Commonwealth Games 2022 Medal Tally: ಕಾಮನ್‌ವೆಲ್ತ್ ಗೇಮ್ಸ್ 2022 ಅಧಿಕೃತವಾಗಿ ಜುಲೈ 29ರಂದು ಬ್ರಿಟನ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿರುವ ಅಲೆಕ್ಸಾಂಡರ್ ಸ್ಟೇಡಿಯಂನಲ್ಲಿ ಭವ್ಯವಾದ ಉದ್ಘಾಟನಾ ಸಮಾರಂಭದೊಂದಿಗೆ ಪ್ರಾರಂಭವಾಯಿತು. ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ 12-ದಿನಗಳ ಕ್ರೀಡಾ ಸಂಭ್ರಮವಾಗಿದ್ದು, ಇದು ಔಪಚಾರಿಕವಾಗಿ ಆಗಸ್ಟ್‌ 8ರಂದು ಕೊನೆಗೊಳ್ಳಲಿದೆ. ಇನ್ನು ಪ್ರಪಂಚದಾದ್ಯಂತದ ಪ್ರತಿ ದಿನ ವೀಕ್ಷಕರು ಕಾಮನ್‌ವೆಲ್ತ್ ಗೇಮ್ಸ್ 2022 ಮೆಡಲ್ ಟ್ಯಾಲಿಯನ್ನು ನೋಡಲು ಕಾಯುತ್ತಿದ್ದಾರೆ. ಆಗಸ್ಟ್ 5ರಂದು ಕಾಮನ್‌ವೆಲ್ತ್ ಗೇಮ್ಸ್ 2022 8 ನೇ ದಿನವಾಗಿದ್ದು, ಭಾರತ ಪದಕ ಬೇಟೆ ಮುಂದುವರೆಸಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: IND vs WI: ಮುಂದುವರೆದ ರೋ‘ಹಿಟ್’ ಪಾರುಪತ್ಯ! ಮತ್ತೊಂದು ಸರಣಿ ಗೆದ್ದ ಟೀಂ ಇಂಡಿಯಾ


ಪ್ರಸ್ತುತ ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ 22ನೇ ಆವೃತ್ತಿಯ ಕಾಮನ್‌ವೆಲ್ತ್ ಕ್ರೀಡಾಕೂಟ ನಡೆಯುತ್ತಿದೆ. ಒಂಬತ್ತು ದಿನಗಳ ಲೈವ್ ಆಕ್ಷನ್ ಪೂರ್ಣಗೊಂಡಿದೆ. ಶನಿವಾರ ಅಂದರೆ ಆಗಸ್ಟ್ 6ರಂದು ಟೀಮ್ ಇಂಡಿಯಾಕ್ಕೆ ಅತ್ಯುತ್ತಮ ದಿನವಾಗಿತ್ತು. ಇನ್ನು ಇಲ್ಲಿಯವರೆಗೆ ಭಾರತ ತಂಡ 13 ಚಿನ್ನ, 11 ಬೆಳ್ಳಿ ಮತ್ತು 16 ಕಂಚು ಸೇರಿದಂತೆ 40 ಪದಕಗಳನ್ನು ಗೆದ್ದಿದೆ. ಈ ಮೂಲಕ ಐದನೇ ಸ್ಥಾನದಲ್ಲಿದೆ. 


CWG 2022 ರಲ್ಲಿ ಇಲ್ಲಿಯವರೆಗೆ ಭಾರತೀಯ ಪದಕ ವಿಜೇತರ ಪಟ್ಟಿ ಇಲ್ಲಿದೆ


ಜುಲೈ 30 ಚಿನ್ನ ಸಾಯಿಖೋಮ್ ಮೀರಾಬಾಯಿ ಚಾನು ವೇಟ್ ಲಿಫ್ಟಿಂಗ್ ಮಹಿಳೆಯರ 49 ಕೆ.ಜಿ
ಜುಲೈ 30 ಬೆಳ್ಳಿ ಸಂಕೇತ್ ಸರ್ಗರ್ ವೇಟ್ ಲಿಫ್ಟಿಂಗ್ ಪುರುಷರ 55 ಕೆ.ಜಿ
ಜುಲೈ 30 ಬೆಳ್ಳಿ ಬಿಂದ್ಯಾರಾಣಿ ದೇವಿ ವೇಟ್ ಲಿಫ್ಟಿಂಗ್ ಮಹಿಳೆಯರ 55 ಕೆ.ಜಿ
ಜುಲೈ 30 ಕಂಚು ಗುರುರಾಜ ಪೂಜಾರಿ ವೇಟ್ ಲಿಫ್ಟಿಂಗ್ ಪುರುಷರ 61 ಕೆ.ಜಿ
ಜುಲೈ 31 ಚಿನ್ನ ಜೆರೆಮಿ ಲಾಲ್ರಿನ್ನುಂಗಾ ವೇಟ್ ಲಿಫ್ಟಿಂಗ್  ಪುರುಷರ 67 ಕೆ.ಜಿ
ಜುಲೈ 31 ಚಿನ್ನ ಅಚಿಂತಾ ಶೆಯುಲಿ ವೇಟ್ ಲಿಫ್ಟಿಂಗ್ ಪುರುಷರ 73 ಕೆ.ಜಿ
ಆಗಸ್ಟ್ 1 ಬೆಳ್ಳಿ ಸುಶೀಲಾ ಲಿಕ್ಮಾಬಮ್ ಜೂಡೋ ಮಹಿಳೆಯರ 48 ಕೆ.ಜಿ
ಆಗಸ್ಟ್ 1 ಕಂಚು ವಿಜಯ್ ಯಾದವ್ ಜೂಡೋ ಪುರುಷರ 60 ಕೆ.ಜಿ
ಆಗಸ್ಟ್ 1 ಕಂಚು  ಹರ್ಜಿಂದರ್ ಕೌರ್ ವೇಟ್ ಲಿಫ್ಟಿಂಗ್ ಮಹಿಳೆಯರ 71 ಕೆ.ಜಿ
ಆಗಸ್ಟ್ 2 ಚಿನ್ನ ರೂಪಾ/ಲವ್ಲಿ/ನಯನ್ಮೋನಿ/ಪಿಂಕಿ ಲಾನ್ ಬೌಲ್ಸ್  ವುಮೆನ್ಸ್‌ ಫೋರ್ಸ್‌
ಆಗಸ್ಟ್ 2 ಚಿನ್ನ ಶರತ್/ಹರ್ಮೀತ್/ಸತಿಯನ್/ಸನಿಲ್ ಟೇಬಲ್‌ ಟೆನ್ನಿಸ್‌ ಪುರುಷರ ತಂಡ
ಆಗಸ್ಟ್ 2 ಬೆಳ್ಳಿ ವಿಕಾಸ್ ಠಾಕೂರ್ ವೇಟ್ ಲಿಫ್ಟಿಂಗ್ ಪುರುಷರ 96 ಕೆ.ಜಿ
ಆಗಸ್ಟ್ 2 ಬೆಳ್ಳಿ  ಭಾರತ ಮಿಶ್ರ ತಂಡ ಬ್ಯಾಡ್ಮಿಂಟನ್  
ಆಗಸ್ಟ್ 3 ಬೆಳ್ಳಿ ತುಲಿಕಾ ಮನ್ ಜೂಡೋ ಮಹಿಳೆಯರ +78 ಕೆ.ಜಿ
ಆಗಸ್ಟ್ 3 ಕಂಚು      
ಆಗಸ್ಟ್ 3 ಕಂಚು  ಲವ್‌ಪ್ರೀತ್ ಸಿಂಗ್ ವೇಟ್‌ಲಿಫ್ಟಿಂಗ್ ಪುರುಷರ 109 ಕೆಜಿ
ಆಗಸ್ಟ್ 3 ಕಂಚು ಸೌರವ್ ಘೋಸಲ್ ಸ್ಕ್ವಾಷ್  ಪುರುಷರ ಸಿಂಗಲ್ಸ್
ಆಗಸ್ಟ್ 3  ಕಂಚು ಗುರುಪ್ರೀತ್ ಸಿಂಗ್ ವೇಟ್ ಲಿಫ್ಟಿಂಗ್ ಪುರುಷರ +109 ಕೆ.ಜಿ
ಆಗಸ್ಟ್ 3 ಕಂಚು ತೇಜಸ್ವಿನ್ ಶಂಕರ್  ಅಥ್ಲೆಟಿಕ್ಸ್ ಹೈ ಜಂಪ್
ಆಗಸ್ಟ್ 4 ಚಿನ್ನ ಸುಧೀರ್ ಪ್ಯಾರಾ-ಪವರ್ ಲಿಫ್ಟಿಂಗ್ ಪುರುಷರ ಹೆವಿ ವೇಟ್‌
ಆಗಸ್ಟ್ 4 ಬೆಳ್ಳಿ ಮುರಳಿ ಶ್ರೀಶಂಕರ್ ಅಥ್ಲೆಟಿಕ್ಸ್ ಲಾಂಗ್ ಜಂಪ್
ಆಗಸ್ಟ್ 5 ಚಿನ್ನ ಬಜರಂಗ್ ಪುನಿಯಾ ಕುಸ್ತಿ ಪುರುಷರ ಫ್ರೀಸ್ಟೈಲ್ 65 ಕೆ.ಜಿ
ಆಗಸ್ಟ್ 5 ಚಿನ್ನ ಸಾಕ್ಷಿ ಮಲಿಕ್ ಕುಸ್ತಿ  ಮಹಿಳೆಯರ ಫ್ರೀಸ್ಟೈಲ್ 62 ಕೆ.ಜಿ
ಆಗಸ್ಟ್ 5 ಚಿನ್ನ ದೀಪಕ್ ಪುನಿಯಾ ಕುಸ್ತಿ ಪುರುಷರ ಫ್ರೀಸ್ಟೈಲ್ 86 ಕೆ.ಜಿ
ಆಗಸ್ಟ್ 5 ಬೆಳ್ಳಿ ಅಂಶು ಮಲಿಕ್ ಕುಸ್ತಿ ಮಹಿಳೆಯರ 57 ಕೆ.ಜಿ
ಆಗಸ್ಟ್ 5 ಕಂಚು ದಿವ್ಯಾ ಕಕ್ರಾನ್ ಕುಸ್ತಿ ಮಹಿಳೆಯರ 68 ಕೆ.ಜಿ
ಆಗಸ್ಟ್ 5 ಕಂಚು ಮೋಹಿತ್ ಗ್ರೆವಾಲ್ ಕುಸ್ತಿ ಪುರುಷರ 125 ಕೆ.ಜಿ
ಆಗಸ್ಟ್ 6 ಚಿನ್ನ ರವಿ ದಹಿಯಾ ಕುಸ್ತಿ ಪುರುಷರ ಫ್ರೀಸ್ಟೈಲ್ 57 ಕೆ.ಜಿ
ಆಗಸ್ಟ್ 6 ಚಿನ್ನ ವಿನೇಶ್ ಫೋಗಟ್ ಕುಸ್ತಿ ಮಹಿಳೆಯರ ಫ್ರೀಸ್ಟೈಲ್ 53 ಕೆ.ಜಿ
ಆಗಸ್ಟ್ 6 ಚಿನ್ನ ನವೀನ್ ಕುಮಾರ್ ಕುಸ್ತಿ ಪುರುಷರ ಫ್ರೀಸ್ಟೈಲ್ 74 ಕೆ.ಜಿ
ಆಗಸ್ಟ್ 6 ಚಿನ್ನ ಭಾವಿನಾ ಪಟೇಲ್ ಪ್ಯಾರಾ-ಟೇಬಲ್‌ ಟೆನ್ನಿಸ್‌ ಮಹಿಳೆಯರ ಸಿಂಗಲ್ಸ್ C3-5
ಆಗಸ್ಟ್ 6 ಬೆಳ್ಳಿ ಪ್ರಿಯಾಂಕಾ ಗೋಸ್ವಾಮಿ ಅಥ್ಲೆಟಿಕ್ಸ್  ಮಹಿಳೆಯರ 10,000 ಮೀ ಓಟದ ನಡಿಗೆ
ಆಗಸ್ಟ್ 6 ಬೆಳ್ಳಿ ಅವಿನಾಶ್ ಸೇಬಲ್ ಅಥ್ಲೆಟಿಕ್ಸ್ ಪುರುಷರ 3000ಮೀ ಸ್ಟೀಪಲ್ ಚೇಸ್
ಆಗಸ್ಟ್ 6 ಬೆಳ್ಳಿ ಸುನಿಲ್/ನವನೀತ್/ಚಂದನ್/ದಿನೇಶ್ ಲಾನ್ ಬೌಲ್ಸ್ ಪುರುಷರ ತಂಡ
ಆಗಸ್ಟ್ 6 ಕಂಚು ಜಾಸ್ಮಿನ್ ಲಂಬೋರಿಯಾ ಬಾಕ್ಸಿಂಗ್ ಮಹಿಳೆಯರ ತಂಡ
ಆಗಸ್ಟ್ 6 ಕಂಚು ಪೂಜಾ ಗೆಹ್ಲೋಟ್ ಕುಸ್ತಿ ಮಹಿಳೆಯರ ಫ್ರೀಸ್ಟೈಲ್ 50 ಕೆ.ಜಿ
ಆಗಸ್ಟ್ 6 ಕಂಚು ಪೂಜಾ ಸಿಹಾಗ್ ಕುಸ್ತಿ ಮಹಿಳೆಯರ ಫ್ರೀಸ್ಟೈಲ್ 76 ಕೆ.ಜಿ
ಆಗಸ್ಟ್ 6 ಕಂಚು ಮೊಹಮ್ಮದ್ ಹುಸಾಮುದ್ದೀನ್ ಬಾಕ್ಸಿಂಗ್ ಪುರುಷರ ಫೆದರ್ ವೇಟ್
ಆಗಸ್ಟ್ 6 ಕಂಚು ದೀಪಕ್ ನೆಹ್ರಾ ಕುಸ್ತಿ ಪುರುಷರ ಫ್ರೀಸ್ಟೈಲ್ 97 ಕೆ.ಜಿ
ಆಗಸ್ಟ್ 6 ಕಂಚು ಸೋನಾಲ್ಬೆನ್ ಪಟೇಲ್ ಪ್ಯಾರಾ-ಟೇಬಲ್‌ ಟೆನ್ನಿಸ್‌  ಮಹಿಳೆಯರ ಸಿಂಗಲ್ಸ್ C3-5
ಆಗಸ್ಟ್ 6 ಕಂಚು ರೋಹಿತ್ ಟೋಕಾಸ್ ಬಾಕ್ಸಿಂಗ್ ಪುರುಷರ ವೆಲ್ಟರ್ ವೇಟ್

 


​ಇದನ್ನೂ ಓದಿ: CWG 2022: ಪ್ಯಾರಾ ಟೇಬಲ್ ಟೆನಿಸ್‍ನಲ್ಲಿ ಚಿನ್ನ ಗೆದ್ದ ಭಾವಿನಾಬೆನ್ ಪಟೇಲ್


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.