ಬರ್ಮಿಂಗ್‌ಗ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್‌ನ 4ನೇ ದಿನ ಭಾರತ ಭರ್ಜರಿ ಆಟ ಪ್ರದರ್ಶನ ಮಾಡಿದೆ. ಭಾರತವು ಮಹಿಳೆಯರ ನಾಲ್ಕು ಲಾನ್ ಬೌಲ್‌ಗಳ ಈವೆಂಟ್‌ನ ಫೈನಲ್‌ಗೆ ಪ್ರವೇಶಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಕನಿಷ್ಠ ಬೆಳ್ಳಿ ಪದಕ ಭಾರತದ ಪದಕ ಪಟ್ಟಿಗೆ ಸೇರುವುದು ಖಚಿತವಾಗಿದೆ. ಇನ್ನೊಂದೆಡೆ ಪ್ಯೂಜಿಲಿಸ್ಟ್ ಅಮಿತ್ ಪಂಗಲ್ ಕ್ವಾರ್ಟರ್ ಫೈನಲ್‌ಗೆ ಹೆಜ್ಜೆ ಇಟ್ಟಿದ್ದರೆ, ಜೂಡೋ ಮಹಿಳೆಯರ 48 ಕೆಜಿ ಸ್ಪರ್ಧೆಯಲ್ಲಿ ಸುಶೀಲಾ ದೇವಿ ಲಿಖ್ಮಾಬಾಮ್ ಬೆಳ್ಳಿ ಗೆದ್ದು ಭಾರತದ ಖಾತೆಗೆ ಮತ್ತೊಂದು ಪದಕವನ್ನು ತಂದುಕೊಟ್ಟಿದ್ದಾರೆ. ಇದರ ಜೊತೆಗೆ ಹರ್ಜಿಂದರ್ ಕೌರ್ ಸಹ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕಾಬೂಲ್‌ನಲ್ಲಿ ಅಲ್ ಖೈದಾ ಮುಖ್ಯಸ್ಥ ಅಯ್ಮನ್ ಅಲ್ ಝವಾಹಿರಿ ಹತ್ಯೆ


ಇನ್ನು ಇಂದು ನಡೆಯಲಿರುವ ಐದನೇ ದಿನದ ಆಟದಲ್ಲಿ ಭಾರತದ ಕಲಿಗಳು ಪದಕ ಬೇಟೆಗೆ ಮುಂದಾಗಿದ್ದಾರೆ. ಮಹಿಳೆಯರ ನಾಲ್ಕು ತಂಡಗಳು ಲಾನ್ ಬೌಲ್ಸ್ ಈವೆಂಟ್‌ನಲ್ಲಿ ಚಿನ್ನದ ಪದಕ ಬೇಟೆ ಮಾಡಲಿದೆ. ಇನ್ನೊಂದೆಡೆ ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನಿಸ್‌ನಲ್ಲಿ ಸಹ ಭಾರತ ಚಿನ್ನದ ಪದಕ ಪಡೆಯಲು ಹೋರಾಟ ನಡೆಸಲಿದೆ. ಸದ್ಯ ಭಾರತ ಮೂರು ಚಿನ್ನ, ಮೂರು ಬೆಳ್ಳಿ ಮತ್ತು ಮೂರು ಕಂಚಿನ ಪದಕಗಳನ್ನು ತನ್ನ ತೆಕ್ಕೆಗೆ ಪಡೆದುಕೊಂಡಿದೆ. 


ಭಾರತದ 5ನೇ ದಿನದ ಪೂರ್ಣ ವೇಳಾಪಟ್ಟಿ ಇಲ್ಲಿದೆ: 
ಲಾನ್ ಬೌಲ್ಸ್ (1 PM)
ಮಹಿಳೆಯರ ಜೋಡಿ ರೌಂಡ್ 1 (ಭಾರತ ವಿರುದ್ಧ ನ್ಯೂಜಿಲೆಂಡ್)
ಮಹಿಳೆಯರ ಟ್ರಿಪಲ್ ರೌಂಡ್ 1 (ಭಾರತ ವಿರುದ್ಧ ನ್ಯೂಜಿಲೆಂಡ್ 1 PM)
ಪುರುಷರ ಸಿಂಗಲ್ಸ್ ರೌಂಡ್ 1 (ನ್ಯೂಜಿಲೆಂಡ್‌ನ ಮೃದುಲ್ ಬೊರ್ಗೊಹೈನ್ ವಿರುದ್ಧ ಶಾನನ್ ಮೆಸಿಲ್ರಾಯ್, 4:15 PM)
ಮಹಿಳೆಯರ ನಾಲ್ಕು ಚಿನ್ನದ ಪದಕಗಳ ಪಂದ್ಯ (ಭಾರತ ವಿರುದ್ಧ ದಕ್ಷಿಣ ಆಫ್ರಿಕಾ, 4:15 PM)
ಮೆನ್ಸ್‌ ಫೋರ್ಸ್‌ ರೌಂಡ್ 1 (ಭಾರತ ವಿರುದ್ಧ ಫಿಜಿ, 8:45 PM)
ಮಹಿಳೆಯರ ಟ್ರಿಪಲ್ ರೌಂಡ್ 2 (ಭಾರತ vs ಇಂಗ್ಲೆಂಡ್, 8:45 PM)


ವೇಟ್‌ಲಿಫ್ಟಿಂಗ್ (ಮಧ್ಯಾಹ್ನ 2 ಗಂಟೆಗೆ)
ಮಹಿಳೆಯರ 76 ಕೆಜಿ (ಪೂನಮ್ ಯಾದವ್)
ಪುರುಷರ 96 ಕೆಜಿ (ವಿಕಾಸ್ ಠಾಕೂರ್, ಸಂಜೆ 6:30)
ಮಹಿಳೆಯರ 87 ಕೆಜಿ (ಉಷಾ ಬನ್ನೂರ್ ಎನ್‌ಕೆ, 11 ಗಂಟೆಗೆ)


ಅಥ್ಲೆಟಿಕ್ಸ್ (2:30 PM)
ಪುರುಷರ ಲಾಂಗ್ ಜಂಪ್ ಅರ್ಹತಾ ಸುತ್ತು (ಮುರಳಿ ಶ್ರೀಶಂಕರ್, ಮುಹಮ್ಮದ್ ಅನೀಸ್ ಯಾಹಿಯಾ)
ಪುರುಷರ ಹೈಜಂಪ್ ಅರ್ಹತಾ ಸುತ್ತು (ತೇಜಸ್ವಿನ್ ಶಂಕರ್, 12:03 AM)
ಮಹಿಳೆಯರ ಡಿಸ್ಕಸ್ ಥ್ರೋ ಫೈನಲ್ (ಸೀಮಾ ಪುನಿಯಾ, ನವಜೀತ್ ಕೌರ್ ಧಿಲ್ಲೋನ್, 12:52 AM)


ಅಕ್ವಾಟಿಕ್ಸ್ (3:04 PM)
ಪುರುಷರ 200m ಬ್ಯಾಕ್‌ಸ್ಟ್ರೋಕ್ ಹೀಟ್ 2 (ಶ್ರೀಹರಿ ನಟರಾಜ್)
ಪುರುಷರ 1500m ಫ್ರೀಸ್ಟೈಲ್ ಹೀಟ್ 1 (ಅದ್ವೈತ್ ಪುಟ, 4:10 PM)
ಪುರುಷರ 1500m ಫ್ರೀಸ್ಟೈಲ್ ಹೀಟ್ 2 (ಕುಶಾಗ್ರಾ ರಾವತ್, 4:28 PM)


ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ (5:30 PM)
ಪುರುಷರ ವಾಲ್ಟ್ ಫೈನಲ್ (ಸತ್ಯಜಿತ್ ಮೊಂಡಲ್)
ಪುರುಷರ ಸಮಾನಾಂತರ ಬಾರ್ಸ್ ಫೈನಲ್ (ಸೈಫ್ ಸಾದಿಕ್ ತಾಂಬೋಲಿ, 6:35 PM)


ಟೇಬಲ್ ಟೆನಿಸ್ (6 PM)
ಮಿಶ್ರ ತಂಡ ಚಿನ್ನದ ಪದಕ ಪಂದ್ಯ (ಭಾರತ vs TBD)


ಹಾಕಿ (6:30 PM)
ಮಹಿಳೆಯರ ಪೂಲ್ A ಭಾರತ vs ಇಂಗ್ಲೆಂಡ್


ಸ್ಕ್ವಾಷ್ (ರಾತ್ರಿ 8:30)
ಮಹಿಳೆಯರ ಪ್ಲೇಟ್ ಸೆಮಿಫೈನಲ್ (ಸುನಯ್ನಾ ಸಾರಾ ಕುರುವಿಲ್ಲಾ ವಿರುದ್ಧ ಫಾಜಿಯಾ ಜಾಫರ್)
ಪುರುಷರ ಸಿಂಗಲ್ಸ್ ಸೆಮಿಫೈನಲ್ (ಸೌರವ್ ಘೋಷಾಲ್, 9:15 PM)


ಬ್ಯಾಡ್ಮಿಂಟನ್ (10 PM)
ಮಿಶ್ರ ತಂಡ ಫೈನಲ್ಸ್


ಬಾಕ್ಸಿಂಗ್ (11:45 PM)
63.5-67kg ರೌಂಡ್ ಆಫ್ 16, ರೋಹಿತ್ ಟೋಕಾಸ್ ವಿರುದ್ಧ ಘಾನಾದ ಆಲ್ಫ್ರೆಡ್ ಕೋಟೆ


ಇದನ್ನೂ ಓದಿ: ಐಟಿಆರ್ ಇ-ವೆರಿಫೈ ಪ್ರಕ್ರಿಯೆಯನ್ನು 30 ದಿನಗಳೊಳಗೆ ಪೂರ್ಣಗೊಳಿಸಿ, ಇಲ್ಲವೇ ಭಾರೀ ನಷ್ಟ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.