ವಿಮಾನ ತಪ್ಪಿದ ಕಾರಣ ಈ ಆಟಗಾರ ಟಿ20 ವಿಶ್ವಕಪ್‌ನಿಂದ ಔಟ್!

ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ಜಸ್ಪ್ರೀತ್ ಬುಮ್ರಾ ಗಾಯದ ಸಮಸ್ಯೆಯಿಂದ ಟಿ20 ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ, ಆದರೆ ಇದೀಗ ಅವರನ್ನು ಹೊರತುಪಡಿಸಿ, ವಿಮಾನ ತಪ್ಪಿಸಿಕೊಂಡ ಕಾರಣ  ಟಿ20 ವಿಶ್ವಕಪ್‌ನಿಂದ ಹೊರಗುಳಿಸಿದಿದ್ದಾರೆ.

Written by - Channabasava A Kashinakunti | Last Updated : Oct 4, 2022, 01:20 PM IST
  • ಟಿ20 ವಿಶ್ವಕಪ್ 2022 ರಲ್ಲಿ ಪ್ರಾರಂಭ
  • ಜಸ್ಪ್ರೀತ್ ಬುಮ್ರಾ ಟಿ20 ವಿಶ್ವಕಪ್‌ನಿಂದ ಹೊರಗೆ
  • ಈ ಕುರಿತು ಕ್ರಿಕೆಟ್ ಮಂಡಳಿ ಹೇಳಿದ್ದು ಹೀಗೆ
ವಿಮಾನ ತಪ್ಪಿದ ಕಾರಣ ಈ ಆಟಗಾರ ಟಿ20 ವಿಶ್ವಕಪ್‌ನಿಂದ ಔಟ್! title=

T20 World Cup 2022 : ಟಿ20 ವಿಶ್ವಕಪ್ 2022 ರಲ್ಲಿ ಪ್ರಾರಂಭವಾಗಲು ಇನ್ನೂ ಕೆಲ ದಿನಗಳು ಮಾತ್ರ ಉಳಿದಿದೆ. ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ಜಸ್ಪ್ರೀತ್ ಬುಮ್ರಾ ಗಾಯದ ಸಮಸ್ಯೆಯಿಂದ ಟಿ20 ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ, ಆದರೆ ಇದೀಗ ಅವರನ್ನು ಹೊರತುಪಡಿಸಿ, ವಿಮಾನ ತಪ್ಪಿಸಿಕೊಂಡ ಕಾರಣ  ಟಿ20 ವಿಶ್ವಕಪ್‌ನಿಂದ ಹೊರಗುಳಿಸಿದಿದ್ದಾರೆ.

ಹೌದು, ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಒಬ್ಬ ಏರ್ಪೋರ್ಟ್ ಗೆ ಲೇಟ್ ಆಗಿ ಬಂದ ಕಾರಣ ಟಿ20 ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ. ಹಾಗಿದ್ರೆ, ಯಾರು ಈ ಆಟಗಾರ? ಇಲ್ಲಿದೆ ನೋಡಿ ಡಿಟೈಲ್ಸ್..

ಇದನ್ನೂ ಓದಿ : Ind vs SA : ಪಾಕ್ ಬಾಬರ್-ರಿಜ್ವಾನ್ ಹಿಂದಿಕ್ಕಿದ ರೋಹಿತ್-ರಾಹುಲ್ ಜೋಡಿ!

ಟಿ20 ವಿಶ್ವಕಪ್‌ನಿಂದ ಹೊರಬಿದ್ದ ಈ ಆಟಗಾರ

ವೆಸ್ಟ್ ಇಂಡೀಸ್‌ನ ಆಕ್ರಮಣಕಾರಿ ಬ್ಯಾಟ್ಸ್‌ಮನ್ ಶಿಮ್ರಾನ್ ಹೆಟ್ಮೆಯರ್ ಆಸ್ಟ್ರೇಲಿಯಾ ತಂಡವನ್ನು ಸೇರಲು ನಿಗದಿತ ವಿಮಾನ ನಿಲ್ದಾಣಕ್ಕೆ ಬರದೆ ವಿಮಾನ ತಪ್ಪಿಸಿಕೊಂಡು ವೆಸ್ಟ್ ಇಂಡೀಸ್‌ನ ಟಿ20 ವಿಶ್ವಕಪ್ 2022 ತಂಡದಿಂದ ಕೈಬಿಡಲಾಗಿದೆ. ಅವರ ಸ್ಥಾನಕ್ಕೆ ಸಮರ್ಥ್ ಬ್ರೂಕ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ವಿಮಾನ ತಪ್ಪಿದ್ದು ಹೇಗೆ?

ಶಿಮ್ರಾನ್ ಹೆಟ್ಮೆಯರ್ ಅವರು ಶನಿವಾರ ಗಯಾನಾದಿಂದ ಹೊರಡಬೇಕಿತ್ತು ಆದರೆ ಕೌಟುಂಬಿಕ ಕಾರಣಗಳಿಂದ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯು ಸೋಮವಾರ ವಿಮಾನವನ್ನು ಹತ್ತಲು ಅವಕಾಶ ನೀಡಿತು. ಇದರರ್ಥ ಅವರು ಆಸ್ಟ್ರೇಲಿಯಾ ವಿರುದ್ಧ ಗೋಲ್ಡ್ ಕೋಸ್ಟ್‌ನಲ್ಲಿ ಬುಧವಾರ ನಡೆಯಲಿರುವ ಟಿ20 ಪಂದ್ಯಕ್ಕೆ ಲಭ್ಯವಿರುವುದಿಲ್ಲ. ಇನ್ನೂ ಮುಂದೆ ಯಾವುದೇ ಕಾರಣಕ್ಕೂ ವಿಮಾನ ನಿಲ್ದಾಣಕ್ಕೆ ಲೇಟ ಆಗಿ ಬರುವುದಿಲ್ಲ ಎಂದು ಅವರು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಗೆ ತಿಳಿಸಿದ್ದಾರೆ. ಇದಾದ ನಂತರ ಆಯ್ಕೆಗಾರರು ಅವರನ್ನು ತಂಡದಿಂದ ಕೈಬಿಟ್ಟಿದ್ದಾರೆ.

ಈ ಕುರಿತು ಕ್ರಿಕೆಟ್ ಮಂಡಳಿ ಹೇಳಿದ್ದು ಹೀಗೆ

ಈ ಬಗ್ಗೆ ವೆಸ್ಟ್ ಇಂಡೀಸ್ ಕ್ರಿಕೆಟ್ ನಿರ್ದೇಶಕ ಜಿಮ್ಮಿ ಆಡಮ್ಸ್, "ನಾವು ಕೌಟುಂಬಿಕ ಕಾರಣಗಳಿಗಾಗಿ ಶಿಮ್ರಾನ್ ಹೆಟ್ಮೆಯರ್ ಅವರ ವಿಮಾನ ನಿಲ್ದಾಣಕ್ಕೆ ಬರುವುದು ಲೇಟ್ ಆಯ್ತು, ಹೀಗಾಗಿ ಶನಿವಾರದಿಂದ ಸೋಮವಾರಕ್ಕೆ ಮುಂದೋಡಲಾಗಿದೆ, ಆದರೆ ವಿಮಾನವು ಮತ್ತಷ್ಟು ವಿಳಂಬವಾದರೆ ನಾವು ಅವರನ್ನು ಸ್ಥಳದಲ್ಲಿ ಇರಿಸುತ್ತೇವೆ ಎಂದು ಅವರಿಗೆ ಸ್ಪಷ್ಟಪಡಿಸಿದ್ದಾರೆ" ಎಂದು  ಹೇಳಿಕೆಯಲ್ಲಿ ತಿಳಿಸಿದ್ದಾರೆ. 

ಈ ಪ್ರಮುಖ ಘಟನೆಗಾಗಿ ತಂಡದ ತಯಾರಿಯಲ್ಲಿ ನಾವು ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲದ ಕಾರಣ ಇನ್ನೊಬ್ಬ ಆಟಗಾರನನ್ನು ಉಳಿಸಿಕೊಳ್ಳುವುದನ್ನು ಬಿಟ್ಟು ಬೇರೆ ಆಯ್ಕೆ ಇರುವುದಿಲ್ಲ ಎಂದು ಹೇಳಿದೆ.

ಇದನ್ನೂ ಓದಿ : ಕ್ರಿಕೆಟ್ ಪಂದ್ಯದ ವೇಳೆ ಸಂಸ್ಕೃತ ಕಾಮೆಂಟರಿ..! ನೆಟ್ಟಿಗರ ಗಮನ ಸೆಳೆದ ಕ್ರಿಕೆಟ್ ಮ್ಯಾಚ್

ಈ ಆಟಗಾರನಿಗೆ ಅವಕಾಶ

ಕಳೆದ ವರ್ಷ ಡಿಸೆಂಬರ್‌ನಲ್ಲಿ ಟಿ20 ಗೆ ಪಾದಾರ್ಪಣೆ ಮಾಡಿದ ಸಮರ್ಥ್ ಬ್ರೂಕ್ಸ್ ಗೆ ಅವಕಾಶ ನೀಡಲಾಗಿದೆ. ಈ ಆಟಗಾರ 11 ಪಂದ್ಯಗಳಲ್ಲಿ 23 ಸರಾಸರಿ ಹೊಂದಿದ್ದಾರೆ. ಹೆಟ್ಮೆಯರ್ ಕಳೆದ ವಿಶ್ವಕಪ್‌ನಲ್ಲಿ ಭಾಗವಹಿಸಿದ್ದರು. ಇದುವರೆಗೆ 50 ಟಿ20 ಪಂದ್ಯಗಳನ್ನು ಆಡಿರುವ ಅವರು 21ರ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ವೆಸ್ಟ್ ಇಂಡೀಸ್ ಈ ವಾರ ಆಸ್ಟ್ರೇಲಿಯಾ ವಿರುದ್ಧ ಎರಡು ಟಿ20I ಪಂದ್ಯಗಳನ್ನು ಆಡಲು ನಿರ್ಧರಿಸಿದೆ ನಂತರ ಅವರು ಟಿ20 ವಿಶ್ವಕಪ್‌ನ ಪೂರ್ವಭಾವಿ ಲೆಗ್‌ನಲ್ಲಿ ಅಕ್ಟೋಬರ್ 17 ರಂದು ಹೊಬರ್ಟ್‌ನಲ್ಲಿ ಸ್ಕಾಟ್ಲೆಂಡ್ ವಿರುದ್ಧ ತಮ್ಮ ಪಯಣ ಪ್ರಾರಂಭಿಸುತ್ತಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News