ನವದೆಹಲಿ: 'ಅವರ ಪ್ರತಿಭೆ ಮತ್ತು ಸಾಮರ್ಥ್ಯ, ಪ್ರತಿಭೆ ಮತ್ತು ಕೌಶಲ್ಯವೇ  ನನ್ನ ಎಸೆತಗಳಲ್ಲಿ ಅವರಿಗೆ ಮೂರು ಸಿಕ್ಸರ್‌ ಗಳನ್ನು ಹೊಡೆಯಲು ಸಾಧ್ಯವಾಯಿತು. ಹೀಗೆ ಸಚಿನ್ ಬಗ್ಗೆ ಹೇಳಿದ್ದು ಬೇರೆಯಾರು ಅಲ್ಲ, ಪಾಕ್ ಸ್ಪಿನ್ ದಿಗ್ಗಜ ಅಬ್ದುಲ್ ಖಾದಿರ್. 



COMMERCIAL BREAK
SCROLL TO CONTINUE READING

ಆಗ ಸಚಿನ್ ತೆಂಡೂಲ್ಕರ್ 16 ರ ಹರೆಯದ ಬಾಲಕ, ಆಗತಾನೇ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದರು. ಈ ಸಂದರ್ಭದಲ್ಲಿ ಸಚಿನ್ ಗೆ ಖಾದಿರ್ ' ಇದು ಏಕದಿನ ಪಂದ್ಯವಲ್ಲ ,ಆದ್ದರಿಂದ ನೀನು ಮುಂದಿನ ಓವರ್ ನಲ್ಲಿ ನನ್ನ ಎಸೆತದಲ್ಲಿ ಸಿಕ್ಸರ್ ಹೊಡೆಯಲು ಮುಂದಾಗಬೇಕು, ಒಂದು ವೇಳೆ ನೀನು ಸಿಕ್ಸರ್ ಹೊಡೆದರೆ ಆಗ ಸ್ಟಾರ್ ಆಗುವೆ ಎಂದು ಹೇಳಿದ್ದರು. ಆಗ ಸಚಿನ್ ಅವರಿಗೆ ಏನೂ ಉತ್ತರಿಸದೇ ಮುಂದಿನ ಓವರ್ ನಲ್ಲಿ ನನ್ನ ಎಸೆತದಲ್ಲಿ ಮೂರು ಸಿಕ್ಸರ್ ಹೊಡೆದಿದ್ದರು' ಎಂದು ಖಾದಿರ್ ಹೇಳಿದ್ದರು. 


ಈಗ ಅಬ್ದುಲ್ ಖಾದಿರ್ ಅವರು 63ನೇ ವಯಸ್ಸಿನಲ್ಲಿ ಮೃತಪಟ್ಟಿದ್ದಾರೆ. ಅವರ ನಿಧನಕ್ಕೆ ಸಚಿನ್ ಸೇರಿದಂತೆ ಹಲವು ಭಾರತ ಹಾಗೂ ಪಾಕ್ ಆಟಗಾರರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.


ಸಚಿನ್ ಟ್ವೀಟ್ ಮಾಡಿ ' ಅಬ್ದುಲ್ ಖಾದಿರ್ ಅವರ ಜೊತೆ ಆಡಿದ್ದು ಇನ್ನು ನೆನಪಿದೆ. ಅವರು ಆಗಿನ ಕಾಲದ ಶ್ರೇಷ್ಠ ಸ್ಪಿನ್ನರ್ ಆಗಿದ್ದರು. ಅವರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಕಂಬನಿ ಮಿಡಿದಿದ್ದಾರೆ.