ನವದೆಹಲಿ: ಇಂಗ್ಲೆಂಡ್ ವಿರುದ್ಧ 1986 ರ ವಿಶ್ವಕಪ್ ಕ್ವಾರ್ಟರ್‌ಫೈನಲ್‌ನಲ್ಲಿ ನಾಲ್ಕು ನಿಮಿಷಗಳಲ್ಲಿ ಎರಡು ಗೋಲುಗಳಲ್ಲಿ, ಡಿಯಾಗೋ ಮರಡೋನಾ ತಮ್ಮ ವ್ಯಕ್ತಿತ್ವದ ಎರಡು ಮುಖಗಳನ್ನು ಪುಟ್ಬಾಲ್ ಪ್ರೇಮಿಗಳಿಗೆ ತೋರಿಸಿದರು.


COMMERCIAL BREAK
SCROLL TO CONTINUE READING

ಅದರಲ್ಲಿ ಅವರ ಮೊದಲನೇ ಗೋಲು ಹ್ಯಾಂಡ್ ಆಫ್ ಗಾಡ್ ಎಂದೇ ಪುಟ್ಬಾಲ್ ಜಗತ್ತಿನಲ್ಲಿ ಪ್ರಸಿದ್ದಿಯನ್ನು ಹೊಂದಿದೆ.ಇನ್ನು ಅವರು ಗಳಿಸಿದ ಎರಡನೇ ಗೋಲ್ ಮರಡೋನಾ ಅವರನ್ನು ಪಿಲೆ ಅವರ ಸಾರ್ವಕಾಲಿಕ ಶ್ರೇಷ್ಠ ಪುಟ್ಬಾಲ್ ಆಟಗಾರನ ಸ್ಥಾನದಲ್ಲಿ ನಿಲ್ಲಿಸಿತ್ತು.


ಇದನ್ನೂ ಓದಿ: ಮಲೆ ಮಹದೇಶ್ವರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್: ಸಿಎಂ ಬೊಮ್ಮಾಯಿ


ಮೆಕ್ಸಿಕೋ ಸಿಟಿಯ ಬಿಸಿಲಿನ ತಾಪದಲ್ಲಿ ಅಜ್ಟೆಕಾ ಸ್ಟೇಡಿಯಂನ ಅಸಮ ಪಿಚ್‌ನಲ್ಲಿ ಆಟದ 51ನೇ ನಿಮಿಷದಲ್ಲಿ ಮರಡೋನಾ ಕೇವಲ 5 '6' ಗೆ ಹಾರಿ ಎಡ ಮುಷ್ಟಿಯಿಂದ ಗೋಲ್ ಕೀಪರ್ ಕಡೆ ತಳ್ಳಿದ್ದರು. ಇದು ಇಂಗ್ಲೆಂಡಿನ ಗೋಲ್‌ಕೀಪರ್ ಪೀಟರ್ ಶಿಲ್ಟನ್‌ ಅವರನ್ನು ದಾಟಿ ಗೋಲ್ ಆಗಿತ್ತು.


ನೂತನ ತಂತ್ರಜ್ಞಾನದ ಮೂಲಕ ರಸ್ತೆ ಡಾಂಬರೀಕರಣ: ದೇಶದಲ್ಲೇ ಇದೇ ಮೊದಲು


ಇದಾದ ನಾಲ್ಕು ನಿಮಿಷಗಳ ಅಚ್ಚರಿ ಎನ್ನುವಂತೆ ಮರೋಡೊನಾ ಗೋಲ್ ಗಳಿಸುವ ಮೂಲಕ ತಮ್ಮ ತಂಡದ ಪರವಾಗಿ ಕಪ್ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.ಅಂದಿನಿಂದ ಅವರ ಈ ಹ್ಯಾಂಡ್ ಆಫ್ ಗಾಡ್ ಪುಟ್ಬಾಲ್ ಜಗತ್ತಿನಲ್ಲಿ ಇಂದಿಗೂ ಶ್ರೇಷ್ಠ ಗೋಲ್ ಗಳಲ್ಲಿ ಅಗ್ರಸ್ಥಾನವನ್ನು ಹೊಂದಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.