Viral Video: ಯುಜ್ವೇಂದ್ರ ಚಹಾಲ್ ಹಾಗೂ ಧನಶ್ರೀ ವರ್ಮಾ ಡ್ಯಾನ್ಸ್ ಗೆ ಜೋಸ್ ಬಟ್ಲರ್ ಫಿದಾ!

ಬಿಡುವಿನ ವೇಳೆ ಯುಜ್ವೇಂದ್ರ ಚಹಾಲ್ ಜೊತೆಗೆ ಪತ್ನಿ ಧನಶ್ರೀ ವರ್ಮಾ ಮಾಡಿರುವ ಡ್ಯಾನ್ಸ್ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

Written by - Puttaraj K Alur | Last Updated : Apr 21, 2022, 07:54 PM IST
  • ಪತ್ನಿ ಧನಶ್ರೀ ವರ್ಮಾ ಜೊತೆಗೆ ಯುಜ್ವೇಂದ್ರ ಚಹಾಲ್ ಮಸ್ತ್ ಡ್ಯಾನ್ಸ್
  • ಚಹಾಲ್ ಮತ್ತು ಧನಶ್ರೀ ಡ್ಯಾನ್ಸ್ ಗೆ ಜೋಸ್ ಬಟ್ಲರ್ ಫಿದಾ
  • ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುವ ವಿಡಿಯೋ
Viral Video: ಯುಜ್ವೇಂದ್ರ ಚಹಾಲ್ ಹಾಗೂ ಧನಶ್ರೀ ವರ್ಮಾ ಡ್ಯಾನ್ಸ್ ಗೆ ಜೋಸ್ ಬಟ್ಲರ್ ಫಿದಾ! title=
ಚಹಾಲ್ ಮತ್ತು ಧನಶ್ರೀ ಡ್ಯಾನ್ಸ್!

 ನವದೆಹಲಿ: ಭಾರತದ ಸ್ಟಾರ್ ಲೆಗ್‌ ಸ್ಪಿನ್ನರ್‌ ಯುಜ್ವೇಂದ್ರ ಚಹಾಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ಅವರ ಡ್ಯಾನ್ಸ್ಗೆ ಇಂಗ್ಲೆಂಡ್ ಆಟಗಾರ ಜೋಸ್ ಬಟ್ಲರ್ ಫಿದಾ ಆಗಿದ್ದಾರೆ.

ತಮ್ಮ ಸಂಗಾತಿ, ಡ್ಯಾನ್ಸರ್ ಧನಶ್ರೀ ವರ್ಮಾ ಜೊತೆಗೆ ಯುಜ್ವೇಂದ್ರ ಚಹಾಲ್ ಸೋಷಿಯಲ್ ಮೀಡಿಯಾದಲ್ಲಿ ಮಿಂಚುತ್ತಿದ್ದಾರೆ. ಈ ಜೋಡಿಗೆ ಲಕ್ಷಾಂತರ ಅಭಿಮಾನಿಗಳಿದ್ದಾರೆ. ನೃತ್ಯಪಟು ಆಗಿರುವ ಧನಶ್ರೀ ವರ್ಮಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ. ಅವರು ಆಗಾಗ ತಮ್ಮ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಇದನ್ನೂ ಓದಿ: David Warner : ಎಲ್ಲರನ್ನೂ ಹಿಂದಿಕ್ಕಿ  ದಾಖಲೆ ಬರೆದ ವಾರ್ನರ್ : ಪಟ್ಟಿಯಲ್ಲಿ ಸ್ಥಾನ ಪಡೆದ ರೋಹಿತ್! 

15ನೇ ಆವೃತ್ತಿಯ ಐಪಿಎಲ್ ಟೂರ್ನಿ ಪ್ರಾರಂಭವಾಗಿ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಪಂದ್ಯ ನಡೆಯುವ ವೇಳೆ ಮೈದಾನದಲ್ಲಿ ಹಾಜರಿರುವ ಆಟಗಾರರ ಪತ್ನಿಯರು ತಮ್ಮ ಸಂಗಾತಿಯನ್ನು ಹುರುದುಂಬಿಸುತ್ತಾರೆ. ಅದರಂತೆ ರಾಜಸ್ಥಾನ್ ರಾಯಲ್ಸ್ ತಂಡದ ಪರ ಆಡುತ್ತಿರುವ ಯುಜ್ವೇಂದ್ರ ಚಹಾಲ್ ಜೊತೆಗೆ ಅವರ ಪತ್ನಿಯೂ ಸಹ ಮೈದಾನದಿಂದ ಮೈದಾನಕ್ಕೆ ಸುತ್ತಾಡುತ್ತಿದ್ದಾರೆ. ರಾಜಸ್ಥಾನ್ ತಂಡದ ಪಿಂಕ್ ಕಲರ್ ಜೆರ್ಸಿ ತೊಟ್ಟು ಮಿಂಚುತ್ತಿದ್ದಾರೆ.

ಡ್ಯಾನ್ಸ್ ವಿಡಿಯೋ ಸಖತ್ ವೈರಲ್

 
 
 
 
 

ತಮ್ಮ ಬಿಡುವಿನ ಸಮಯದಲ್ಲಿ ಚಹಾಲ್ ಅವರು ಪತ್ನಿ ಧನಶ್ರೀ ಜೊತೆಗೆ ಡ್ಯಾನ್ಸ್ ಮಾಡಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಚಹಾಲ್ ಹಾಗೂ ಧನಶ್ರೀ ಹಾಡೊಂದಕ್ಕೆ ಸಖತ್ ಸ್ಟೆಪ್ ಹಾಕಿದ್ದಾರೆ. ಇದರ ಜೊತೆಗೆ ಸಹ ಆಟಗಾರರ ಜೊತೆಗೆ ಚಹಾಲ್ ಅವರು ಮೈದಾನಕ್ಕೆ ಆಗಮಿಸುತ್ತಿದ್ದು, ಇದಕ್ಕೆ ಧನಶ್ರೀ ಅವರು ತಮ್ಮ ಸ್ನೇಹಿತರ ಜೊತೆ ಸೇರಿ ಚೀಯರ್ಸ್ ಹೇಳಿದ್ದಾರೆ.

ಇದನ್ನೂ ಓದಿ: Kieron Pollard:ವೆಸ್ಟ್ ಇಂಡೀಸ್ ದಿಗ್ಗಜ ಪೊಲಾರ್ಡ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ

ಲಕ್ಷಾಂತರ ಜನರು ಈ ವಿಡಿಯೋ ನೋಡಿದ್ದು, ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಈ ಪೈಕಿ ರಾಜಸ್ಥಾನ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಜೋಸ್ ಬಟ್ಲರ್ ಸಹ ಕಾಮೆಂಟ್ ಮಾಡಿದ್ದು, ‘ನೈಸ್ ಮೂವ್(Nice moves) ಯುಜ್ವೇಂದ್ರ ಚಹಾಲ್’ ಎಂದು ಹೇಳಿದ್ದಾರೆ. ರಾಜಸ್ಥಾನ್ ತಂಡದ ಅಧಿಕೃತ ಇನ್ಸ್ಟಾ ಖಾತೆಯಿಂದಲೂ ಕಾಮೆಂಟ್ ಮಾಡಲಾಗಿದ್ದು, ‘Come back in the bubble’ ಎಂದು ಕ್ಯಾಪ್ಶನ್ ಬರೆಯಲಾಗಿದೆ. ಇದಲ್ಲದೆ ಸಾಕಷ್ಟು ಅಭಿಮಾನಿಗಳು ಸಹ ಈ ವಿಡಿಯೋಗೆ ವಿವಿಧ ರೀತಿಯಲ್ಲಿ ಕಾಮೆಂಟ್‍ಗಳ ಸುರಿಮಳೆಯನ್ನೇ ಸುರಿಸಿದ್ದಾರೆ.  

Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...

  

Trending News