Virat Kohli : ವಿರಾಟ್ ಕೊಹ್ಲಿ ವೃತ್ತಿಜೀವನದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಕೋಚ್ ದ್ರಾವಿಡ್!

 Virat Kohli : ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಸ್ಟಾರ್ ಬ್ಯಾಟ್ಸಮನ್ ವಿರಾಟ್ ಕೊಹ್ಲಿ ಫಾರ್ಮ್ ಮತ್ತು ಅವರ ವೃತ್ತಿಜೀವನದ ಬಗ್ಗೆ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. ಕೋಚ್ ದ್ರಾವಿಡ್ ನೀಡಿರುವ ಹೇಳಿಕೆ ಸಂಚಲನ ಮೂಡಿಸಿದೆ.

Written by - Channabasava A Kashinakunti | Last Updated : Dec 15, 2022, 09:25 PM IST
  • ಕೊಹ್ಲಿ ವೃತ್ತಿಜೀವನದ ಬಗ್ಗೆ ಕೋಚ್ ದ್ರಾವಿಡ್ ಹೇಳಿದ್ದು ಹೀಗೆ
  • ಏಕಾಏಕಿ ಸಂಚಲನ ಮೂಡಿಸಿದ ಕೋಚ್ ದ್ರಾವಿಡ್ ಹೇಳಿಕೆ
  • ಈ ವಿಷಯದಲ್ಲಿ ಟೀಂ ಇಂಡಿಯಾ ಅಪಾಯದಲ್ಲಿದೆ
Virat Kohli : ವಿರಾಟ್ ಕೊಹ್ಲಿ ವೃತ್ತಿಜೀವನದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಕೋಚ್ ದ್ರಾವಿಡ್! title=

 Virat Kohli : ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಸ್ಟಾರ್ ಬ್ಯಾಟ್ಸಮನ್ ವಿರಾಟ್ ಕೊಹ್ಲಿ ಫಾರ್ಮ್ ಮತ್ತು ಅವರ ವೃತ್ತಿಜೀವನದ ಬಗ್ಗೆ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. ಕೋಚ್ ದ್ರಾವಿಡ್ ನೀಡಿರುವ ಹೇಳಿಕೆ ಸಂಚಲನ ಮೂಡಿಸಿದೆ. ಆಟದ ಬಗ್ಗೆ ಇಷ್ಟೊಂದು ತಿಳುವಳಿಕೆ ಹೊಂದಿರುವ ವಿರಾಟ್ ಕೊಹ್ಲಿ ಯಾವಾಗ ಆಕ್ರಮಣಕಾರಿ ಮತ್ತು ಯಾವಾಗ ಆಟವನ್ನು ನಿಯಂತ್ರಿಸಬೇಕು ಎಂಬುದನ್ನು ಪಂದ್ಯದ ಸಮಯದಲ್ಲಿ ಸುಲಭವಾಗಿ ತಿಳಿದುಕೊಳ್ಳಬೇಕು ಎಂದು ಹೇಳಿದ್ದಾರೆ.

 ಕೊಹ್ಲಿ ವೃತ್ತಿಜೀವನದ ಬಗ್ಗೆ ಕೋಚ್ ದ್ರಾವಿಡ್ ಹೇಳಿದ್ದು ಹೀಗೆ

ತಮ್ಮ ವೆಬ್‌ಸೈಟ್‌ನಲ್ಲಿ ಬಿಸಿಸಿಐ ವೀಡಿಯೊದಲ್ಲಿ ಮಾತನಾಡಿದ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಕೊಹ್ಲಿ ತರಬೇತಿಯ ಸಮಯದಲ್ಲಿ ಅದೇ ಬಲವಾದ ಮನೋಭಾವವನ್ನು ಕಾಪಾಡಿಕೊಳ್ಳುತ್ತಾರೆ. ಆದ್ರೆ, ಈ ವರ್ಷದ ಆರಂಭದಲ್ಲಿ ಯುಎಇಯಲ್ಲಿ ನಡೆದ ಏಷ್ಯಾಕಪ್‌ನಲ್ಲಿ ದೀರ್ಘಕಾಲದ ಕಳಪೆ ಫಾರ್ಮ್‌ನ ನಂತರ ಕೊಹ್ಲಿ ಫಾರ್ಮ್‌ಗೆ ಮರಳಿದರು. ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲೂ ಅವರು ಅದೇ ಅತ್ಯುತ್ತಮ ಲಯವನ್ನು ಮುಂದುವರಿಸಿದರು. ಕಳೆದ ವಾರ ಭಾರತದ ಮಾಜಿ ನಾಯಕ ತಮ್ಮ 44ನೇ ಏಕದಿನ ಶತಕ ಪೂರೈಸಿದ್ದರು.

ಇದನ್ನೂ ಓದಿ : IND vs BAN: ಟೀಂ ಇಂಡಿಯಾಗೆ ಈ ಅಪಾಯಕಾರಿ ಆಟಗಾರನ ದಿಢೀರ್ ಎಂಟ್ರಿ: ಭಯದಲ್ಲಿ ಬಾಂಗ್ಲಾ ತಂಡ!

ಏಕಾಏಕಿ ಸಂಚಲನ ಮೂಡಿಸಿದ ಕೋಚ್ ದ್ರಾವಿಡ್ ಹೇಳಿಕೆ 

ಇನ್ನೂ ಮುಂದುವರೆದು ಮಾತನಾಡಿದ ಅವರು, ಅವರು (ವಿರಾಟ್) ಯಾವಾಗ ಆಕ್ರಮಣಕಾರಿಯಾಗಬೇಕು ಮತ್ತು ಯಾವಾಗ ಆಟವನ್ನು ನಿಯಂತ್ರಿಸಬೇಕು ಎಂಬುವುದು ಅವರಿಗೆ ಗೊತ್ತಿದೆ, ಅವರನ್ನು ನೋಡಲು ಮತ್ತು ಅವರು ಇನ್ನಿಂಗ್ಸ್ ಅನ್ನು ವಿಸ್ತರಿಸಲು ಸಾಧ್ಯವಾದರೆ ಅವರ ಆಟ ಅದ್ಭುತವಾಗಿದೆ, 50 ಓವರ್‌ಗಳ ಕ್ರಿಆಟದಲ್ಲಿ ವಿರಾಟ್ ಉತ್ತಮ ದಾಖಲೆ ಹೊಂದಿದ್ದಾರೆ, ಅವರು ಆಡಿದ ಪಂದ್ಯಗಳ ಸಂಖ್ಯೆ ಅದ್ಭುತವಾಗಿದೆ' ಎಂದು ಹೇಳಿದರು.

ಈ ವಿಷಯದಲ್ಲಿ ಟೀಂ ಇಂಡಿಯಾ ಅಪಾಯದಲ್ಲಿದೆ

ಆಟಗಾರರ ತರಬೇತಿ ಬಗ್ಗೆ ಮಾತನಾಡಿದ ಅವರು, ವಿರಾಟ್ ಫಾರ್ಮ್‌ನಲ್ಲಿದ್ದರೂ ಇಲ್ಲದಿದ್ದರೂ ತರಬೇತಿಯಲ್ಲಿ ಅವರ ಉತ್ಸಾಹ ಸ್ವಲ್ಪವೂ ಕಡಿಮೆಯಾಗುವುದಿಲ್ಲ ಮತ್ತು ತಂಡದ ಯುವ ಆಟಗಾರರು ಇದರಿಂದ ಕಲಿಯಬಹುದು. ನಾನು ಅವರನ್ನು ನೋಡಿದ ಸಮಯದಿಂದ ಅವರು ಈ ರೀತಿ ಕಠಿಣ ತರಬೇತಿಯನ್ನು ನಡೆಸುತ್ತಲೇ ಇದ್ದಾರೆ. ಇದು ತಂಡದ ಯುವ ಆಟಗಾರರಿಗೆ ಉತ್ತಮ ಪಾಠವಾಗಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಅಂತಿಮ ಸ್ಥಾನಕ್ಕಾಗಿ ಪೈಪೋಟಿ ಈಗ ತೀವ್ರಗೊಂಡಿದೆ, ತಂಡಗಳು ತಮ್ಮ ಫಲಿತಾಂಶಗಳ ಅನ್ವೇಷಣೆಯಲ್ಲಿ ಹೆಚ್ಚು ಆಕ್ರಮಣಕಾರಿಯಾಗುತ್ತಿವೆ. ಕೆಲವು ದಿನಗಳಿಂದ ತಂಡಗಳು ಅತ್ಯಂತ ಆಕ್ರಮಣಕಾರಿ ಆಟವಾಡುತ್ತಿವೆ. ನಾವು ಅನೇಕ ಫಲಿತಾಂಶಗಳನ್ನು ನೋಡಿದ್ದೇವೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್‌ಗಳು ಅಪಾಯದಲ್ಲಿರುವುದರಿಂದ ತಂಡಗಳು ಈಗ ಹಿಂದೆಂದಿಗಿಂತಲೂ ಹೆಚ್ಚು ಫಲಿತಾಂಶಗಳಿಗಾಗಿ ಆಡಲೇಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ : Ishan Kishan Century : ದ್ವಿಶತಕದ ಬಳಿಕ ಮತ್ತೆ 6,6,6,6,6,6,6,6 ಸಿಡಿಸಿದ ಇಶಾನ್ ಕಿಶನ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News