10 ವರ್ಷಗಳಿಂದ ಧೋನಿ ಜೊತೆ ಮಾತು ಬಿಟ್ಟಿದ್ದೇನೆ !ಮನಸ್ತಾಪದ ಬಗ್ಗೆ ಮೌನ ಮುರಿದ ದಿಗ್ಗಜ್ಜ ಬೌಲರ್ !ಮ್ಯಾಚ್ ವಿನ್ನಿಂಗ್ ಜೋಡಿ ಬೇರೆಯಾಗಿದ್ದೇಕೆ ?
ಇಬ್ಬರೂ ಕ್ರಿಕೆಟ್ ಲೋಕದ ದಿಗ್ಗಜ್ಜರೇ. ಆದರೆ ಪರಸ್ಪರ ಮಾತು ಬಿಟ್ಟು ೧೦ ವರ್ಷಗಳೇ ಕಳೆದಿವೆ.
Dhoni vs Harbhajan Rift : ಒಂದು ಕಾಲದಲ್ಲಿ ಭಾರತೀಯ ಕ್ರಿಕೆಟ್‌ನಲ್ಲಿ ಮ್ಯಾಚ್ ವಿನ್ನಿಂಗ್ ಜೋಡಿಯಾಗಿದ್ದವರು ಈ ಇಬ್ಬರು. ಆದರೆ ಇದೀಗ ಇಬ್ಬರ ನಡುವೆ ಮಾತುಕತೆ ಇಲ್ಲವೇ ಇಲ್ಲ. ಇಬ್ಬರ ನಡುವೆ ಮನಸ್ಥಾಪ ಮೂಡಿ 10 ವರ್ಷಗಳಾಗಿವೆ. ಇಬ್ಬರೂ ಜೊತೆಯಲ್ಲಿ ಆಟವಾಡಿ 2007 (ಟಿ20 ವಿಶ್ವಕಪ್) ಮತ್ತು 2011 (ಒಡಿಐ ವಿಶ್ವಕಪ್) ನಲ್ಲಿ ಕಪ್ ಗೆಲ್ಲುವಲ್ಲಿ ಬಹಲ್ ದೊಡ್ಡ ಪಾತ್ರ ವಹಿಸಿದವರು.
ನಾವಿಲ್ಲಿ ಹೇಳುತ್ತಿರುವುದು ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಸ್ಪಿನ್ನರ್ ಹರ್ಭಜನ್ ಸಿಂಗ್ ಬಗ್ಗೆ. ಇವರಿಬ್ಬರ ನಡುವಿನ ಸಂಬಂಧದಲ್ಲಿನ ಬಿರುಕಿನ ಬಗ್ಗೆ ಸ್ವತಃ ಸ್ಪಿನ್ನರ್ ಹರ್ಭಜನ್ ಸಿಂಗ್ ಈ ಹೇಳಿಕೆ ನೀಡಿದ್ದಾರೆ. ಕಳೆದ 10 ವರ್ಷಗಳಿಂದ ಧೋನಿ ಜೊತೆಗೆ ನಾನು ಮಾತನಾಡಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಟೀಂ ಇಂಡಿಯಾ ಅಭಿಮಾನಿಗಳಿಗೆ ಆಘಾತ.. ತಂಡದಿಂದ ಕನ್ನಡಿಗ ಕೆಎಲ್ ರಾಹುಲ್ ಔಟ್!!
ಹರ್ಭಜನ್ ಏಪ್ರಿಲ್ 2, 2011 ರವರೆಗೆ ಭಾರತದ ಟೆಸ್ಟ್, ODI ಮತ್ತು T20 ತಂಡಗಳ ಅವಿಭಾಜ್ಯ ಅಂಗವಾಗಿದ್ದರು. ಅದೇ ದಿನ ಟೀಂ ಇಂಡಿಯಾ 28 ವರ್ಷಗಳ ನಂತರ ವಿಶ್ವಕಪ್ ಗೆದ್ದುಕೊಂಡಿದ್ದು. ಆದರೆ ಆಶ್ಚರ್ಯಕರ ಸಂಗತಿಯೆಂದರೆ, ಈ ಪ್ಲೇಯಿಂಗ್ -11 ಮತ್ತೆ ರಚನೆಯಾಗಲೇ ಇಲ್ಲ. ಆ ಪಂದ್ಯದಲ್ಲಿ ಆಡಿದ ಟೀಂ ಇಂಡಿಯಾದ ಆಟಗಾರರು ಮತ್ತೆ ಒಟ್ಟಿಗೆ ಆಡಲು ಸಾಧ್ಯವಾಗಲಿಲ್ಲ. 2011 ರ ವಿಶ್ವಕಪ್ ಫೈನಲ್ ಮತ್ತು 2015 ರ ವಿಶ್ವಕಪ್ ನಡುವೆ, ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಮತ್ತು ಜಹೀರ್ ಖಾನ್ ಅವರಂತಹ ಆಟಗಾರರು ನಿವೃತ್ತರಾದರು. ಹರ್ಭಜನ್ ಮತ್ತು ಯುವರಾಜ್ ಸಿಂಗ್ ಅವರಂತಹ ಅನುಭವಿಗಳನ್ನು ತಂಡದಿಂದ ಕ್ರಮೇಣ ಕೈಬಿಡಲಾಯಿತು.
2015 ರಲ್ಲಿ ಒಟ್ಟಿಗೆ ಆಡಿದ ಧೋನಿ-ಹರ್ಭಜನ್ :
ಹರ್ಭಜನ್ ಮತ್ತು ಧೋನಿ ಕೊನೆಯ ಬಾರಿಗೆ 2015 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕಾಗಿ ಆಡಿದ್ದರು. ಮೂರು ವರ್ಷಗಳ ನಂತರ, ಇಬ್ಬರೂ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ಮತ್ತೆ ಜೊತೆಯಾಗಿ ಕಾಣಿಸಿಕೊಂಡರು. ಅಲ್ಲಿ ಐಪಿಎಲ್‌ನ ಎರಡು ಸೀಸನ್‌ಗಳಲ್ಲಿ ಒಟ್ಟಿಗೆ ಆಡಿದ್ದಾರೆ. ಆದರೆ ಪಂದ್ಯಗಳ ಕುರಿತು ಬಿಟ್ಟರೆ ಇವರ ಮಧ್ಯೆ ಮತ್ಯಾವ ರೀತಿಯ ಮಾತುಕತೆ ಕೂಡಾ ನಡೆದಿರಲಿಲ್ಲ.
ಇಬ್ಬರ ನಡುವಿನ ಮನಸ್ತಾಪದ ಬಗ್ಗೆ ಮಾತನಾಡಿದ ಹರ್ಭಜನ್ ಸಿಂಗ್, ಸುಮಾರು 10 ವರ್ಷ ಅಥವಾ ಹೆಚ್ಚೇ ಆಗಿರಬಹುದು ನಾವು ಮಾತು ಬಿಟ್ಟು ಎಂದಿದ್ದಾರೆ. ಆದರೆ ಇದಕ್ಕೆ ಇಂಥದ್ದೇ ಕಾರಣ ಎಂದೇನಿಲ್ಲ. ಸಿಎಸ್‌ಕೆಯಲ್ಲಿ ಐಪಿಎಲ್‌ನಲ್ಲಿ ಆಡುವಾಗ ನಾವು ಮಾತನಾಡುತ್ತಿದ್ದೆವು, ಆದರೆ ಆ ಮಾತು ಮೈದಾನಕ್ಕೆ ಮಾತ್ರ ಸೀಮಿತವಾಗಿತ್ತು. ಅದರ ನಂತರ ಅವರು ನನ್ನ ಕೋಣೆಗೆ ಬರಲಿಲ್ಲ, ನಾನು ಅವರ ಕೋಣೆಗೆ ಹೋಗಲಿಲ್ಲ ಎಂದು ಹೇಳಿದ್ದಾರೆ. ಯುವರಾಜ್ ಮತ್ತು ಆಶಿಶ್ ನೆಹ್ರಾ ಅವರೊಂದಿಗೆ ನಾನು ನಿರಂತರ ಸಂಪರ್ಕದಲ್ಲಿರುವುದಾಗಿ ಹೇಳಿದ್ದಾರೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಇನ್ನು ನನ್ನ ಫೋನ್‌ಗೆ ಉತ್ತರಿಸುವವರಿಗೆ ಮಾತ್ರ ನಾನು ಕರೆ ಮಾಡುತ್ತೇನೆ. ಸಂಬಂಧ ಎನ್ನುವುದು ಎರಡೂ ಕಡೆಯಿಂದ ಇರಬೇಕು. ಗೌರವ ನಿರೀಕ್ಷಿಸುವುದು ಮಾತ್ರವಲ್ಲ ಕೊಡುವುದು ಕೂಡಾ ಮುಖ್ಯ. ನಾನು ನಿಮಗೆ ಒಂದು ಅಥವಾ ಎರಡು ಬಾರಿ ಕರೆ ಮಾಡಿದಾಗ ಪ್ರತಿಕ್ರಿಯೆ ಬಾರದೇ ಹೋದರೆ ನಂತರ ನಾನು ಹೆಚ್ಚು ಮಾತನಾಡುವುದು ಸರಿಯಲ್ಲ ಎಂದು ತನ್ನ ಮನಸಿನ ಭಾವನೆಯನ್ನು ಹೊರ ಹಾಕಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ