Rishab Pant: ಪಂತ್ ಅಭಿಮಾನಿಗಳಿಗೆ ಗುಡ್ ನ್ಯೂಸ್: ಒಂದು ತಿಂಗಳ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ರಿಷಬ್ ಡಿಸ್ಚಾರ್ಜ್!
InsideSport ವರದಿ ಪ್ರಕಾರ, ರಿಷಬ್ ಪಂತ್ ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿದ್ದ ನಂತರ ಮನೆಗೆ ಹೋಗಲು ಸಿದ್ಧರಾಗಿದ್ದಾರೆ. ಈ ವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಬಹುದು. ರಿಷಭ್ ಪಂತ್ ಚೇತರಿಸಿಕೊಂಡಿರುವ ಬಗ್ಗೆ ಇನ್ಸೈಡ್ ಸ್ಪೋರ್ಟ್ ಗೆ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Rishab Pant Health Bulletin: ಟೀಮ್ ಇಂಡಿಯಾದ ಸ್ಟಾರ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ 30 ಡಿಸೆಂಬರ್ 2022 ರಂದು ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಸದ್ಯ ಅವರು ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ 1 ತಿಂಗಳ ನಂತರ, ರಿಷಬ್ ಪಂತ್ ಅವರ ಆರೋಗ್ಯದ ಬಗ್ಗೆ ದೊಡ್ಡ ಅಪ್‌ಡೇಟ್ ಹೊರಬಿದ್ದಿದೆ. ಈ ಸುದ್ದಿ ಖಂಡಿತವಾಗಿಯೂ ಅವರ ಅಭಿಮಾನಿಗಳಿಗೆ ಸಂತಸ ತರಲಿದೆ.
ಇದನ್ನೂ ಓದಿ: Team Indiaದ ಈ ಆಟಗಾರನ ಪ್ರೀತಿಯಲ್ಲಿ ಮತ್ತೆ ವಿಘ್ನ: ಬ್ರೇಕಪ್ ಮಾಡಿಕೊಂಡ ಸ್ಟಾರ್ ಜೋಡಿ!!
InsideSport ವರದಿ ಪ್ರಕಾರ, ರಿಷಬ್ ಪಂತ್ ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿದ್ದ ನಂತರ ಮನೆಗೆ ಹೋಗಲು ಸಿದ್ಧರಾಗಿದ್ದಾರೆ. ಈ ವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಬಹುದು. ರಿಷಭ್ ಪಂತ್ ಚೇತರಿಸಿಕೊಂಡಿರುವ ಬಗ್ಗೆ ಇನ್ಸೈಡ್ ಸ್ಪೋರ್ಟ್ ಗೆ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 'ಅವರು ಚಿಕಿತ್ಸೆಗೆ ಚೆನ್ನಾಗಿ ಸ್ಪಂದಿಸುತ್ತಿದ್ದಾರೆ. ಇದು ವೈದ್ಯಕೀಯ ತಂಡದಿಂದ ಸಂತಸದ ಸುದ್ದಿ. ಮೊದಲ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಈ ವಾರ ಡಿಸ್ಚಾರ್ಜ್ ಆಗಲಿದ್ದಾರೆ” ಎಂದು ಹೇಳಿದ್ದಾರೆ.
ರಿಷಬ್ ಪಂತ್ ಸಂಪೂರ್ಣ ಫಿಟ್ ಆಗಲು ಸಾಕಷ್ಟು ಸಮಯ ತೆಗೆದುಕೊಳ್ಳಲಿದ್ದಾರೆ. ಅಪಘಾತದಲ್ಲಿ, ಪಂತ್ ಅವರ ಬಲ ಮೊಣಕಾಲಿನ ಎಲ್ಲಾ ಮೂರು ಅಸ್ಥಿರಜ್ಜುಗಳು ಮುರಿದುಹೋಗಿವೆ. ಆದ್ದರಿಂದ ಶಸ್ತ್ರಚಿಕಿತ್ಸೆಯನ್ನು ಇನ್ನೂ ಮಾಡಬೇಕಾಗಿದೆ. ಬಿಸಿಸಿಐ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿ ಪ್ರಕಾರ 'ಅವರಿಗೆ ಸುಮಾರು ಒಂದು ತಿಂಗಳಲ್ಲಿ ಮತ್ತೊಂದು ಶಸ್ತ್ರಚಿಕಿತ್ಸೆ ಅಗತ್ಯವಿದೆ. ಎರಡನೇ ಶಸ್ತ್ರಚಿಕಿತ್ಸೆ ಯಾವಾಗ ನಡೆಯಲಿದೆ ಎಂದು ವೈದ್ಯರು ನಿರ್ಧರಿಸುತ್ತಾರೆ. ಬಿಸಿಸಿಐ ವೈದ್ಯಕೀಯ ತಂಡವು ಡಾ.ಪರ್ದಿವಾಲಾ ಮತ್ತು ಆಸ್ಪತ್ರೆಯೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಅವರು ಶೀಘ್ರದಲ್ಲೇ ಟೀಂ ಇಂಡಿಯಾಗೆ ಮರಳುತ್ತಾರೆ ಎಂದು ನಾವು ಭಾವಿಸುತ್ತೇವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ‘U19 World Cup 2023’ ಗೆದ್ದ ಟೀಂ ಇಂಡಿಯಾ ಮಹಿಳಾ ಪಡೆ: ಮೊದಲ ಬಾರಿ ಕಪ್ ಎತ್ತಿಹಿಡಿದು ಇತಿಹಾಸ ಸೃಷ್ಟಿ
ಭೀಕರ ಅಪಘಾತಕ್ಕೀಡಾದ ಪಂತ್:
25 ವರ್ಷದ ರಿಷಬ್ ಪಂತ್ ತನ್ನ ತಾಯಿಯನ್ನು ಭೇಟಿ ಮಾಡಲು ಡಿಸೆಂಬರ್ 30 ರಂದು ಬೆಳಿಗ್ಗೆ ದೆಹಲಿಯಿಂದ ರೂರ್ಕಿಗೆ ಹೋಗುತ್ತಿದ್ದರು. ಬಾಂಗ್ಲಾದೇಶ ಪ್ರವಾಸ ಮುಗಿಸಿ ತವರಿಗೆ ಮರಳುತ್ತಿದ್ದರು. ಈ ಸಂದರ್ಭದಲ್ಲಿ ಅವರ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. 2022 ರಲ್ಲಿ, ರಿಷಬ್ ಪಂತ್ ಟೀಮ್ ಇಂಡಿಯಾಗಾಗಿ ಒಟ್ಟು 7 ಪಂದ್ಯಗಳನ್ನು ಆಡಿದ್ದಾರೆ. ಈ ಸಮಯದಲ್ಲಿ, ಅವರು 61.81 ಸರಾಸರಿಯಲ್ಲಿ 680 ರನ್ ಗಳಿಸಿದರು. ಮತ್ತೊಂದೆಡೆ, ಪಂತ್ ಕಳೆದ ವರ್ಷ ಭಾರತದ ಪರ 12 ಏಕದಿನ ಪಂದ್ಯಗಳಲ್ಲಿ 37.33 ಸರಾಸರಿಯಲ್ಲಿ 336 ರನ್ ಗಳಿಸಿದ್ದರು. ಟಿ 20 ಬಗ್ಗೆ ಮಾತನಾಡುವುದಾದರೆ ಈ ಸ್ವರೂಪದಲ್ಲಿ, ಅವರು ಕಳೆದ ವರ್ಷ 25 ಪಂದ್ಯಗಳನ್ನು ಆಡುವಾಗ 21.41 ಸರಾಸರಿಯಲ್ಲಿ ಕೇವಲ 364 ರನ್ ಗಳಿಸಿದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.