`ನನ್ನ ಗರ್ಲ್ಫ್ರೆಂಡನ್ನು ಕರ್ಕೊಂಡು ಬರ್ಬಹುದಾ?`- ಟೆಸ್ಟ್ ಶತಕ ಸಿಡಿಸಿದ ಬೆನ್ನಲ್ಲೇ ವಿರಾಟ್ ಕೊಹ್ಲಿ ಮಾಡಿದ್ದ ಮನವಿ ಬಗ್ಗೆ ಬಹಿರಂಗಪಡಿಸಿದ ರವಿ ಶಾಸ್ತ್ರಿ
Ravi Shastri on Virat Kohli request: ಮಾಜಿ ಕ್ರಿಕೆಟಿಗ ಮತ್ತು ಮುಖ್ಯ ಕೋಚ್ ಹಾಗೂ ಪ್ರಸ್ತುತ ಕಾಮೆಂಟೇಟರ್ ರವಿಶಾಸ್ತ್ರಿ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ, ಶಾಸ್ತ್ರಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರೆಟ್ ಲೀ ಅವರೊಂದಿಗೆ ಪ್ಯಾನೆಲ್‌ನಲ್ಲಿ ಕುಳಿತು ವಿರಾಟ್ ಕೊಹ್ಲಿಯ ಡೇಟಿಂಗ್ ಯುಗದ ಬಗ್ಗೆ ಮಾತನಾಡುವುದನ್ನು ಕಾಣಬಹುದು.
Ravi Shastri on Virat Kohli request: ಪರ್ತ್‌ನ ಆಪ್ಟಸ್ ಸ್ಟೇಡಿಯಂನಲ್ಲಿ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಸಂಚಲನ ಮೂಡಿಸಿದ್ದರು. ತಮ್ಮ 30 ನೇ ಟೆಸ್ಟ್ ಶತಕವನ್ನು ಪೂರ್ಣಗೊಳಿಸುತ್ತಿದ್ದಂತೆ, ವಿರಾಟ್ ತಮ್ಮ ಹಳೆಯ ಶೈಲಿಯಲ್ಲಿ ಬ್ಯಾಟ್ ಮೂಲಕ ಫ್ಲೈಯಿಂಗ್ ಕಿಸ್ ನೀಡಿದ್ದರು. ಇದನ್ನು ನೋಡಿದ ಅನುಷ್ಕಾ ಶರ್ಮಾ ನಗು ಹರಿಸಿದ್ದರು. ವಿರಾಟ್ ಮತ್ತು ಅನುಷ್ಕಾ ನಡುವಿನ ಈ ಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ರಾಧಿಕಾ ಪಂಡಿತ್ ತಂಗಿ ಈ ಖ್ಯಾತ ನಟಿ.. ಯಶ್ ಗೆ ʻಜೀಜೂʼ ಎನ್ನುವ ಟಾಲಿವುಡ್‌ನ ಸ್ಟಾರ್ ಹೀರೋಯಿನ್ ಇವರೇ !
ಇನ್ನು ವಿರಾಟ್ ಅವರ ಫ್ಲೈಯಿಂಗ್ ಕಿಸ್ ನೋಡಿದ ನಂತರ, ಟೀಂ ಇಂಡಿಯಾದ ಮಾಜಿ ಮುಖ್ಯ ಕೋಚ್ ಮತ್ತು ಕಾಮೆಂಟೇಟರ್ ರವಿಶಾಸ್ತ್ರಿ ಅವರು 2015 ರ ಆಸ್ಟ್ರೇಲಿಯಾ ಪ್ರವಾಸವನ್ನು ನೆನಪಿಸಿಕೊಂಡಿದ್ದಾರೆ. 2015 ರ ಆಸ್ಟ್ರೇಲಿಯಾ ಪ್ರವಾಸದ ಘಟನೆಯನ್ನು ವಿವರಿಸಿದ ಅವರು, ವಿರಾಟ್-ಅನುಷ್ಕಾಗೆ ಸಂಬಂಧಿಸಿದ ಸೀಕ್ರೆಟ್‌ನ್ನು ಬಹಿರಂಗಪಡಿಸಿದ್ದಾರೆ
ಮಾಜಿ ಕ್ರಿಕೆಟಿಗ ಮತ್ತು ಮುಖ್ಯ ಕೋಚ್ ಹಾಗೂ ಪ್ರಸ್ತುತ ಕಾಮೆಂಟೇಟರ್ ರವಿಶಾಸ್ತ್ರಿ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ, ಶಾಸ್ತ್ರಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರೆಟ್ ಲೀ ಅವರೊಂದಿಗೆ ಪ್ಯಾನೆಲ್‌ನಲ್ಲಿ ಕುಳಿತು ವಿರಾಟ್ ಕೊಹ್ಲಿಯ ಡೇಟಿಂಗ್ ಯುಗದ ಬಗ್ಗೆ ಮಾತನಾಡುವುದನ್ನು ಕಾಣಬಹುದು.
ರವಿಶಾಸ್ತ್ರಿ ಹೇಳಿದ್ದೇನು?
"2015ರಲ್ಲಿ ನಾನು ಕೋಚ್ ಆಗಿದ್ದಾಗ ವಿರಾಟ್ ಮದುವೆಯಾಗಿರಲಿಲ್ಲ.ಅನುಷ್ಕಾ ಜೊತೆ ಡೇಟಿಂಗ್ ಮಾಡ್ತಿದ್ದ. ಆಗ ಅವರು, ನನ್ನ ಗರ್ಲ್‌ಫ್ರೆಂಡ್ ಅನುಷ್ಕಾಳನ್ನು ವಿದೇಶಿ ಪ್ರವಾಸಕ್ಕೆ ಕರೆದುಕೊಂಡು ಬರಲೇ ಎಂದು ಕೇಳಿದ್ದಕ್ಕೆ ಬಿಸಿಸಿಐ ಜೊತೆ ಮಾತನಾಡಿ ಇದಕ್ಕೆ ಅನುಮತಿ ಮಾಡಿಕೊಟ್ಟಿದ್ದೆ. ಇಂದಿಗೂ ಕೊಹ್ಲಿಯ ದೊಡ್ಡ ಸಪೋರ್ಟ್ ಎಂದರೆ ಅದು ಅನುಷ್ಕಾ ಶರ್ಮಾ" ಎಂದು ಹೇಳಿದ್ದಾರೆ.
ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್‌ನಲ್ಲಿ 100 ರನ್ ಗಳಿಸಿದ ಬಗ್ಗೆ ಮಾತನಾಡಿದ ಕೊಹ್ಲಿ, 'ಪ್ರತಿಯೊಂದು ಒಳ್ಳೆಯ ಮತ್ತು ಕೆಟ್ಟ ಸಮಯದಲ್ಲಿ ಅನುಷ್ಕಾ ನನ್ನ ಪಕ್ಕದಲ್ಲಿರುತ್ತಾಳೆ. ನನ್ನ ಮನಸ್ಸಿನಲ್ಲಿ ಏನಾಗುತ್ತಿದೆ? ಅಥವಾ ನಾನು ಕೆಲವು ತಪ್ಪುಗಳನ್ನು ಮಾಡಿದಾಗ ತೆರೆಮರೆಯಲ್ಲಿ ನಡೆಯುವ ಎಲ್ಲವನ್ನೂ ಆಕೆ ಗಮನಿಸುತ್ತಾಳೆ. ನಾನು ತಂಡದ ಕಾರಣಕ್ಕೆ ಕೊಡುಗೆ ನೀಡಲು ಬಯಸುತ್ತೇನೆ. ನನ್ನ ದೇಶಕ್ಕಾಗಿ ಸಾಧನೆ ಮಾಡಲು ನನಗೆ ಹೆಮ್ಮೆಯಾಗುತ್ತಿದೆ" ಎಂದಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.