ಕತಾರ್ : ಕತಾರ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಘಾನಾ ವಿರುದ್ಧದ ಪಂದ್ಯದಲ್ಲಿ ಪೋರ್ಚುಗಲ್ ಪರವಾಗಿ ಕ್ರಿಸ್ಟಿಯಾನೋ ರೊನಾಲ್ಡೊ ಪೆನಾಲ್ಟಿ ಗೋಲು ಗಳಿಸಿದರು.ಆ ಮೂಲಕ ಅವರು ಈಗ ಐದು ವಿಶ್ವಕಪ್‌ಗಳಲ್ಲಿ ಸ್ಕೋರ್ ಮಾಡಿದ ಮೊದಲ ಫುಟ್‌ಬಾಲ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
37 ವರ್ಷ ವಯಸ್ಸಿನ ರೋನಾಲ್ಡೋ, ಸುಮಾರು 60 ನೇ ನಿಮಿಷದಲ್ಲಿ ಪೆನಾಲ್ಟಿ ಗೆದ್ದ ನಂತರ ತಮ್ಮ 8 ನೇ FIFA ವಿಶ್ವಕಪ್ ಗೋಲು ಗಳಿಸಿದರು.
Out of this world 🇵🇹
🖐 Cristiano Ronaldo becomes the first man to score at five FIFA World Cups#FIFAWorldCup | @Cristiano pic.twitter.com/3UKqXLsZWd
— FIFA World Cup (@FIFAWorldCup) November 24, 2022
FIFA ವಿಶ್ವಕಪ್ ಇತಿಹಾಸದಲ್ಲಿ ರೊನಾಲ್ಡೊ ಗಳಿಸಿದ ಗೋಲುಗಳು
2006: 1 ಗೋಲು
2010: 1 ಗೋಲು
2014: 1 ಗೋಲು
2018: 4 ಗೋಲು
2022: 1 ಗೋಲು* (ಇಲ್ಲಿಯವರೆಗೆ)
ರೋನಾಲ್ಡೋ 2006 ರಲ್ಲಿ ಮೊದಲ ಬಾರಿಗೆ ವಿಶ್ವಕಪ್‌ನಲ್ಲಿ ಗೋಲು ಗಳಿಸಿದ್ದರು ಮತ್ತು ಅವರು ಇದುವರೆಗೆ 118 ಅಂತರರಾಷ್ಟ್ರೀಯ ಗೋಲುಗಳನ್ನು ಗಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.