೊಸ ವೇಳಾಪಟ್ಟಿ ಕೂಡಾ ಪ್ರಕಟವಾಗಿದೆ
  • 31 ವರ್ಷಗಳ ನಂತರ ಈ ವಿಶೇಷ ದಿನದಂದು ಆಡಲಿದೆ ಟೀಂ ಇಂಡಿಯಾ
31 ವರ್ಷಗಳ ನಂತರ ಈ ವಿಶೇಷ ದಿನದಂದು ಮೈದಾನಕ್ಕೆ ಇಳಿಯಲಿದೆ ಟೀಂ ಇಂಡಿಯಾ ! ಈ ದಿನ ಆಡಿದರೆ ಗೆಲುವು ನಿಶ್ಚಿತವಂತೆ  title=

ICC ODI World Cup 2023 : ODI ವರ್ಲ್ಡ್ ಕಪ್ 2023 ಅಕ್ಟೋಬರ್-ನವೆಂಬರ್ ನಡುವೆ ನಡೆಯಲಿದೆ. ಟೂರ್ನಿಗೆ ಎಲ್ಲಾ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಕೂಡಾ ಟೂರ್ನಿಯ ಹೊಸ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಮಧ್ಯೆ ಭಾರತ-ಪಾಕಿಸ್ತಾನ ಸೇರಿದಂತೆ 9 ಪಂದ್ಯಗಳ ವೇಳಾಪಟ್ಟಿಯನ್ನು ಬದಲಾಯಿಸಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ವಿಶೇಷ ದಿನದಂದು ಒಂದು ಪಂದ್ಯವನ್ನು ಆಡಬೇಕಾಗಿ ಬರಲಿದೆ. ಕಳೆದ 31 ವರ್ಷಗಳಿಂದ ಈ ವಿಶೇಷ ದಿನದಂದು ಟೀಂ ಇಂಡಿಯಾ  ಮೈದಾನಕ್ಕೆ ಇಳಿದೇ ಇಲ್ಲ. 

31 ವರ್ಷಗಳ ನಂತರ ಈ ವಿಶೇಷ ದಿನದಂದು  ಆಡಲಿದೆ ಟೀಂ ಇಂಡಿಯಾ :
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ  ಅಕ್ಟೋಬರ್ 15 ರಂದು ಅಹಮದಾಬಾದ್‌ನಲ್ಲಿ ನಡೆಯಬೇಕಿತ್ತು. ಆದರೆ ಈಗ ಈ ಪಂದ್ಯ ಅಕ್ಟೋಬರ್ 15 ರ್ ಬದಲು  ಅಕ್ಟೋಬರ್ 14 ರಂದು ನಡೆಯಲಿದೆ. ನೆದರ್ಲ್ಯಾಂಡ್ಸ್ ವಿರುದ್ಧದ ಭಾರತದ ಕೊನೆಯ ಲೀಗ್ ಪಂದ್ಯ ಕೂಡಾ  ನವೆಂಬರ್ 11ರ ಬದಲಿಗೆ ನವೆಂಬರ್ 12 ರಂದು ನಡೆಯುತ್ತಿದೆ. ಈ ಡೇ ನೈಟ್ ಮ್ಯಾಚ್ ಬೆಂಗಳೂರಿನಲ್ಲಿ ನಡೆಯಲಿದೆ. ಅಂದು ದೀಪಾವಳಿ ಹಬ್ಬ. ದೀಪಾವಳಿಯಂದು ಟೀಂ ಇಂಡಿಯಾ ಮೈದಾನಕ್ಕೆ ಇಳಿಯುವುದಿಲ್ಲ. ಆದರೆ ಈ ಬಾರಿಯ ಈ ವಿಶೇಷ ದಿನದಂದು ಭಾರತ ಆಡಲಿದೆ. 

ಇದನ್ನೂ ಓದಿ : ಧಾರವಾಡದಲ್ಲಿ ಮುತ್ತಯ್ಯ ಮುರಳೀಧರನ್ ಕೈಗಾರಿಕೆ

ಕ್ರಿಕೆಟ್ ಇತಿಹಾಸದಲ್ಲಿ ಎರಡೇ ಬಾರಿ ನಡೆದಿರುವ ಘಟನೆ : 
ದೀಪಾವಳಿಯ ವಿಶೇಷ ಹಬ್ಬದಲ್ಲಿ ಟೀಂ ಇಂಡಿಯಾ ಎರಡು ಬಾರಿ ಮಾತ್ರ ಪಂದ್ಯವನ್ನು ಆಡಿದೆ. 1987 ರವಿಶ್ವಕಪ್‌ನಲ್ಲಿ ಮೊದಲ ಬಾರಿಗೆ  ದೀಪಾವಳಿಯ ದಿನದಂದು ಆಸ್ಟ್ರೇಲಿಯಾ ವಿರುದ್ದ ಇಂಡಿಯಾ ಆಡಿತ್ತು. ಇದಾದ ಬಳಿಕ 1992 ರಲ್ಲಿ, ಟೀಂ ಇಂಡಿಯಾ ಕೊನೆಯ ಬಾರಿಗೆ ದೀಪಾವಳಿಯ ಹಬ್ಬದಂದು ಜಿಂಬಾಬ್ವೆ ವಿರುದ್ಧ ಮೈದಾನಕ್ಕೆ ಇಳಿದಿತ್ತು. ವಿಶೇಷವೆಂದರೆ ಎರಡೂ ಬಾರಿ ಭಾರತ  ತಂಡ ಗೆದ್ದು ಬೀಗಿತ್ತು. 1987ರ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾವನ್ನು 56 ರನ್‌ಗಳಿಂದ ಸೋಲಿಸಿದ್ದರೆ 1992 ರಲ್ಲಿ ಟೀಂ ಇಂಡಿಯಾ ಜಿಂಬಾಬ್ವೆಯನ್ನು 30 ರನ್‌ಗಳಿಂದ  ಪರಾಭವಗೊಳಿಸಿತ್ತು. 

ಟೀಮ್ ಇಂಡಿಯಾ ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ : 
ಭಾರತ v/s ಆಸ್ಟ್ರೇಲಿಯಾ ಅಕ್ಟೋಬರ್ 8 ಚೆನ್ನೈ
ಭಾರತ v/s ಅಫ್ಘಾನಿಸ್ತಾನ ಅಕ್ಟೋಬರ್ 11 ದೆಹಲಿ
ಭಾರತ v/s ಪಾಕಿಸ್ತಾನ ಅಕ್ಟೋಬರ್ 14 ಅಹಮದಾಬಾದ್
ಭಾರತ v/s ಬಾಂಗ್ಲಾದೇಶ ಅಕ್ಟೋಬರ್ 19 ಪುಣೆ
ಭಾರತ v/s ನ್ಯೂಜಿಲೆಂಡ್ ಅಕ್ಟೋಬರ್ 22 ಧರ್ಮಶಾಲಾ
ಭಾರತ v/s ಇಂಗ್ಲೆಂಡ್ ಅಕ್ಟೋಬರ್ 29 ಲಕ್ನೋ
ಭಾರತ v/s ಕ್ವಾಲಿಫೈಯರ್,  ನವೆಂಬರ್, 2 ನವೆಂಬರ್, ಮುಂಬೈ
ಭಾರತ v/s ದಕ್ಷಿಣ ಆಫ್ರಿಕಾ, ನವೆಂಬರ್ 5, ಕೋಲ್ಕತ್ತಾ
ಭಾರತ v/s ಕ್ವಾಲಿಫೈಯರ್, ನವೆಂಬರ್ 12, ಬೆಂಗಳೂರು

ಇದನ್ನೂ ಓದಿ : Ind vs WI: ಮಿಂಚಿನ ಆಟಕ್ಕೆ ಹಳೆಯ ದಾಖಲೆಗಳೆಲ್ಲಾ ಉಡೀಸ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News