ಮುಂಬೈ:  ದಿನೇಶ್ ಕಾರ್ತಿಕ್ ರಾಯಲ್ ಚಾಲೆಂಜರ್ಸ್ ಬೆಂಗಳೂರಿನಲ್ಲಿ ಈಗ ತಮ್ಮ ಅದ್ಬುತ ಪ್ರದರ್ಶನದಿಂದ ಸ್ಟಾರ್ ಆಟಗಾರನಾಗಿ ಹೊರಹೊಮ್ಮಿದ್ದಾರೆ, ಈಗ ಅವರು ಏಕಮೇವ ವ್ಯಕ್ತಿಯಾಗಿ ಪಂದ್ಯವನ್ನು ಗೆಲ್ಲಿಸಿಕೊಡುವ ಸಾಮರ್ಥ್ಯಕ್ಕೆ ಕ್ರಿಕೆಟ್ ಜಗತ್ತಿನ ದಿಗ್ಗಜರೆಲ್ಲಾ ಅಚ್ಚರಿ ವ್ಯಕ್ತಪಡಿಸಿದ್ದಾರೆ.ಆದರೆ ಇಂತಹ ಆಟಗಾರ ಟೀಮ್ ಇಂಡಿಯಾ ತಂಡದಲ್ಲಿ ಇದ್ದಾಗ ಅಂತಹ ನಿರೀಕ್ಷಿತ ಪ್ರದರ್ಶನವನ್ನು ನೀಡುವಲ್ಲಿ ವಿಫಲರಾಗಿದ್ದರು.ಅದರಲ್ಲೂ ಧೋನಿ ತಂಡಕ್ಕೆ ಬಂದ ನಂತರ ಅವರ ಸ್ಥಾನಕ್ಕೆ ಒಂದು ರೀತಿ ಆಪತ್ತು ಎದುರಾಯಿತು ಎಂದು ಹೇಳಬಹುದು.


COMMERCIAL BREAK
SCROLL TO CONTINUE READING

ಆದಾಗ್ಯೂ ಈ ಆಟಗಾರ ಈಗ ನೀಡುತ್ತಿರುವ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನವನ್ನು ನೋಡುತ್ತಾ ಹೋದಾಗ ಅವರ ಕೌಟುಂಬಿಕ ಜೀವನದಲ್ಲಿ ಒಂದು ರೀತಿ ಬಿರುಗಾಳಿಯೇ ಬಂದಿತ್ತು ಎಂದು ಹೇಳಬಹುದು, ಇಂತಹ ಎಲ್ಲ ಅಡೆತಡೆಗಳನ್ನು ಎದುರಿಸಿ ಅವರು ಈಗ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನಕ್ಕೆ ಇಡೀ ಕ್ರಿಕೆಟ್ ಜಗತ್ತೇ ಅವರನ್ನು ಕೊಂಡಾಡುತ್ತಿದೆ.


ಹೌದು, ದಿನೇಶ್ ಕಾರ್ತಿಕ್ ಅವರ ವೈವಾಹಿಕ ಜೀವನವನ್ನು ನೋಡಿದಾಗ ಎಂತಹ ವ್ಯಕ್ತಿಗೂ ಕೂಡ ಇದು ಅಚ್ಚರಿಯನ್ನು ಮೂಡಿಸುತ್ತದೆ.ಒಂದಾನೊಂದು ಕಾಲದಲ್ಲಿ ಅವರು ಧೋನಿ ನಂತರ ತಂಡದ ಎರಡನೇ ವಿಕೆಟ್ ಕೀಪರ್ ಆಗಿದ್ದರು, ಜೊತೆಗೆ ಅವರು ತಮಿಳುನಾಡು ರಣಜಿ ತಂಡದ ನಾಯಕರಾಗಿಯೂ ಅವರು ಕಾರ್ಯನಿರ್ವಹಿಸುತ್ತಿದ್ದರು.ಆದರೆ ಅವರ ಸಹ ಆಟಗಾರ ಮುರುಳಿ ವಿಜಯ್ ಒಂದರ್ಥದಲ್ಲಿ ಅವರ ಬೆನ್ನಿಗೆ ಚೂರಿ ಹಾಕಿದ್ದರು ಎಂದು ಹೇಳಬಹುದು.


ಇದನ್ನೂ ಓದಿ: Mumbai Indians : ಮುಂಬೈ ಟೀಂ ಮುಂದಿನ ಕ್ಯಾಪ್ಟನ್ ಪಟ್ಟಿಯಲ್ಲಿ ಈ 3 ಆಟಗಾರರ ಹೆಸರು!


ಬೆನ್ನಿಗೆ ಚೂರಿ ಹಾಕಿದ ಮುರಳಿ ವಿಜಯ್..!


ದಿನೇಶ್ ಕಾರ್ತಿಕ್ ಅವರ ಮೊದಲ ಪತ್ನಿಯ ಜೊತೆಗೆ ಅಕ್ರಮ ಸಂಬಂಧವನ್ನು ಬೆಳೆಸುವ ಮೂಲಕ ಮುರುಳಿ ವಿಜಯ್ ದಿನೇಶ್ ಕಾರ್ತಿಕ್ ಗೆ ಒಂದರ್ಥದಲ್ಲಿ ಮೋಸ ಮಾಡಿದ್ದರು. ಈ ವಿಚಾರ ತಮಿಳು ನಾಡಿನ ತಂಡದ ಎಲ್ಲಾ ಸದಸ್ಯರಿಗೂ ಗೊತ್ತಿದ್ದರೂ ಕೂಡ ಅದು ದಿನೇಶ್ ಕಾರ್ತಿಕ್ ಅವರ ಗಮನಕ್ಕೆ ಬಾರದೆ ಹೋಗಿತ್ತು, ಯಾವಾಗ ದಿನೇಶ್ ಕಾರ್ತಿಕ್ ಪತ್ನಿ ಮುರುಳಿ ವಿಜಯ್ ಮಗುವಿಗೆ ತಾಯಿಯಾಗುವ ವಿಚಾರವನ್ನು ತಿಳಿಸಿದಾಗ ದಿನೇಶ್ ಕಾರ್ತಿಕ್ ನಿಜಕ್ಕೂ ಒಂದರ್ಥದಲ್ಲಿ ಕಂಗೆಟ್ಟು ಹೋಗುತ್ತಾರೆ. ಇದೇ ವೇಳೆ ಆಕೆ ದಿನೇಶ್ ಕಾರ್ತಿಕ್ ರಿಂದ ವಿಚ್ಚೇದನ ಪಡೆಯುವ ಇಚ್ಛೆಯನ್ನು ವ್ಯಕ್ತಪಡಿಸುತ್ತಾಳೆ.


Viral Video: ಯುಜ್ವೇಂದ್ರ ಚಹಾಲ್ ಹಾಗೂ ಧನಶ್ರೀ ವರ್ಮಾ ಡ್ಯಾನ್ಸ್ ಗೆ ಜೋಸ್ ಬಟ್ಲರ್ ಫಿದಾ!


ಇನ್ನೊಂದೆಡೆಗೆ ಕಾರ್ತಿಕ್ ಗೆ ವೈಭವೋಪೇರಿತ ಬಂಗಲೆಯಲ್ಲಿ ವಾಸಿಸಬೇಕೆಂಬ ಬಾಲ್ಯದ ಕನಸ್ಸು ಇರುತ್ತದೆ.ಆದರೆ ಇದು ನನಸಾಗುತ್ತೋ ಇಲ್ಲವೋ ಎನ್ನುವ ಗೊಂದಲದಲ್ಲಿರುತ್ತಾರೆ.ಆಗ ಪತ್ನಿ ದೀಪಿಕಾ ಪಲ್ಲಿಕಲ್ ತನ್ನ ಪತಿಗೆ ಧೈರ್ಯವನ್ನು ತುಂಬುತ್ತಾರೆ,ಜೊತೆಗೆ ಅವರು ಕೂಡ ಮತ್ತೆ ಸ್ಕ್ವಾಶ್ ಆಟಕ್ಕೆ ಹಿಂದಿರುಗುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮುತ್ತಾರೆ. ಆಗ ಇಬ್ಬರು ಕೂಡ ಜೊತೆಯಾಗಿ ದುಡಿದು ಚೆನ್ನೈ ನಲ್ಲಿ ಪ್ರತಿಷ್ಟಿತ ಪ್ರದೇಶವಾಗಿರುವ ಪೋಯೆಸ್ ಗಾರ್ಡನ್ ನಲ್ಲಿ ಅದ್ಧೂರಿ ಬಂಗಲೆಯೊಂದನ್ನು ಖರೀದಿಸುತ್ತಾರೆ. ದಿನ ಕಳೆದಂತೆ ಈ ಕಡೆ ಕಾರ್ತಿಕ್ ಐಪಿಎಲ್ ನಲ್ಲಿ ಅತ್ಯಂತ ಬೇಡಿಕೆಯ ಆಟಗಾರನಾಗಿ ಹೊರಹೊಮ್ಮುತ್ತಾರೆ.2022 ರ ಆವೃತ್ತಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಆತನನ್ನು ಚೆನ್ನೈ ತಂಡಕ್ಕೆ ಖರೀದಿಸಲು ಬಹಳಷ್ಟು ಪ್ರಯತ್ನ ಪಟ್ಟರೂ ಕಡೆಗೆ ದೊಡ್ಡ ಮೊತ್ತಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಖರೀದಿಸುತ್ತದೆ.ಈಗ ಅವರಿಗೆ ಸಿನಿಯರ್ ಆಟಗಾರ ಎನ್ನುವ ಹಣೆಪಟ್ಟ ಇದ್ದರೂ ಕೂಡ ಅವರು ನೀಡುವ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನಿಜಕ್ಕೂ ಎಲ್ಲರಲ್ಲೂ ನಿಜಕ್ಕೂ ಅಚ್ಚರಿಯನ್ನು ಮೂಡಿಸುತ್ತದೆ.ಆದರೆ ಇತ್ತಕಡೆ ಬೆನ್ನಿಗೆ ಚೂರಿ ಹಾಕಿದ ಮುರುಳಿ ವಿಜಯ್ ಕ್ರಿಕೆಟ್ ವೃತ್ತಿ ಜೀವನ ಮಾತ್ರ ಒಂದರ್ಥದಲ್ಲಿ ಸಂಪೂರ್ಣವಾಗಿ ಮುಗಿದೇ ಹೋಗಿದೆ ಎಂದು ಹೇಳಬಹುದು.


ನಾವೆಲ್ಲಾ ಸಾಮಾನ್ಯವಾಗಿ ಸೆಲೆಬ್ರಿಟಿಗಳು ಎಂದ ಮಾತ್ರಕ್ಕೆ ಅವರ ಜೀವನ ಅದ್ಧೂರಿಯಾಗಿರುತ್ತದೆ ಎಂದು ಭಾವಿಸುತ್ತೇವೆ.ಆದರೆ ದಿನೇಶ್ ಕಾರ್ತಿಕ್ ಅವರ ಈ ಹೋರಾಟದ ಜೀವನ ಮತ್ತು ಅವರು ಮತ್ತೆ ಕ್ರಿಕೆಟ್ ಗೆ ಅದ್ಧೂರಿಯಾಗಿ ಎಂಟ್ರಿ ನೀಡಿದ್ದು ನಿಜಕ್ಕೂ ಎಲ್ಲರಿಗೂ ಒಂದು ರೀತಿ ಸ್ಪೂರ್ತಿದಾಯಕ ಎಂದೇ ಹೇಳಬಹುದು. ಸೋಲು ಜೀವನದ ಕೊನೆಯ ಮಾರ್ಗವಲ್ಲ, ಅದೊಂದು ಗೆಲುವಿನ ಆರಂಭಿಕ ಮೆಟ್ಟಿಲು ಎನ್ನುವುದು ದಿನೇಶ್ ಕಾರ್ತಿಕ ಅವರ ಜೀವನದ ಮೂಲಕ ನಮಗೆ ಪಾಠವಾಗುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.