Lionel Messi Injury: ಫಿಫಾ ವಿಶ್ವಕಪ್-2022 ರ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಜಾಗತಿಕ ಟೂರ್ನಿಯ ಪ್ರಶಸ್ತಿ ಸುತ್ತಿನ ಪಂದ್ಯ ಅರ್ಜೆಂಟೀನಾ ಮತ್ತು ಫ್ರಾನ್ಸ್ ನಡುವೆ ನಡೆಯಲಿದೆ. ಈ ಪಂದ್ಯ ಡಿಸೆಂಬರ್ 18 ರಂದು ಲುಸೈಲ್ ಸ್ಟೇಡಿಯಂನಲ್ಲಿ ನಡೆಯಲಿದ್ದು, ಈ ಮಧ್ಯೆ ಲಿಯೋನೆಲ್ ಮೆಸ್ಸಿ ಗಾಯಗೊಂಡಿದ್ದಾರೆ ಎಂಬ ದೊಡ್ಡ ಸುದ್ದಿ ಬರುತ್ತಿದೆ. ಕ್ರೊವೇಷಿಯಾ ವಿರುದ್ಧದ ಪಂದ್ಯದಲ್ಲಿ ಮೆಸ್ಸಿ ಮಂಡಿರಜ್ಜು ಬಗ್ಗೆ ಚಿಂತಿತರಾಗಿದ್ದರು. ಅರ್ಜೆಂಟೀನಾದ ಈ ಸೂಪರ್‌ಸ್ಟಾರ್ ಗುರುವಾರ ಅಭ್ಯಾಸಕ್ಕೆಂದು ಮೈದಾನಕ್ಕೆ ಇಳಿದಿರಲಿಲ್ಲ. ಇದೀಗ ಫೈನಲ್ ಪಂದ್ಯದಲ್ಲೂ ಮೆಸ್ಸಿ ಕಾಣಿಸಿಕೊಳ್ಳದೇ ಇರಬಹುದೆಂಬ ಭಯ ಅಭಿಮಾನಿಗಳಲ್ಲಿ ಮೂಡಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Chris Gayle in IPL: IPL-2023ರಲ್ಲಿ ಕ್ರಿಸ್ ಗೇಲ್ ಎಂಟ್ರಿ: ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ‘ಯೂನಿವರ್ಸ್ ಬಾಸ್'


ಮಂಗಳವಾರ ನಡೆದ ಫಿಫಾ ವಿಶ್ವಕಪ್ ಪಂದ್ಯದಲ್ಲಿ ಅರ್ಜೆಂಟೀನಾ ಕ್ರೊವೇಷಿಯಾ ವಿರುದ್ಧ 3-0 ಅಂತರದ ಜಯ ದಾಖಲಿಸಿದೆ. ಈ ಪಂದ್ಯದ ಸಮಯದಲ್ಲಿ, 35 ವರ್ಷದ ಮೆಸ್ಸಿ ಹಲವಾರು ಬಾರಿ ತಮ್ಮ ಮಂಡಿರಜ್ಜು ಹಿಡಿದುಕೊಂಡಿದ್ದರು. ಪಂದ್ಯದ ವೇಳೆ ಅವರು ತಮ್ಮ ಮಂಡಿರಜ್ಜಿಗೆ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಗುರುವಾರ ತಂಡದೊಂದಿಗೆ ಅಭ್ಯಾಸಕ್ಕೂ ಬಂದಿರಲಿಲ್ಲ. ಇವರ ಹೊರತಾಗಿ ಹಲವು ಪ್ರಮುಖ ಆಟಗಾರರಿಗೂ ವಿಶ್ರಾಂತಿ ನೀಡಲಾಗಿದೆ. ಫೂಟ್ ಮರ್ಕಾಟೊ ವೆಬ್‌ಸೈಟ್ ಪ್ರಕಾರ, ಮೆಸ್ಸಿ ತನ್ನ ಮಂಡಿರಜ್ಜು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.


ಫೂಟ್ ಮರ್ಕಾಟೊ ವರದಿಯ ಪ್ರಕಾರ, ಮೆಸ್ಸಿ ಮಂಡಿರಜ್ಜು ತೊಂದರೆ ಅನುಭವಿಸುತ್ತಿದ್ದಾರೆ. ಆದರೆ ಅವರು ಫೈನಲ್‌ನಿಂದ ಹೊರಹೋಗುವ ಸಾಧ್ಯತೆ ಇಲ್ಲ ಎಂದು ಸುದ್ದಿ ಕೇಳಿಬಂದಿದೆ. ಆದರೂ ಸಹ ಅಭಿಮಾನಿಗಳು ಭಯಭೀತರಾಗಿದ್ದಾರೆ. ಈ ವರದಿಯನ್ನು ಉಲ್ಲೇಖಿಸಿ, ಕೆಲವು ಬಳಕೆದಾರರು ಮೆಸ್ಸಿ ಫೈನಲ್‌ನಲ್ಲಿ ಆಡದಿದ್ದರೆ, ಫೈನಲ್‌ನ ಉತ್ಸಾಹ ಕಡಿಮೆಯಾಗುತ್ತದೆ ಎಂದು ಬರೆದುಕೊಂಡಿದ್ದಾರೆ.


ಇದನ್ನೂ ಓದಿ: Virat Kohli : ವಿರಾಟ್ ಕೊಹ್ಲಿ ವೃತ್ತಿಜೀವನದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಕೋಚ್ ದ್ರಾವಿಡ್!


ಫ್ರಾನ್ಸ್ ಮತ್ತು ಅರ್ಜೆಂಟೀನಾ ನಡುವೆ ವಿಶ್ವಕಪ್ ಫೈನಲ್


ಫಿಫಾ ವಿಶ್ವಕಪ್‌ನ ಫೈನಲ್ ಪಂದ್ಯ ಫ್ರಾನ್ಸ್ ಮತ್ತು ಅರ್ಜೆಂಟೀನಾ ನಡುವೆ ನಡೆಯಲಿದೆ. ಈ ಪಂದ್ಯ ಡಿಸೆಂಬರ್ 18 ರಂದು ಅಂದರೆ ಭಾನುವಾರ ನಡೆಯಲಿದೆ. ಅರ್ಜೆಂಟೀನಾ ಸೆಮಿಫೈನಲ್‌ನಲ್ಲಿ ಕ್ರೊವೇಷಿಯಾವನ್ನು 3-0 ಗೋಲುಗಳಿಂದ ಸೋಲಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿತು. ಅದೇ ಸಮಯದಲ್ಲಿ ಫ್ರಾನ್ಸ್ ಮೊರೊಕ್ಕೊ ವಿರುದ್ಧ 2-0 ಅಂತರದಲ್ಲಿ ಗೆದ್ದು ಫೈನಲ್ ಗೆ ಲಗ್ಗೆ ಇಟ್ಟಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.