ಟೀಂ ಇಂಡಿಯಾಗೆ ಸಂಕಷ್ಟವಾಗ್ತಾರಾ ಧೋನಿ ಆಪ್ತ?: ಐಪಿಎಲ್‌ನಲ್ಲಿ ಮಾರಕ ದಾಳಿ ನಡೆಸಿದ್ದ ಕ್ರಿಕೆಟಿಗ

ಭಾರತ ವಿರುದ್ಧದ ಮುಂಬರುವ T20 ಸರಣಿಗೆ ಸಜ್ಜಾಗುತ್ತಿರುವ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಡ್ವೇನ್ ಪ್ರಿಟೋರಿಯಸ್, ಮಹೇಂದ್ರ ಸಿಂಗ್ ಧೋನಿ ಅವರ ಆತ್ಮವಿಶ್ವಾಸವನ್ನು ಹೊಂದಲು ಬಯಸುತ್ತೇನೆ ಎಂದು ಸೋಮವಾರ ಹೇಳಿದ್ದರು. 

Written by - Bhavishya Shetty | Last Updated : Jun 7, 2022, 12:21 PM IST
  • ಕ್ಯಾಪ್ಟನ್‌ ಕೂಲ್‌ ಬಗ್ಗೆ ಮಾತನಾಡಿದ ಡ್ವೇನ್ ಪ್ರಿಟೋರಿಯಸ್
  • ಧೋನಿ ಅವರ ಆತ್ಮವಿಶ್ವಾಸದ ಬಗ್ಗೆ ಡ್ವೇನ್‌ ಮೆಚ್ಚುಗೆ
  • ಐಪಿಎಲ್‌ನಲ್ಲಿ ಸಿಎಸ್‌ಕೆ ಪರ ಆಡಿದ್ದ ಡ್ವೇನ್‌
ಟೀಂ ಇಂಡಿಯಾಗೆ ಸಂಕಷ್ಟವಾಗ್ತಾರಾ ಧೋನಿ ಆಪ್ತ?: ಐಪಿಎಲ್‌ನಲ್ಲಿ ಮಾರಕ ದಾಳಿ ನಡೆಸಿದ್ದ ಕ್ರಿಕೆಟಿಗ title=
Dwaine Pretorius

ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡಿದ್ದ ಆಲ್ ರೌಂಡರ್ ಡ್ವೇನ್ ಪ್ರಿಟೋರಿಯಸ್ ಈಗ ಜೂನ್ 9 ರಿಂದ ಪ್ರಾರಂಭವಾಗುವ ಭಾರತ ವಿರುದ್ಧದ 5 ಪಂದ್ಯಗಳ ಟಿ 20 ಸರಣಿಯಲ್ಲಿ ತಮ್ಮ ರಾಷ್ಟ್ರೀಯ ತಂಡ ದಕ್ಷಿಣ ಆಫ್ರಿಕಾದ ಪರ ಆಡಲಿದ್ದಾರೆ. ಟಿ20 ಸರಣಿಯಲ್ಲಿ ಡ್ವೇನ್ ಪ್ರಿಟೋರಿಯಸ್ ತಮ್ಮ ಆಟದ ಮೂಲಕ ಭಾರತಕ್ಕೆ ಸಂಕಷ್ಟ ತಂದೊಡ್ಡುವ ಸಾಧ್ಯತೆಯಿದೆ. 

ಇದನ್ನೂ ಓದಿ: ಎಮ್ಮೆಯ ಮಾಲೀಕನ ಪತ್ತೆಗೆ ಡಿಎನ್ ಎ ಟೆಸ್ಟ್ ಮಾಡಿಸಲು ಪೊಲೀಸರ ಆದೇಶ

ಭಾರತ ವಿರುದ್ಧದ ಮುಂಬರುವ T20 ಸರಣಿಗೆ ಸಜ್ಜಾಗುತ್ತಿರುವ ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಡ್ವೇನ್ ಪ್ರಿಟೋರಿಯಸ್, ಮಹೇಂದ್ರ ಸಿಂಗ್ ಧೋನಿ ಅವರ ಆತ್ಮವಿಶ್ವಾಸವನ್ನು ಹೊಂದಲು ಬಯಸುತ್ತೇನೆ ಎಂದು ಸೋಮವಾರ ಹೇಳಿದ್ದರು. ಪ್ರಿಟೋರಿಯಸ್ ಈ ವರ್ಷ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಪರವಾಗಿ ಆಡಿದ್ದರು. ಡ್ವೇನ್ ಪ್ರಿಟೋರಿಯಸ್ 6 ಪಂದ್ಯಗಳಲ್ಲಿ 44 ರನ್ ಗಳಿಸಿ ಆರು ವಿಕೆಟ್ ಪಡೆದಿದ್ದರು. 

"ಹಲವು ಪಂದ್ಯಗಳನ್ನು ಆಡುವ ಅವಕಾಶ ಸಿಗದಿದ್ದರೂ, ಧೋನಿ ಜತೆ ಆಡುವ ಮೂಲಕ ಸಾಕಷ್ಟು ಕಲಿತಿದ್ದೇನೆ ಎಂದು ಡ್ವೇನ್ ಪ್ರಿಟೋರಿಯಸ್ ಹೇಳಿದ್ದಾರೆ. ಡ್ವೇನ್ ಪ್ರಿಟೋರಿಯಸ್, 'ಮೊದಲ ಐಪಿಎಲ್ ಆಡುವುದು ನನ್ನ ಉತ್ತಮ ಅನುಭವ. ಇದು ನನ್ನ ಬಹುದಿನಗಳ ಕನಸಾಗಿತ್ತು ಮತ್ತು ಸಿಎಸ್‌ಕೆಯಂತಹ ಯಶಸ್ವಿ ತಂಡದೊಂದಿಗೆ ಆಡುವ ಅವಕಾಶವನ್ನು ನಾನು ಸಂಪೂರ್ಣವಾಗಿ ಆನಂದಿಸಿದ್ದೇನೆ" ಎಂದಿದ್ದಾರೆ.  

ಡ್ವೇನ್ ಪ್ರಿಟೋರಿಯಸ್, "ಧೋನಿ ನಾಯಕತ್ವದಲ್ಲಿ ಆಡುವುದು ಮತ್ತು ಅವರೊಂದಿಗೆ ಬ್ಯಾಟಿಂಗ್ ಮಾಡುವುದು ತುಂಬಾ ಖುಷಿಯಾಗಿದೆ. ಅವರು ಭಾರತದಲ್ಲಿ ದೊಡ್ಡ ಬ್ರಾಂಡ್ ಆಗಿದ್ದಾರೆ. ಭಾರತೀಯ ಕ್ರಿಕೆಟ್‌ಗಾಗಿ ಅವರು ಮಾಡಿರುವ ಅತ್ಯುತ್ತಮ ಕೆಲಸಗಳನ್ನು ನಾನು ಕಂಡಿದ್ದೇನೆ. ಇದು ಒಳ್ಳೆಯ ಅನುಭವ" ಎಂದಿದ್ದಾರೆ. 

ಇದನ್ನೂ ಓದಿ: ಡಿಸ್ನಿಲ್ಯಾಂಡ್‌ನಲ್ಲಿ ಪ್ರೇಯಸಿಗೆ ಪ್ರಪೋಸ್‌: ಅಡ್ಡಬಂದ ಉದ್ಯೋಗಿ ಮಾಡಿದ್ದೇನು ಗೊತ್ತಾ?

"ನಾನು ಅವರಿಂದ ಕಲಿತ ದೊಡ್ಡ ವಿಷಯವೆಂದರೆ ಮೈದಾನದಲ್ಲಿ ಶಾಂತವಾಗಿರುವುದು. ಧೋನಿ ತುಂಬಾ ಥ್ರಿಲ್ ಆಗಿರುವುದಿಲ್ಲ. ಅವರು ಯಾವಾಗಲೂ ಆಶಾವಾದಿಯಾಗಿರುತ್ತಾರೆ" ಎಂದು ಕ್ಯಾಪ್ಟನ್‌ ಕೂಲ್‌ನ ಗುಣಗಾನ ಮಾಡಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News