Rishabh Pant's Birthday: ಖ್ಯಾತ ಟೀಂ ಇಂಡಿಯಾ ಆಟಗಾರ ರಿಷಬ್ ಪಂತ್ ಇಂದು ತನ್ನ 25ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರಿಗೆ ಅಭಿನಂದನಾ ಸಂದೇಶಗಳ ಮಹಾಪೂರವೇ ಹರಿದುಬರುತ್ತಿದೆ. ಆದರೆ, ಈ ಎಲ್ಲಾ ಸಂದೇಶಗಳಲ್ಲಿ ಒಂದು ಹಾರೈಕೆಯ ಸಂದೇಶ ಅತ್ಯಂತ ವಿಶೇಷವಾಗಿದೆ. ಇದು ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ತನ್ನ ಈ ವಿಶೇಷ ಸಂದೇಶದಲ್ಲಿ ಖ್ಯಾತ ಬಾಲಿವುಡ್ ಬೆಡಗಿ ಊರ್ವಶಿ ರೌಟೇಲಾ ಪಂತ್ ಅವರಿಗೆ ವಿಶೇಷ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಅವರು ಪಂತ್ಗಾಗಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಈ ವಿಡಿಯೋನಲ್ಲಿ ಅವರು ಫ್ಲೈಯಿಂಗ್ ಕಿಸ್ ಮಾಡುತ್ತಿರುವುದನ್ನು ನೀವು ಗಮನಿಸಬಹುದು.


COMMERCIAL BREAK
SCROLL TO CONTINUE READING

ಇದನ್ನೂ ಓದಿ-ವಿಮಾನ ತಪ್ಪಿದ ಕಾರಣ ಈ ಆಟಗಾರ ಟಿ20 ವಿಶ್ವಕಪ್‌ನಿಂದ ಔಟ್!


ಈ ವಿಡಿಯೋದಲ್ಲಿ ಊರ್ವಶಿ ಕೆಂಪು ಬಣ್ಣದ ಡ್ರೆಸ್‌ನಲ್ಲಿ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾಳೆ. ಆರಂಭದಲ್ಲಿ ಅವಳು ತನ್ನ ಮುದ್ದಾದ ಅಭಿವ್ಯಕ್ತಿಗಳನ್ನು ವ್ಯಕ್ತಪಡಿಸುತ್ತಿದ್ದಾಳೆ ಮತ್ತು ನಂತರ ಅವಳು ಫ್ಲೈಯಿಂಗ್ ಕಿಸ್ಗಳನ್ನು ನೀಡುತ್ತಾಳೆ. ಈ ವಿಡಿಯೋದ ಶೀರ್ಷಿಕೆಯಲ್ಲಿ 'ಹ್ಯಾಪಿ ಬರ್ತ್ ಡೇ' ಎಂದು ಮಾತ್ರ ಆಕೆ ಬರೆದಿದ್ದಾಳೆ. ಅದನ್ನು ಬಿಟ್ಟರೆ ಆಕೆ ಯಾರ ಹೆಸರನ್ನೂ ಕೂಡ ಮೆನ್ಶನ್ ಮಾಡಿಲ್ಲ. ಆದರೂ ಕೂಡ ಕಳೆದ ಕೆಲ ವಾರಗಳಿಂದ ಊರ್ವಶಿ ಮತ್ತು ಪಂತ್ ನಡುವಿನ ಸಂಭಾಷಣೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಹಲ್ ಚಲ್ ಸೃಷ್ಟಿಸಿದೆ. ಊರ್ವಶಿಯ ಈ ಬರ್ತ್‌ಡೇ ವಿಶ್‌ ರಿಷಬ್‌ ಪಂತ್‌ಗೆ ಮಾತ್ರ ಎಂಬುದನ್ನು ನೀವು ಆಕೆಯ ಹಾವಭಾವದಿಂದ ತಿಳಿದುಕೊಳ್ಳಬಹುದು.



ಇದನ್ನೂ ಓದಿ-Jasprit Bumrah : ಬುಮ್ರಾ ಬಗ್ಗೆ ಆಘಾತಕಾರಿ ಹೇಳಿಕೆ ನೀಡಿದ ಮಾಜಿ ಕ್ರಿಕೆಟರ್ ಗವಾಸ್ಕರ್!


ಮೊದಲ ಅಧ್ಯಾಯ ಆರಂಭಗೊಂಡಿದ್ದು ಹೇಗೆ ಗೊತ್ತಾ?
ಇತ್ತೀಚೆಗಷ್ಟೇ ನೀಡಿದ್ದ ಒಂದು ಸಂದರ್ಶನದಲ್ಲಿ ಊರ್ವಶಿ ರೌತೆಲಾ, ಪರೋಕ್ಷವಾಗಿ ರಿಷಭ್ ಪಂತ್ ಉಲ್ಲೇಖಿಸಿ,  "ಒಬ್ಬ ವ್ಯಕ್ತಿ ನನಗೋಸ್ಕರ ಹೋಟೆಲ್ ಲಾಬಿಯಲ್ಲಿ 10 ಗಂಟೆಗಳ ಕಾಲ ಕಾಯುತ್ತಿದ್ದರು" ಎಂದು ಹೇಳಿದ್ದಳು. ಈ ಸಂದರ್ಶನದಲ್ಲಿ ಊರ್ವಶಿ ಪರೋಕ್ಷವಾಗಿ ಹಲವು ಮಾತುಗಳನ್ನಾಡಿದ್ದರು. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇದಾದ ಬಳಿಕ ಅದಕ್ಕೆ ಪರೋಕ್ಷ ಪ್ರತಿಕ್ರಿಯೆ ನೀಡಿದ್ದ ಪಂತ್, ಇನ್ಸ್ಟಾ ಸ್ಟೋರಿಯಲ್ಲಿ, 'ಪೀಛಾ ಛೋಡ್ ದೋ ಬೆಹನ್' ಎಂದು ಬರೆದುಕೊಂಡಿದ್ದರು. ಅಂದಿನಿಂದ ಇವರಿಬ್ಬರ ನಡುವೆ ಪರೋಕ್ಷ ಶೀತಲ ಸಮರ ಆರಂಭವಾಗಿದೆ. ಆದರೆ, ಈ ವಾಕ್ಸಮರ ಬೇಗನೆ ಅಂತ್ಯಕಂಡಿತ್ತು ಮತ್ತು  ಊರ್ವಶಿ ತನ್ನ ಇತ್ತೀಚಿನ ಮತ್ತೊಂದು ಸಂದರ್ಶನದಲ್ಲಿ ರಿಷಬ್ ಪಂತ್ ಹೆಸರನ್ನು ಹೇಳದೆ ಕ್ಷಮೆ ಕೊರಿದ್ದಳು.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.