Aishwarya Rai Son Viral News: ಬಾಲಿವುಡ್ ನಟಿ, ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಇತ್ತೀಚೆಗೆ ಸಿನಿಮಾಗಳಿಂದ ದೂರವಿದ್ದಾರೆ. ಹಾಗಂತ ಅವರ ಪ್ರಸಿದ್ಧಿಗೆ ಕಿಂಚಿತ್ತೂ ಕೊರತೆ ಬಂದಿಲ್ಲ. ಇನ್ನು ಇತ್ತೀಚಿನ ದಿನಗಳವರೆಗೆ ಬಾಲಿವುಡ್ ಪವರ್ ಕಪಲ್ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಡಿವೋರ್ಸ್ ಪಡೆಯುತ್ತಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಆದರೆ ಪೋಸ್ಟ್ ಶೇರ್ ಮಾಡುವ ಮೂಲಕ ವದಂತಿಗೆ ತೆರೆ ಎಳೆದಿದ್ದರು.
ಇದನ್ನೂ ಓದಿ: Abhishek Bachhan: ಕರಿಷ್ಮಾ ಅಲ್ಲ.. ಐಶ್ವರ್ಯ ರೈಗಿಂತ ಮೊದಲು ನಟ ಅಭಿಷೇಕ್ ಬಚ್ಚನ್ ಮೊದಲು ಪ್ರೀತಿಸಿದ್ದು ಈಕೆಯನ್ನು!
ಇದೀಗ 32 ವರ್ಷದ ಯುವಕನೊಬ್ಬ, ತಾನು ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಮಗ ಎಂದು ಹೇಳಿಕೊಂಡಿರುವ ಬಗ್ಗೆ ಸುದ್ದಿ ವೈರಲ್ ಆಗಿದೆ. ಅಂದಹಾಗೆ ಈ ವ್ಯಕ್ಯಿ ಹುಟ್ಟಿದ್ದು, 1998 ರಲ್ಲಿ. ಲೆಕ್ಕಾಚಾರದ ಪ್ರಕಾರ ಆಗ ಐಶ್ವರ್ಯಾ ರೈಗೆ 15 ವರ್ಷ.
ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟವಾದ ಸುದ್ದಿ ಪ್ರಕಾರ, ಈ ವ್ಯಕ್ತಿಯ ಹೆಸರು ಸಂಗೀತ್ ಕುಮಾರ್. ಐಶ್ವರ್ಯಾ ರೈ ತಮ್ಮ ತಾಯಿ ಮತ್ತು ನಾನು ಲಂಡನ್’ನಲ್ಲಿ ಐವಿಎಫ್ (ಇನ್ ವಿಟ್ರೋ ಫರ್ಟಿಲೈಸೇಶನ್) ಮೂಲಕ ಜನಿಸಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾನೆ. ಅಂದಹಾಗೆ ಇದು ಎರಡು ವರ್ಷಗಳ ಹಿಂದಿನ ಸಂದರ್ಶನದ ವಿಡಿಯೋ. ಸಂಗೀತ್ ಕುಮಾರ್ ಎಂಬ ವ್ಯಕ್ತಿ 2018 ರಲ್ಲಿ ಮಾಧ್ಯಮಗಳ ಮುಂದೆ ಈ ವಿಷಯಗಳನ್ನು ಬಹಿರಂಗಪಡಿಸಿದ್ದನು.
ಇದನ್ನೂ ಓದಿ: ಅನುಷ್ಕಾಗಿಂತಲೂ ಸೂಪರ್ ಕ್ಯೂಟ್ ವಿರಾಟ್ ಕೊಹ್ಲಿ ಸೊಸೆ: ಅಂದದಲ್ಲಿ ಬಾಲಿವುಡ್ ನಟಿಯರನ್ನೇ ಮೀರಿಸುವ ಸುಂದರಿ ಈಕೆ!
ಐಶ್ವರ್ಯಾ ರೈ ಅವರ ಪೋಷಕರು 2 ವರ್ಷ ವಯಸ್ಸಿನವರೆಗೂ ಆತನನ್ನು ನೋಡಿಕೊಂಡಿದ್ದಾರಂತೆ. ಅದಾದ ನಂತರ ವಡಿವೇಲು ರೆಡ್ಡಿ ವಿಶಾಖಪಟ್ಟಣಕ್ಕೆ ಕರೆತಂದರು. ತನ್ನ ಜನನಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಂಬಂಧಿಕರು ನಾಶಪಡಿಸಿದ್ದಾರೆ ಎಂದು ಸಂಗೀತ್ ಕುಮಾರ್ ಹೇಳುತ್ತಾನೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ