ಕಾಬೂಲ್‌ನಲ್ಲಿ ಅಲ್ ಖೈದಾ ಮುಖ್ಯಸ್ಥ ಅಯ್ಮನ್ ಅಲ್ ಝವಾಹಿರಿ ಹತ್ಯೆ

ಅಯ್ಮನ್ ಅಲ್ ಝವಾಹಿರಿ ಹತ್ಯೆ : ಭಯೋತ್ಪಾದನೆಯ ಮೇಲೆ  ಪ್ರಬಲ ದಾಳಿಯಲ್ಲಿ ಅಲ್ ಖೈದಾ ಮುಖ್ಯಸ್ಥ ಅಯ್ಮನ್ ಅಲ್ ಝವಾಹಿರಿಯನ್ನು ಹತ್ಯೆಗೈದಿರುವುದಾಗಿ ಅಮೇರಿಕಾ ಹೇಳಿಕೊಂಡಿದೆ. ಕಾಬೂಲ್‌ನಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಅಲ್-ಖೈದಾ ನಾಯಕನನ್ನು ಕೊಂದಿರುವುದಾಗಿ ಯುಎಸ್ ಅಧ್ಯಕ್ಷ ಘೋಷಿಸಿದ್ದಾರೆ.

Written by - Yashaswini V | Last Updated : Aug 2, 2022, 07:29 AM IST
  • ಭಯೋತ್ಪಾದಕ ಸಂಘಟನೆ ಅಲ್ ಖೈದಾ ನಾಯಕ ಅಯ್ಮಾನ್ ಅಲ್ ಝವಾಹಿರಿಯನ್ನು ಕೊಂದಿರುವುದಾಗಿ ಅಮೆರಿಕ ಹೇಳಿಕೊಂಡಿದೆ.
  • ಅಲ್ ಖೈದಾ ಮುಖ್ಯಸ್ಥ ಅಯ್ಮನ್ ಅಲ್ ಝವಾಹಿರಿ ಹತ್ಯೆ ಬಗ್ಗೆ ಘೋಷಿಸಿರುವ ಅಮೇರಿಕ ಅಧ್ಯಕ್ಷ ಜೋ ಬಿಡೆನ್
  • ಜುಲೈ 31 ರಂದು ರಾತ್ರಿ 9:48 ಕ್ಕೆ ನಡೆದ ಹೆಲ್‌ಫೈರ್ ಕ್ಷಿಪಣಿಗಳ ವೈಮಾನಿಕ ದಾಳಿಯಲ್ಲಿ ಅಲ್ ಖೈದಾ ನಾಯಕನ ಹತ್ಯೆ
ಕಾಬೂಲ್‌ನಲ್ಲಿ ಅಲ್ ಖೈದಾ ಮುಖ್ಯಸ್ಥ ಅಯ್ಮನ್ ಅಲ್ ಝವಾಹಿರಿ ಹತ್ಯೆ  title=
US had killed al-Qaeda leader Ayman al-Zawahiri in an airstrike in Kabul

ಅಯ್ಮನ್ ಅಲ್ ಝವಾಹಿರಿ ಹತ್ಯೆ :  ಕಾಬೂಲ್‌ನಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಅಲ್-ಖೈದಾ ನಾಯಕ ಅಯ್ಮನ್ ಅಲ್-ಝವಾಹಿರಿಯನ್ನು ಹತ್ಯೆಗೈದಿರುವುದಾಗಿ ಅಮೇರಿಕಾ ಅಧ್ಯಕ್ಷ ಅಧ್ಯಕ್ಷ ಜೋ ಬಿಡೆನ್ ಘೋಷಿಸಿದ್ದಾರೆ. ಯುಎಸ್ ಅಧಿಕಾರಿಗಳ ಪ್ರಕಾರ, ಜುಲೈ 31 ರಂದು ಕಾಬೂಲ್‌ನಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಅಲ್-ಖೈದಾ ನಾಯಕನನ್ನು ಕೊಂದಿರುವುದಾಗಿ ಮಾಹಿತಿ ಲಭ್ಯವಾಗಿದೆ.

71ರ ಹರೆಯದ ಝವಾಹಿರಿ ಒಂದು ಕಾಲದಲ್ಲಿ ಒಸಾಮಾ ಬಿನ್ ಲಾಡೆನ್ ಅವರ ವೈಯಕ್ತಿಕ ವೈದ್ಯರಾಗಿ ಕೆಲಸ ಮಾಡಿದ್ದರು. ಒಸಾಮಾ ಬಿನ್ ಲಾಡೆನ್‌ನನ್ನು ಕೊಂದ 11 ವರ್ಷಗಳ ನಂತರ ಝವಾಹಿರಿ ಹತ್ಯೆಯಾಗಿದೆ. ಯುಎಸ್ ಅಧಿಕಾರಿಯ ಪ್ರಕಾರ, ಝವಾಹಿರಿ ಕಾಬೂಲ್‌ನ ಸುರಕ್ಷಿತ ಗೃಹದಲ್ಲಿ ಆಶ್ರಯ ಪಡೆದಿದ್ದನು. ಜುಲೈ 31 ರಂದು ರಾತ್ರಿ 9:48 ಕ್ಕೆ ನಡೆದ  ಹೆಲ್‌ಫೈರ್ ಕ್ಷಿಪಣಿಗಳ ವೈಮಾನಿಕ ದಾಳಿಯಲ್ಲಿ  ಈತನನ್ನು ಕೊಲ್ಲಲಾಗಿದೆ.  

ಇದನ್ನೂ ಓದಿ- ಸೌದಿ ಅರೇಬಿಯಾದಲ್ಲಿ ಪತ್ತೆಯಾಯ್ತು 8000 ವರ್ಷಗಳ ಪುರಾತನ ದೇವಾಲಯ!

ಅಲ್ ಖೈದಾ ಮುಖ್ಯಸ್ಥ ಅಯ್ಮನ್ ಅಲ್ ಝವಾಹಿರಿ ಹತ್ಯೆ ಬಗ್ಗೆ ಘೋಷಿಸಿರುವ ಅಮೇರಿಕ ಅಧ್ಯಕ್ಷ  ಜೋ ಬಿಡೆನ್, '9/11 ದಾಳಿಯ ಯೋಜನೆಯಲ್ಲಿ ಅಲ್ ಜವಾಹಿರಿ ಭಾಗಿಯಾಗಿದ್ದ. ಈ ದಾಳಿಯಲ್ಲಿ 2,977 ಜನರು ಕೊಲ್ಲಲ್ಪಟ್ಟಿದ್ದರು ಮತ್ತು ಝವಾಹಿರಿ ಈ ಹತ್ಯೆಗಳಿಗೆ ಕಾರಣರಾಗಿದ್ದರು. ದಶಕಗಳ ಕಾಲ, ಅವರು ಅಮೆರಿಕನ್ನರ ವಿರುದ್ಧದ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ ಎಂದಿದ್ದಾರೆ.

ಇದನ್ನೂ ಓದಿ- Deadliest Female: ಇವಳೇ ವಿಶ್ವದ ಅತ್ಯಂತ ಕ್ರೂರ ಮಹಿಳೆ! ಸುಂದರವಾಗಿ ಕಾಣಲು 650 ಜನರ ರಕ್ತ ಕುಡಿದಿದ್ದಾಳಂತೆ

ಅಯ್ಮನ್ ಅಲ್ ಝವಾಹಿರಿ ಹತ್ಯೆ ಕುರಿತಂತೆ ಮಾತನಾಡಿರುವ  ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್, ಜುಲೈ 31 ರಂದು, ಕಾಬೂಲ್ ನಗರದ ಶೇರ್ಪುರ್ ಪ್ರದೇಶದ ವಸತಿ ಗೃಹದ ಮೇಲೆ ವೈಮಾನಿಕ ದಾಳಿ ನಡೆಸಲಾಯಿತು. ಘಟನೆಯು ಮೊದಲಿಗೆ ಅಸ್ಪಷ್ಟವಾಗಿತ್ತು, ಆದರೆ ಇಸ್ಲಾಮಿಕ್ ಎಮಿರೇಟ್‌ನ ಭದ್ರತೆ ಮತ್ತು ಗುಪ್ತಚರ ಸೇವೆಗಳು ಘಟನೆಯ ಬಗ್ಗೆ ತನಿಖೆ ನಡೆಸಿವೆ ಮತ್ತು ಪ್ರಾಥಮಿಕ ಸಂಶೋಧನೆಗಳು ಯುಎಸ್ ಡ್ರೋನ್‌ನಿಂದ ದಾಳಿ ನಡೆಸಲಾಗಿದೆ. ಈ ದಾಳಿಯನ್ನು ನಾವು ಬಲವಾಗಿ ಖಂಡಿಸುತ್ತೇವೆ ಮತ್ತು ಇದು ಅಂತರರಾಷ್ಟ್ರೀಯ ತತ್ವಗಳು ಮತ್ತು ದೋಹಾ ಒಪ್ಪಂದದ ಸ್ಪಷ್ಟ ಉಲ್ಲಂಘನೆ ಎಂದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News