ವಿಶ್ವದಾಖಲೆ ಬರೆದ ಐಪಿಎಲ್‌ನ ಅನ್‌ಸೋಲ್ಡ್‌ ಆಟಗಾರ.. ಎಲ್ಲಾ ಫ್ರಾಂಚೈಸಿ ಮಾಲಿಕರಿಗೂ ಶುರುವಾಯ್ತು ಪಶ್ಚಾತಾಪ..!

Urvil patel: ಮೆಗಾ ಹರಾಜಿನಲ್ಲಿ ಮಾರಾಟವಾಗದ ಗುಜರಾತ್ ಕ್ರಿಕೆಟಿಗ ಉರ್ವಿಲ್ ಪಟೇಲ್ ವಿಧ್ವಂಸಕ ಶತಕದೊಂದಿಗೆ ದಾಖಲೆ ಸೃಷ್ಟಿಸಿದ್ದಾರೆ. ಈ ಮೂಲಕ ತಮ್ಮನ್ನು ಖರೀದಿಸದೆ ಇರುವ ತಂಡಗಳು ಪಶ್ಚಾತಾಪ ಪಡುವಂತೆ ಮಾಡಿದ್ದಾರೆ.
 

1 /6

Urvil patel: ಮೆಗಾ ಹರಾಜಿನಲ್ಲಿ ಮಾರಾಟವಾಗದ ಗುಜರಾತ್ ಕ್ರಿಕೆಟಿಗ ಉರ್ವಿಲ್ ಪಟೇಲ್ ವಿಧ್ವಂಸಕ ಶತಕದೊಂದಿಗೆ ದಾಖಲೆ ಸೃಷ್ಟಿಸಿದ್ದಾರೆ. ಈ ಮೂಲಕ ತಮ್ಮನ್ನು ಖರೀದಿಸದೆ ಇರುವ ತಂಡಗಳು ಪಶ್ಚಾತಾಪ ಪಡುವಂತೆ ಮಾಡಿದ್ದಾರೆ.  

2 /6

ಮಂಗಳವಾರ ಇಂದೋರ್‌ನಲ್ಲಿ ನಡೆದ ಉತ್ತರಾಖಂಡ ತಂಡದ ವಿರುದ್ಧದ ಪಂದ್ಯದಲ್ಲಿಉರ್ವಿಲ್ ಪಟೇಲ್ 41 ಎಸೆತಗಳನ್ನಾಡಿ 115 ರನ್‌ ಕಲೆ ಹಾಕಿ ದಾಖಲೆ ಬರೆದಿದ್ದಾರೆ. ಆಡಿದ ಅಷ್ಟು ಬಾಲ್‌ಗಳಲ್ಲಿ 8 ಬೌಂಡರಿ ಹಾಗೂ 11 ಸಿಕ್ಸರ್‌ ಸಿಡಿಸಿ ಎದುರಾಳಿ ತಂಡದ ಬೌಲರ್‌ಗಳ ಬೆವರಿಳಿಸಿದ್ದಾರೆ.  

3 /6

ತ್ರಿಪುರಾ ವಿರುದ್ಧದ ಪಂದ್ಯದಲ್ಲಿ ಕೂಡ ಉರ್ವಿಲ್‌ ಪಾಟೆಲ್‌ ಕೇವಲ 28 ಬಾಲ್‌ಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದರು. ಈ ಮೂಲಕ ಟಿ20ಯಲ್ಲಿ ಅತ್ಯಂತ ವೇಗವಾಗಿ ಶತಕ ಸಿಡಿಸಿದ ಭಾರತೀಯ ಆಟಗಾರ ಎಂಬ ಇತಿಹಾಸ ಬರೆದಿದ್ದರು.   

4 /6

ರಿಷಬ್‌ ಪಂತ್ ಈ ಹಿಂದೆ 32 ಎಸೆತಳಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದರು, ಇದೀಗ 28 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಊರ್ವಿಲ್‌ ಹೊಸ ದಾಖಲೆಯನ್ನು ತಮ್ಮ  ಮುಡಿಗೇರಿಸಿಕೊಂಡಿದ್ದಾರೆ.  

5 /6

ಗುಜರಾತ್‌ ತಂಡದ ಬೆನ್ನೆಲುಬಾಗಿ ನಿಂತಿದ್ದ ಊರ್ವಿಲ್‌ ಪಾಟೆಲ್‌ ಕೇವಲ 13.1 ಓವರ್‌ಗಳಲ್ಲಿ ಗುರಿ ಬೆನ್ನಟ್ಟುವಲ್ಲಿ ಯಶಸ್ವಿಯಾದರು. ಮೊದಲು ಬ್ಯಾಟ್ ಮಾಡಿದ ಉತ್ತರಾಖಂಡ ತಂಡ ನಿಗದಿತ 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತ್ತು.  

6 /6

ಈ ರೀತಿ ಎರಡು ಪಂದ್ಯಗಳಲ್ಲಿ ಅತೀ ಕಡಿಮೆ ಚೆಂಡುಗಳನ್ನು ಎದುರಿಸಿ ಊರ್ವಿಲ್‌ ಪಾಟೆಲ್‌ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಐಪಿಎಲ್‌ ತಂಡದಲ್ಲಿ ಇವರನ್ನು ಆಯ್ಕೆ ಮಾಡದಿರುವ ಫ್ರಾಂಚೈಸಿಗಳು ಈ ಮೂಲಕ ಪಶ್ಚಾತಾಪ ಪಡುವಂತೆ ಮಾಡಿದ್ದಾರೆ.