Ambati Rayudu shocking statement on CSK: ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮಾರ್ಚ್ 22 ರಿಂದ ಪ್ರಾರಂಭವಾಗಲಿದೆ. ಐಪಿಎಲ್ 2024ರಲ್ಲಿ, ಈ ಬಾರಿ ಮುಂಬೈ ಇಂಡಿಯನ್ಸ್ ಪರ ಬ್ಯಾಟ್ಸ್‌’ಮನ್ ಆಗಿ ರೋಹಿತ್ ಶರ್ಮಾ ಕಣಕ್ಕಿಳಿಯಲಿದ್ದು, ನಾಯಕತ್ವ ಹಾರ್ದಿಕ್ ಕೈ ಸೇರಿದೆ.


COMMERCIAL BREAK
SCROLL TO CONTINUE READING

36 ವರ್ಷದ ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ವಜಾಗೊಳಿಸಿದ ನಂತರ ಕ್ರಿಕೆಟ್ ಅಭಿಮಾನಿಗಳಲ್ಲಿ ಬಹಳಷ್ಟು ಕೋಪವಿತ್ತು. ಕಳೆದ ಎರಡು ಋತುಗಳಲ್ಲಿ ಹಾರ್ದಿಕ್ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿದ್ದರು. ಐಪಿಎಲ್ 2022 ರಲ್ಲಿ, ಹಾರ್ದಿಕ್ ಪಾಂಡ್ಯ ಅವರ ನಾಯಕತ್ವದಲ್ಲಿ ಗುಜರಾತ್ ಟೈಟಾನ್ಸ್ ಪ್ರಶಸ್ತಿ ಎತ್ತಿ ಹಿಡಿದಿತ್ತು.


ಇದನ್ನೂ ಓದಿ: ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈಗೆ ಆರಾಧ್ಯ ಮಾತ್ರ ಮಗಳಲ್ಲ… ಮಗನೂ ಇದ್ದಾನೆ!


ಇದೀಗ ಟೀಂ ಇಂಡಿಯಾ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು ರೋಹಿತ್ ಶರ್ಮಾ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ರೋಹಿತ್ ಅವರು ಮುಂದಿನ ದಿನಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವುದನ್ನು ನೋಡಲು ರಾಯುಡು ಬಯಸಿದ್ದಾರೆ.


“ರೋಹಿತ್ 5-6 ವರ್ಷಗಳ ಕಾಲ ಐಪಿಎಲ್ ಅನ್ನು ಆರಾಮವಾಗಿ ಆಡಬಹುದು. ಧೋನಿ ನಿವೃತ್ತಿಯ ನಂತರ ಅವರು ಸಿಎಸ್‌’ಕೆ ನಾಯಕರಾಗಬಹುದು” ಎಂದು ರಾಯುಡು ನಂಬಿದ್ದಾರೆ.


ನ್ಯೂಸ್ 24 ಜೊತೆ ಮಾತನಾಡಿದ ಅಂಬಟಿ ರಾಯುಡು, “ರೋಹಿತ್ ಮುಂದಿನ ದಿನಗಳಲ್ಲಿ ಸಿಎಸ್‌’ಕೆ ಪರ ಆಡುವುದನ್ನು ನೋಡಲು ಬಯಸುತ್ತೇನೆ. ಧೋನಿ ನಿವೃತ್ತಿಯಾದರೆ ತಂಡದ ನಾಯಕನೂ ಆಗಬಹುದು. ಮುಂಬೈ ಇಂಡಿಯನ್ಸ್ ಪರ ಬಹಳ ಸಮಯದಿಂದ ಆಡುತ್ತಿದ್ದಾರೆ. ಅವರು ಸಿಎಸ್‌’ಕೆ ಪರ ಆಡಿದರೆ ಮತ್ತು ಅಲ್ಲಿಯೂ ಗೆದ್ದರೆ ಅದು ಉತ್ತಮ. ಸಿಎಸ್‌ಕೆ ನಾಯಕರಾಗುತ್ತಾರೋ ಇಲ್ಲವೋ ಎಂಬುದು ಅವರ ಮೇಲೆ ಅವಲಂಬಿತವಾಗಿರುತ್ತದೆ. ರೋಹಿತ್ ಮುಂದಿನ 5-6 ವರ್ಷಗಳ ಕಾಲ ಆರಾಮವಾಗಿ ಐಪಿಎಲ್ ಆಡಬಹುದು' ಎಂದು ಅಂಬಟಿ ರಾಯುಡು ಹೇಳಿದ್ದಾರೆ.


“ರೋಹಿತ್ ಶರ್ಮಾ ನಾಯಕನಾಗಲು ಬಯಸಿದರೆ, ಇಡೀ ಜಗತ್ತು ಅವರಿಗೆ ಮುಕ್ತವಾಗಿದೆ. ಅವರು ಎಲ್ಲಿ ಬೇಕಾದರೂ ಸುಲಭವಾಗಿ ಕ್ಯಾಪ್ಟನ್ ಆಗಬಹುದು. ಆ ಕರೆಯನ್ನು ಸ್ವೀಕರಿಸುವ ಅಧಿಕಾರ ರೋಹಿತ್‌’ಗೆ ಇರಬೇಕು. ನಾಯಕತ್ವ ವಹಿಸಬೇಕೇ ಅಥವಾ ಬೇಡವೇ ಎಂಬುದು ಅವರ ನಿರ್ಧಾರವಾಗಿರುತ್ತದೆ” ಎಂದಿದ್ದಾರೆ.


ಇದನ್ನೂ ಓದಿ: 2 ಚಮಚ ಮೊಸರಿಗೆ ಈ ಹಣ್ಣಿನ ರಸ ಬೆರೆಸಿ ಬಿಳಿಕೂದಲಿಗೆ ಹಚ್ಚಿ: ತಕ್ಷಣವೇ ಗಾಢ ಕಪ್ಪಾಗುವುದಲ್ಲದೆ ರೇಷ್ಮೆಯಂತೆ ಶೈನ್ ಆಗುತ್ತೆ!


ಪ್ರಸ್ತುತ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಐಪಿಎಲ್ 2025 ರಲ್ಲಿ ಆಡುತ್ತಾರೋ ಇಲ್ಲವೋ ಎಂಬುದು ಕುತೂಹಲಕಾರಿಯಾಗಿದೆ. ಮೊಣಕಾಲಿನ ಗಾಯದಿಂದ ಚೇತರಿಸಿಕೊಂಡ ನಂತರ, ಧೋನಿ IPL 2024 ರಲ್ಲಿ CSK ಅನ್ನು ಮುನ್ನಡೆಸಲು ಶ್ರಮಿಸುತ್ತಿದ್ದಾರೆ.


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ