FIFA Japanese Fans Video: ಫಿಫಾ ಸ್ಟೇಡಿಯಂ ಸ್ವಚ್ಛಗೊಳಿಸಿದ ಜಪಾನ್ ಫ್ಯಾನ್ಸ್: ಈ ಸೇವೆಗೆ ಕಾರಣ ಏನು ಗೊತ್ತಾ?
FIFA Japanese Fans Video: ಫಿಫಾ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದ್ದು, ಈಗಾಗಲೇ ಈ ವೀಡಿಯೊವನ್ನು 125.4K ಮಂದಿ ವೀಕ್ಷಣೆ ಮಾಡಿದ್ದಾರೆ. ಪಂದ್ಯದ ನಂತರ ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳು ಖಾಲಿ ಬಾಟಲಿ, ಪ್ಲಾಸ್ಟಿಕ್ ಮತ್ತಿತರ ಕಸವನ್ನು ಸಂಗ್ರಹಿಸಿ ಕ್ರೀಡಾಂಗಣವನ್ನು ಸ್ವಚ್ಛಗೊಳಿಸಿದ್ದಾರೆ.
FIFA World Cup 2022: ಫಿಫಾ ವಿಶ್ವಕಪ್ 2022ರಲ್ಲಿ ಜರ್ಮನಿಯನ್ನು 2-1 ಗೋಲುಗಳಿಂದ ಸೋಲಿಸುವ ಮೂಲಕ ಜಪಾನ್ ಇತಿಹಾಸ ನಿರ್ಮಿಸಿದೆ. ಪಂದ್ಯ ಮುಗಿದ ಬಳಿಕ ಸ್ಟೇಡಿಯಂನಲ್ಲಿದ್ದ ಜಪಾನ್ ಅಭಿಮಾನಿಗಳು ಹಾಗೂ ಇಡೀ ತಂಡ ಸಂಭ್ರಮದಿಂದ ಕುಣಿದು ಕುಪ್ಪಳಿಸಿದೆ. ಇದಾದ ಬಳಿಕ ವಿಡಿಯೋವೊಂದು ಹೊರಬಿದ್ದಿದ್ದು, ಪಂದ್ಯ ವೀಕ್ಷಿಸಲು ಬಂದಿದ್ದ ಅಭಿಮಾನಿಗಳು ಮಾಡಿರುವ ಈ ಕಾರ್ಯ ಫುಟ್ ಬಾಲ್ ಆಟಕ್ಕಿಂತ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿದೆ.
ಫಿಫಾ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದ್ದು, ಈಗಾಗಲೇ ಈ ವೀಡಿಯೊವನ್ನು 125.4K ಮಂದಿ ವೀಕ್ಷಣೆ ಮಾಡಿದ್ದಾರೆ. ಪಂದ್ಯದ ನಂತರ ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳು ಖಾಲಿ ಬಾಟಲಿ, ಪ್ಲಾಸ್ಟಿಕ್ ಮತ್ತಿತರ ಕಸವನ್ನು ಸಂಗ್ರಹಿಸಿ ಕ್ರೀಡಾಂಗಣವನ್ನು ಸ್ವಚ್ಛಗೊಳಿಸಿದ್ದಾರೆ.
ಇದನ್ನೂ ಓದಿ: Lionel Messi In Shock: ಲಿಯೋನೆಲ್ ಮೆಸ್ಸಿಗೆ ಆಘಾತ ನೀಡಿದ ಸೌದಿ ಅರೇಬಿಯಾ: ಬದಲಾಯಿಸಲಾಗದ ಇತಿಹಾಸಕ್ಕೆ ಬ್ರೇಕ್!
ಹೃದಯ ಗೆದ್ದ ಜಪಾನೀ ಅಭಿಮಾನಿಗಳ ವಿಡಿಯೋ ನೋಡಿ:
FIFA World Cup 2022: ವಿಶ್ವ ದಾಖಲೆ ನಿರ್ಮಿಸಿದ ಕ್ರಿಸ್ಟಿಯಾನೋ ರೊನಾಲ್ಡೊ!
ಜರ್ಮನಿಯನ್ನು 2-1 ಗೋಲುಗಳಿಂದ ಸೋಲಿಸಿದ ಜಪಾನ್ ಇತಿಹಾಸ ನಿರ್ಮಿಸಿದೆ. FIFA ವಿಶ್ವಕಪ್ 2022 ಅದೆಷ್ಟೋ ಅಚ್ಚರಿಗೆ ಸಾಕ್ಷಿಯಾಗಿದೆ. ಮೊದಲು ಫುಟ್ ಬಾಲ್ ದೈತ್ಯ ತಂಡ ಅರ್ಜೆಂಟೀನಾವನ್ನು ಸೌದಿ ಅರೆಬಿಯಾ ತಂಡ ಸೋಲಿಸುವ ಮೂಲಕ ಇಡೀ ಜಗತ್ತನ್ನು ಅಚ್ಚರಿಗೊಳಿಸಿತು. ಈ ಬಳಿಕ ಜಪಾನ್ 4 ಬಾರಿ ಚಾಂಪಿಯನ್ ಆಗಿದ್ದ ಜರ್ಮನಿಯನ್ನು 2-1 ಗೋಲುಗಳಿಂದ ಸೋಲಿಸುವ ಮೂಲಕ ದೊಡ್ಡ ಇತಿಹಾಸವನ್ನು ಬರೆಯಿತು. FIFA ಶ್ರೇಯಾಂಕದಲ್ಲಿ ಜರ್ಮನಿ ತಂಡ 11 ನೇ ಸ್ಥಾನದಲ್ಲಿದೆ ಮತ್ತು ಜಪಾನ್ 24 ನೇ ಸ್ಥಾನದಲ್ಲಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.