Pandya Brothers' Apartment: ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಮತ್ತು ಅವರ ಸಹೋದರ ಕೃನಾಲ್ ಪಾಂಡ್ಯ ತಮ್ಮ ವೃತ್ತಿಜೀವನದಲ್ಲಿ ಅತ್ಯಂತ ಕಡಿಮೆ ಸಮಯದಲ್ಲಿ ಹೆಚ್ಚು ಯಶಸ್ಸು ಸಾಧಿಸಿದ್ದಾರೆ. ಹಾರ್ದಿಕ್ ಪಾಂಡ್ಯ  (Hardik Pandya) ಮತ್ತು ಅವರ ಸಹೋದರ ಕೃನಾಲ್ ಪಾಂಡ್ಯ (Krunal Pandya) ಪ್ರಸ್ತುತ ಟೀಂ ಇಂಡಿಯಾದಿಂದ ಹೊರಗುಳಿಯುತ್ತಿದ್ದಾರೆ. ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯ ಅವರನ್ನು ಟೀಮ್ ಇಂಡಿಯಾದಿಂದ  (Team India) ಕೈಬಿಡಲಾಗಿದೆ, ಆದರೆ ಇದರ ಹೊರತಾಗಿಯೂ ಇಬ್ಬರೂ ಸಹೋದರರು ಕೋಟಿಗಳ ಒಡೆಯ.


COMMERCIAL BREAK
SCROLL TO CONTINUE READING

Hardik Pandya) ಮತ್ತು ಕೃನಾಲ್ ಪಾಂಡ್ಯ ಈ ಇಬ್ಬರೂ ಸಹೋದರರು ಕೆಲ ಸಮಯದ ಹಿಂದೆ ಮುಂಬೈನಲ್ಲಿ 30 ಕೋಟಿಯ ಐಷಾರಾಮಿ ಫ್ಲಾಟ್ ಖರೀದಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಮತ್ತು ಅವರ ಸಹೋದರ ಕೃನಾಲ್ ಪಾಂಡ್ಯ ಅವರ ಈ ಫ್ಲಾಟ್ 8 ಬೆಡ್ ರೂಂಗಳನ್ನು ಹೊಂದಿದೆ.


India vs South Africa: ಆಫ್ರಿಕನ್ ನಾಯಕನೊಂದಿಗೆ ಕೆಎಲ್ ರಾಹುಲ್ ಘರ್ಷಣೆ, ವಿಡಿಯೋ ವೈರಲ್


Pandya Brothers) ಈ ಫ್ಲಾಟ್ ಮುಂಬೈನ ರುಸ್ತಮ್ಜಿ ಪ್ಯಾರಾಮೌಂಟ್‌ನಲ್ಲಿದೆ. ಬಾಲಿವುಡ್ ನಟರಾದ ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ಕೂಡ ಈ ಸಮಾಜದಲ್ಲಿ ವಾಸಿಸುತ್ತಿದ್ದಾರೆ. ಪಾಂಡ್ಯ ಬ್ರದರ್ಸ್ ಅಪಾರ್ಟ್ಮೆಂಟ್ ಜಿಮ್, ಗೇಮಿಂಗ್ ಝೋನ್ ಮತ್ತು ಖಾಸಗಿ ಈಜುಕೊಳವನ್ನು ಸಹ ಹೊಂದಿದೆ. ಪಾಂಡ್ಯ ಬ್ರದರ್ಸ್ ಅಪಾರ್ಟ್‌ಮೆಂಟ್‌ನಲ್ಲಿ ಖಾಸಗಿ ಥಿಯೇಟರ್ ಕೂಡ ಇದೆ.


Cricket News: Corona ಹಿನ್ನೆಲೆ 2021-22ರ ಸೀಜನ್ ನ ಒಟ್ಟು ಮೂರು ಟೂರ್ನಿಗಳನ್ನು ರದ್ದುಗೊಳಿಸಿದ BCCI


ಕಠಿಣ ಪರಿಶ್ರಮದಿಂದ ಯಶಸ್ಸು :
ಹಾರ್ದಿಕ್ ಪಾಂಡ್ಯ ಮತ್ತು ಅವರ ಸಹೋದರ ಕೃನಾಲ್ ಪಾಂಡ್ಯ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರು, ಮೊದಲು ಅವರು ವಡೋದರದ ಸಣ್ಣ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದರು. ಅವರ ಶ್ರಮವೇ ಇಂದು ಅವರನ್ನು ಗುಜರಾತ್‌ನಿಂದ ಮುಂಬೈನ ಐಷಾರಾಮಿ ಮನೆಗೆ ಕರೆದೊಯ್ದಿದೆ. ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.