ಡಿಕೆ ಜೊತೆ ಪಾಂಡ್ಯ ವರ್ತನೆ ಸರಿಯೇ..? ಟ್ರೋಲ್ಗೆ ಗುರಿಯಾದ ಹಾರ್ದಿಕ್!
ದಿನೇಶ್ ಕಾರ್ತಿಕ್‌ಗೆ ಸ್ಟ್ರೈಕ್ ನೀಡದಿದ್ದರೂ, ಹಾರ್ದಿಕ್ ಪಾಂಡ್ಯ ಕೊನೆಯ ಎಸೆತದಲ್ಲಿ ವಿಶೇಷವಾಗಿ ಏನನ್ನೂ ಸಾಧಿಸಲಿಲ್ಲ. ಕೇವಲ 2 ರನ್ ಗಳಿಸಲಷ್ಟೇ ಸಶಕ್ತರಾದರು. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಕೋಪಗೊಂಡು, ದಿನೇಶ್ ಕಾರ್ತಿಕ್ರನ್ನು ಗೌರವಿಸದಿದ್ದಕ್ಕಾಗಿ ಹಾರ್ದಿಕ್ ಪಾಂಡ್ಯರನ್ನು ಟ್ರೋಲ್ ಮಾಡಲು ಪ್ರಾರಂಭಿಸಿದ್ದಾರೆ.
ಟೀಂ ಇಂಡಿಯಾದ ಆಲ್‌ರೌಂಡ್ ಆಟಗಾರ ಹಾರ್ದಿಕ್ ಪಾಂಡ್ಯ ಗುರುವಾರ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ತೋರಿದ ವರ್ತನೆಯಿಂದ ತೀವ್ರ ಟ್ರೋಲ್‌ಗೀಡಾಗಿದ್ದಾರೆ. ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಸಮಯದಲ್ಲಿ ಸಹ-ಆಟಗಾರ ದಿನೇಶ್ ಕಾರ್ತಿಕ್ ಜೊತೆ ವರ್ತಿಸಿದ ರೀತಿ ಅಭಿಮಾನಿಗಳಿಗೆ ತೀವ್ರ ನಿರಾಶೆಯನ್ನು ಮೂಡಿಸಿದೆ.
ಇದನ್ನೂ ಓದಿ: Ind vs SA : ಟಿ20 ಸರಣಿಯಲ್ಲಿ ಅನುಭವಿಗಳ ಭವಿಷ್ಯ : ಆಫ್ರಿಕನ್ ಗಳಿಗೆ ಮಾರಕವಾಗಲಿದ್ದಾರೆ ಈ ಆಟಗಾರ!
ಟೀಂ ಇಂಡಿಯಾದ ಬ್ಯಾಟಿಂಗ್ ಸಮಯದಲ್ಲಿ, ಇನ್ನಿಂಗ್ಸ್‌ನ ಕೊನೆಯ ಓವರ್‌ನ ಐದನೇ ಎಸೆತವನ್ನು ಆಡಿದ ನಂತರ ಹಾರ್ದಿಕ್ ಪಾಂಡ್ಯ ದಿನೇಶ್ ಕಾರ್ತಿಕ್‌ಗೆ ಸ್ಟ್ರೈಕ್ ನೀಡಲು ನಿರಾಕರಿಸಿದರು. ಭಾರತದ ಇನಿಂಗ್ಸ್‌ನ ಕೊನೆಯ ಓವರ್ ಅನ್ನು ಎನ್ರಿಕ್ ನಾರ್ಸಿಯಾ ಬೌಲ್ ಮಾಡಿದರು. ಈ ಓವರ್‌ನ ಕೊನೆಯ ಎಸೆತವನ್ನು ಎನ್ರಿಕ್ ನಾರ್ಸಿಯಾ ಬೌಲ್ ಮಾಡಿದಾಗ, ಹಾರ್ದಿಕ್ ಪಾಂಡ್ಯ ಚೆಂಡನ್ನು ಡಿಫೆಂಡ್ ಮಾಡಿದರು. ಆದರೆ ದಿನೇಶ್ ಕಾರ್ತಿಕ್‌ಗೆ ಸ್ಟ್ರೈಕ್ ನೀಡಲಿಲ್ಲ. ಇದು ಅಭಿಮಾನಿಗಳಿಗೆ ತೀವ್ರ ಅಸಮಾಧಾನ ಮೂಡುವಂತೆ ಮಾಡಿದೆ.
India vs SA T20I series: ಕೆ.ಎಲ್.ರಾಹುಲ್, ಕುಲದೀಪ್ ಯಾದವ್ ಸರಣಿಯಿಂದ ಔಟ್
ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಭಾರತವನ್ನು ದಕ್ಷಿಣ ಆಫ್ರಿಕಾ ಏಳು ವಿಕೆಟ್‌ಗಳಿಂದ ಸೋಲಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ ದಕ್ಷಿಣ ಆಫ್ರಿಕಾಗೆ 212 ರನ್‌ಗಳ ಗುರಿ ನೀಡಿತ್ತು. ಗುರಿ ಬೆನ್ನತ್ತಿದ್ದ ಪ್ರವಾಸಿ ತಂಡ 5 ಎಸೆತಗಳು ಬಾಕಿ ಇರುವಾಗಕೇ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಇನ್ನು ಎರಡನೇ ಟಿ20 ಪಂದ್ಯ ಜೂನ್ 12ರಂದು ಭಾನುವಾರ ಕಟಕ್‌ನಲ್ಲಿ ನಡೆಯಲಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.