Ishan Kishan Century : ದ್ವಿಶತಕದ ಬಳಿಕ ಮತ್ತೆ 6,6,6,6,6,6,6,6 ಸಿಡಿಸಿದ ಇಶಾನ್ ಕಿಶನ್!

Ishan Kishan in Ranji Trophy 2022-23 : ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯದಲ್ಲಿ ಅತಿ ವೇಗದ ದ್ವಿಶತಕ ಸಿಡಿಸಿ ಬಿರುಗಾಳಿ ಎಬ್ಬಿಸಿದ್ದ ಇಶಾನ್ ಕಿಶನ್ ಮತ್ತೆ ಟೆಸ್ಟ್ ಪಂದ್ಯದಲ್ಲಿ ಮತ್ತೆ ಸಿಕ್ಸರ್‌ಗಳ ಸುರಿಮಳೆಗೈದಿದ್ದಾರೆ.

Written by - Channabasava A Kashinakunti | Last Updated : Dec 15, 2022, 08:14 PM IST
  • ಬಾಂಗ್ಲಾದೇಶ ವಿರುದ್ಧದ ಅತಿ ವೇಗದ ದ್ವಿಶತಕ
  • ಶಾನ್ ಕಿಶನ್ ಮತ್ತೆ ಟೆಸ್ಟ್ ಪಂದ್ಯದಲ್ಲಿ ಮತ್ತೆ ಸಿಕ್ಸರ್‌ಗಳ ಸುರಿಮಳೆ
  • 8 ಸಿಕ್ಸರ್ ಮತ್ತು 9 ಬೌಂಡರಿಗಳ ಸಿಡಿಸ್ 132 ರನ್‌ಗಳ ಅತ್ಯುತ್ತಮ ಇನ್ನಿಂಗ್ಸ್
Ishan Kishan Century : ದ್ವಿಶತಕದ ಬಳಿಕ ಮತ್ತೆ 6,6,6,6,6,6,6,6 ಸಿಡಿಸಿದ ಇಶಾನ್ ಕಿಶನ್! title=

Ishan Kishan in Ranji Trophy 2022-23 : ಬಾಂಗ್ಲಾದೇಶ ವಿರುದ್ಧದ ಏಕದಿನ ಪಂದ್ಯದಲ್ಲಿ ಅತಿ ವೇಗದ ದ್ವಿಶತಕ ಸಿಡಿಸಿ ಬಿರುಗಾಳಿ ಎಬ್ಬಿಸಿದ್ದ ಇಶಾನ್ ಕಿಶನ್ ಮತ್ತೆ ಟೆಸ್ಟ್ ಪಂದ್ಯದಲ್ಲಿ ಮತ್ತೆ ಸಿಕ್ಸರ್‌ಗಳ ಸುರಿಮಳೆಗೈದಿದ್ದಾರೆ.

ಜಾರ್ಖಂಡ್ ಮತ್ತು ಕೇರಳ ನಡುವೆ ನಡೆಯುತ್ತಿರುವ ರಣಜಿ ಟ್ರೋಫಿ 2022-23 ಪಂದ್ಯದಲ್ಲಿ, ಇಶಾನ್ ಕಿಶನ್ 8 ಸಿಕ್ಸರ್ ಮತ್ತು 9 ಬೌಂಡರಿಗಳ ಸಿಡಿಸ್ 132 ರನ್‌ಗಳ ಅತ್ಯುತ್ತಮ ಇನ್ನಿಂಗ್ಸ್ ಅನ್ನು ಆಡಿದ್ದಾರೆ, ಇದು ತಂಡವು ಕೇರಳದ ಸ್ಕೋರ್‌ಗೆ ಹತ್ತಿರವಾಗಲು ಸಹಾಯ ಮಾಡಿತು.

ಇದನ್ನೂ ಓದಿ : IND vs BAN: ಟೀಂ ಇಂಡಿಯಾಗೆ ಈ ಅಪಾಯಕಾರಿ ಆಟಗಾರನ ದಿಢೀರ್ ಎಂಟ್ರಿ: ಭಯದಲ್ಲಿ ಬಾಂಗ್ಲಾ ತಂಡ!

ಇಶಾನ್ ಕಿಶನ್ ಅವರ ಬಲಿಷ್ಠ ಇನ್ನಿಂಗ್ಸ್ ನೆರವಿನಿಂದ ಜಾರ್ಖಂಡ್ ತಂಡ 340 ರನ್ ಗಳ ಸ್ಕೋರ್ ತಲುಪುವಲ್ಲಿ ಯಶಸ್ವಿಯಾಯಿತು. ವಾಸ್ತವವಾಗಿ, ಡಿಸೆಂಬರ್ 13 ರಂದು ಪ್ರಾರಂಭವಾದ ರಣಜಿ ಟ್ರೋಫಿ ಪಂದ್ಯದಲ್ಲಿ, ಕೇರಳ ಮೊದಲು ಬ್ಯಾಟಿಂಗ್ ಮಾಡುವಾಗ ಬೋರ್ಡ್ ಮೇಲೆ 475 ರನ್ಗಳ ಕಲೆ ಹಾಕಿತು. ಕೇರಳ ಪರ ಅಕ್ಷಯ್ ಚಂದ್ರನ್ 150 ರನ್ ಗಳ ಅತ್ಯುತ್ತಮ ಇನ್ನಿಂಗ್ಸ್ ಆಡಿದರು.

ಕೇರಳದ ನಂತರ ಜಾರ್ಖಂಡ್ ತಂಡ ಕೆಟ್ಟ ಆರಂಭ ಪಡೆದಿದೆ. ಕೇವಲ 114 ರನ್‌ಗಳಿಗೆ ತಂಡದ 4 ವಿಕೆಟ್‌ಗಳು ಪತನಗೊಂಡಿದ್ದವು. ಇದಾದ ಬಳಿಕ ಸೌರಭ್ ತಿವಾರಿ ಮತ್ತು ಇಶಾನ್ ಕಿಶನ್ ತಂಡವನ್ನು ನಿಭಾಯಿಸಿ 202 ರನ್ ಗಳ ಅಮೋಘ ಜೊತೆಯಾಟ ನಡೆಸಿದರು. ಆದರೆ, ಸೌರಭ್ ತಿವಾರಿ ಶತಕ ವಂಚಿತರಾಗಿ 97 ರನ್ ಗಳ ಇನಿಂಗ್ಸ್ ಆಡಿ ಪೆವಿಲಿಯನ್ ಗೆ ಮರಳಿದರು.

ಆದರೆ ಇಶಾನ್ ಕಿಶನ್ ಎಲ್ಲಿ ನಿಲ್ಲಲಿದ್ದರು? ಈ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯದಲ್ಲಿ 132 ರನ್ ಗಳಿಸಿ ತಂಡಕ್ಕೆ ಮಹತ್ವದ ಇನ್ನಿಂಗ್ಸ್ ಆಡಿದರು. ಇಶಾನ್ ಕಿಶನ್ ಔಟಾದಾಗ ತಂಡದ ಸ್ಕೋರ್ 329 ರನ್ ಆಗಿದ್ದು, ಆ ನಂತರ ಯಾವುದೇ ಬ್ಯಾಟ್ಸ್ ಮನ್ 7 ರನ್ ಗಿಂತ ಹೆಚ್ಚು ಗಳಿಸಲು ಸಾಧ್ಯವಾಗಲಿಲ್ಲ ಮತ್ತು ಕೇವಲ 15 ರನ್ ಗಳಲ್ಲಿ 4 ವಿಕೆಟ್ ಪತನವಾಯಿತು. ಈ ಮೂಲಕ ಜಾರ್ಖಂಡ್ ತಂಡ 340 ರನ್ ಪೇರಿಸಿತ್ತು.

ಬಾಂಗ್ಲಾದೇಶ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಈ ಬಿರುಸಿನ ಬ್ಯಾಟ್ಸ್‌ಮನ್ ವೇಗದ ದ್ವಿಶತಕ ಬಾರಿಸಿ ಸಂಚಲನ ಮೂಡಿಸಿದ್ದಾರೆ. ಇಶಾನ್ ಕೇವಲ 131 ಎಸೆತಗಳಲ್ಲಿ 10 ಸಿಕ್ಸರ್ ಮತ್ತು 24 ಬೌಂಡರಿಗಳ ಸಹಿತ 210 ರನ್ ಗಳಿಸಿದರು. ಇದರೊಂದಿಗೆ ಇಶಾನ್ ಏಕದಿನದಲ್ಲಿ ದ್ವಿಶತಕ ಸಿಡಿಸಿದ ನಾಲ್ಕನೇ ಆಟಗಾರ ಎನಿಸಿಕೊಂಡರು. ಇವರಲ್ಲದೆ ಸಚಿನ್ ತೆಂಡೂಲ್ಕರ್, ರೋಹಿತ್ ಶರ್ಮಾ ಮತ್ತು ವೀರೇಂದ್ರ ಸೆಹ್ವಾಗ್ ಭಾರತದಿಂದ ಏಕದಿನದಲ್ಲಿ ದ್ವಿಶತಕ ಗಳಿಸಿದ್ದಾರೆ.

ಇದನ್ನೂ ಓದಿ : Rohit Sharma Captaincy: ರೋಹಿತ್ ಶರ್ಮಾ ಸ್ಥಾನಕ್ಕೆ ಕುತ್ತು ತರಲಿದ್ದಾರೆ ಈ ಮೂವರು ಅಪಾಯಕಾರಿ ಆರಂಭಿಕ ಆಟಗಾರರು

Gallery Bengali Import - News

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News