Team Indiaದ ಈ ಆಟಗಾರನ ಪ್ರೀತಿಯಲ್ಲಿ ಮತ್ತೆ ವಿಘ್ನ: ಬ್ರೇಕಪ್ ಮಾಡಿಕೊಂಡ ಸ್ಟಾರ್ ಜೋಡಿ!!

Prithvi Shaw-Nidhi Tapadia Breakup :ನಿಧಿ ತಪಾಡಿಯಾ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಅವರು ಪಂಜಾಬಿ ಹಾಡನ್ನು ಹಿನ್ನೆಲೆ ಹಾಡಿನಲ್ಲಿ ಬಳಸಿದ್ದಾರೆ. ಅದು ಬ್ರೇಕಪ್ ಸಾಂಗ್ ಆಗಿದೆ. ಇಷ್ಟು ಮಾತ್ರವಲ್ಲದೆ ಇನ್ಸ್ಟಾಗ್ರಾಮ್ ನಲ್ಲಿ ಪೃಥ್ವಿ ಶಾ ಮತ್ತು ನಿಧಿ ತಪಾಡಿಯಾ ಪರಸ್ಪರ ಅನ್ ಫಾಲೋ ಮಾಡಿಕೊಂಡಿದ್ದಾರೆ.

Written by - Bhavishya Shetty | Last Updated : Jan 29, 2023, 08:16 PM IST
    • ಪೃಥ್ವಿ ಶಾ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಆಗಾಗ್ಗೆ ಚರ್ಚೆಯಲ್ಲಿರುತ್ತಾರೆ.
    • ಪ್ರಸ್ತುತ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾದ ಭಾಗವಾಗಿದ್ದಾರೆ
    • ಇದೆಲ್ಲದರ ನಡುವೆ ಪೃಥ್ವಿ ಶಾಗೆ ಸಂಬಂಧಿಸಿದ ಸುದ್ದಿಯೊಂದು ಹೊರಬೀಳುತ್ತಿದೆ
Team Indiaದ ಈ ಆಟಗಾರನ ಪ್ರೀತಿಯಲ್ಲಿ ಮತ್ತೆ ವಿಘ್ನ: ಬ್ರೇಕಪ್ ಮಾಡಿಕೊಂಡ ಸ್ಟಾರ್ ಜೋಡಿ!!
Prithvi Shaw

India Cricket Team: ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಪೃಥ್ವಿ ಶಾ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಆಗಾಗ್ಗೆ ಚರ್ಚೆಯಲ್ಲಿರುತ್ತಾರೆ. ಅವರು ಪ್ರಸ್ತುತ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾದ ಭಾಗವಾಗಿದ್ದಾರೆ. ಇದೆಲ್ಲದರ ನಡುವೆ ಪೃಥ್ವಿ ಶಾಗೆ ಸಂಬಂಧಿಸಿದ ಸುದ್ದಿಯೊಂದು ಹೊರಬೀಳುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ಪೃಥ್ವಿ ಶಾ ಮತ್ತು ಅವರ ಗರ್ಲ್ ಫ್ರೆಂಡ್ ಎನ್ನಲಾದ ಗೆಳತಿ ನಿಧಿ ತಪಾಡಿಯಾ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: IND vs NZ: ಭಾರತದ ಈ ಆಟಗಾರ T20 ಪಂದ್ಯ ಆಡಲು ಯೋಗ್ಯರಲ್ಲವೇ? ಅತ್ಯಂತ ಕಳಪೆ ದಾಖಲೆ ಬರೆದ ಪ್ಲೇಯರ್

ಮಾಧ್ಯಮ ವರದಿಗಳ ಪ್ರಕಾರ, ಪೃಥ್ವಿ ಶಾ ಮತ್ತು ನಿಧಿ ತಪಾಡಿಯಾ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ. ಆದರೆ ಈಗ ಅವರಿಬ್ಬರ ಬ್ರೇಕಪ್ ಸುದ್ದಿ ಹೊರಬೀಳುತ್ತಿದೆ. ಕೆಲವು ಸಮಯದಿಂದ ಪೃಥ್ವಿ ಶಾ ಮತ್ತು ನಿಧಿ ತಪಾಡಿಯಾ ಪರಸ್ಪರ ಅನೇಕ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದರು. ಇದೇ ಸಂದರ್ಭದಲ್ಲಿ ಇವರಿಬ್ಬರು ರಿಲೇಶನ್ ಶಿಪ್ ನಲ್ಲಿ ಇದ್ದಾರೆ ಎಂದು ಹೇಳಲಾಗಿತ್ತು.  

ನಿಧಿ ತಪಾಡಿಯಾ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಅವರು ಪಂಜಾಬಿ ಹಾಡನ್ನು ಹಿನ್ನೆಲೆ ಹಾಡಿನಲ್ಲಿ ಬಳಸಿದ್ದಾರೆ. ಅದು ಬ್ರೇಕಪ್ ಸಾಂಗ್ ಆಗಿದೆ. ಇಷ್ಟು ಮಾತ್ರವಲ್ಲದೆ ಇನ್ಸ್ಟಾಗ್ರಾಮ್ ನಲ್ಲಿ ಪೃಥ್ವಿ ಶಾ ಮತ್ತು ನಿಧಿ ತಪಾಡಿಯಾ ಪರಸ್ಪರ ಅನ್ ಫಾಲೋ ಮಾಡಿಕೊಂಡಿದ್ದಾರೆ.

ನಿಧಿ ತಪಾಡಿಯಾ ರೂಪದರ್ಶಿ ಮತ್ತು ನಟಿ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ನಿಧಿ, ಆಗಾಗ್ಗೆ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ನಿಧಿ ತಪಾಡಿಯಾ ಅವರು Instagram ನಲ್ಲಿ 108K ಅನುಯಾಯಿಗಳನ್ನು ಹೊಂದಿದ್ದಾರೆ. ಆಕೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಿವಾಸಿ.

ಪೃಥ್ವಿ ಶಾ ಹೊಸ ವರ್ಷ ಪಾರ್ಟಿ ಮಾಡಲು ಪಬ್‌ಗೆ ಹೋಗಿದ್ದರು. ಈ ಪಾರ್ಟಿಯಲ್ಲೂ ನಿಧಿ ತಪಾಡಿಯಾ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಇವರಿಬ್ಬರ ಹಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದವು.

ಇದನ್ನೂ ಓದಿ: Aghori: ಹೆಣಗಳ ಜೊತೆ ಲೈಂಗಿಕ ಸಂಪರ್ಕ, ಮಾನವ ಮಾಂಸ ಸೇವನೆ: ಇದು ಅಘೋರಿಗಳ ಭಯಾನಕ ಶಿವಾರಾಧನೆ!!

ಪೃಥ್ವಿ ಶಾ ಈ ಹಿಂದೆ ನಟಿ ಪ್ರಾಚಿ ಸಿಂಗ್ ಜೊತೆ ಡೇಟಿಂಗ್ ನಡೆಸುತ್ತಿದ್ದರು ಎನ್ನಲಾಗಿದೆ. 2020ರಲ್ಲಿ ಇಬ್ಬರ ನಡುವೆ  ಸಂಬಂಧದ ಇದೆ ಎಂದು ವರದಿಗಳು ಬಂದಿದ್ದವು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News