ಆರ್ಸಿಬಿಯ ಈ ಆಟಗಾರನ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಎ.ಬಿ.ಡಿವಿಲಿಯರ್ಸ್..!

ಎ.ಬಿ.ಡಿವಿಲಿಯರ್ಸ್ ಎಂದರೆ ಸಾಕು ಎದುರಾಳಿ ತಂಡದ ಬೌಲರ್ ಗಳಲ್ಲಿ ನಿಜಕ್ಕೂ ನಡುಕ ಹುಟ್ಟುತ್ತದೆ, ಅದರಲ್ಲೂ ಅವರು ತಮ್ಮ ಎಂದಿನ 360 ಡಿಗ್ರಿ ಬ್ಯಾಟಿಂಗ್ ಮೂಲಕ ಎಂತಹ ಬೌಲರ್ ನ್ನು ಕೂಡ ಒಂದು ಕ್ಷಣ ದಂಗುಬಡಿಸುತ್ತಾರೆ. ಈಗ ಇಂತಹ ಆಟಗಾರ ಈಗ ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದಾರೆ. ಆದರೆ ಈಗ ತಮ್ಮ ನೆಚ್ಚಿನ ಆರ್ಸಿಬಿ ತಂಡದ ಆಟಗಾರನ ಕುರಿತಾಗಿ ಅಚ್ಚರಿ ವ್ಯಕ್ತಪಡಿಸುವುದರ ಜೊತೆ ಮೆಚ್ಚುಗೆಯನ್ನು ಸಹ  ವ್ಯಕ್ತಪಡಿಸಿದ್ದಾರೆ.

Written by - Manjunath N | Last Updated : Apr 19, 2022, 11:44 PM IST
  • ಎ.ಬಿ.ಡಿವಿಲಿಯರ್ಸ್ ಎಂದರೆ ಸಾಕು ಎದುರಾಳಿ ತಂಡದ ಬೌಲರ್ ಗಳಲ್ಲಿ ನಿಜಕ್ಕೂ ನಡುಕ ಹುಟ್ಟುತ್ತದೆ,
  • ಅದರಲ್ಲೂ ಅವರು ತಮ್ಮ ಎಂದಿನ 360 ಡಿಗ್ರಿ ಬ್ಯಾಟಿಂಗ್ ಮೂಲಕ ಎಂತಹ ಬೌಲರ್ ನ್ನು ಕೂಡ ಒಂದು ಕ್ಷಣ ದಂಗುಬಡಿಸುತ್ತಾರೆ.
ಆರ್ಸಿಬಿಯ ಈ ಆಟಗಾರನ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಎ.ಬಿ.ಡಿವಿಲಿಯರ್ಸ್..! title=
file photo

ಮುಂಬೈ: ಎ.ಬಿ.ಡಿವಿಲಿಯರ್ಸ್ ಎಂದರೆ ಸಾಕು ಎದುರಾಳಿ ತಂಡದ ಬೌಲರ್ ಗಳಲ್ಲಿ ನಿಜಕ್ಕೂ ನಡುಕ ಹುಟ್ಟುತ್ತದೆ, ಅದರಲ್ಲೂ ಅವರು ತಮ್ಮ ಎಂದಿನ 360 ಡಿಗ್ರಿ ಬ್ಯಾಟಿಂಗ್ ಮೂಲಕ ಎಂತಹ ಬೌಲರ್ ನ್ನು ಕೂಡ ಒಂದು ಕ್ಷಣ ದಂಗುಬಡಿಸುತ್ತಾರೆ. ಈಗ ಇಂತಹ ಆಟಗಾರ ಈಗ ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದಾರೆ. ಆದರೆ ಈಗ ತಮ್ಮ ನೆಚ್ಚಿನ ಆರ್ಸಿಬಿ ತಂಡದ ಆಟಗಾರನ ಕುರಿತಾಗಿ ಅಚ್ಚರಿ ವ್ಯಕ್ತಪಡಿಸುವುದರ ಜೊತೆ ಮೆಚ್ಚುಗೆಯನ್ನು ಸಹ  ವ್ಯಕ್ತಪಡಿಸಿದ್ದಾರೆ.

ಹೌದು,ಈಗ ಎಬಿಡಿ ಮೆಚ್ಚುಗೆ ವ್ಯಕ್ತಪಡಿಸಿರುವ ಈ ಆಟಗಾರ ಬೇರೆ ಯಾರು ಅಲ್ಲಾ ದಿನೇಶ್ ಕಾರ್ತಿಕ್, ಕಳೆದ ಬಾರಿ ಕೊಲ್ಕತ್ತಾ ತಂಡದ ನಾಯಕರಾಗಿದ್ದ ಅವರನ್ನು ಈ ಬಾರಿ ಬಿಡ್ಡಿಂಗ್ ನಲ್ಲಿ ಆರ್ಸಿಬಿ ಖರೀದಿಸಿದೆ. ಐಪಿಎಲ್ ನ ಈ ಆವೃತ್ತಿಯಲ್ಲಿ ಅವರು ಇದುವರೆಗೆ ಅದ್ಬುತ ಪ್ರದರ್ಶನವನ್ನು ನೀಡಿದ್ದಾರೆ. ಅದರಲ್ಲೂ ಏಕಮೇವ ಆಟಗಾರನಾಗಿ ಪಂದ್ಯವನ್ನು ಗೆಲ್ಲಿಸುವ ಸಾಮರ್ಥ್ಯವನ್ನು ಅವರು ಸಾಬೀತುಪಡಿಸಿದ್ದಾರೆ. ಈಗ ಅವರ ಭರ್ಜರಿ ಬ್ಯಾಟಿಂಗ್ ಪ್ರದರ್ಶನಕ್ಕೆ ಆರ್ಸಿಬಿ ಮಾಜಿ ಆಟಗಾರ ಎಬಿಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: RR vs KKR: ಬಟ್ಲರ್ ಶತಕ, ಚಹಾಲ್ ಹ್ಯಾಟ್ರಿಕ್ ಕೈಚಳಕ, ರಾಜಸ್ಥಾನಕ್ಕೆ ಗೆಲುವಿನ ಪುಳಕ

'ನನಗೆ ನಿಜಕ್ಕೂ ಇದು ಆಶ್ಚರ್ಯವಾಗಿದೆ, ಇದನ್ನು ನಾನು ಖಂಡಿತಾ ನಿರೀಕ್ಷಿಸಿರಲಿಲ್ಲ. ಅವರು ಅತ್ಯಂತ ಸಮರ್ಥ ಆಟಗಾರ, ನಿಷ್ಠುರ ರೀತಿಯ ವ್ಯಕ್ತಿ ಎಂದು ನನಗೆ ಯಾವಾಗಲೂ ಗೊತ್ತಿತ್ತು. ಅವರು ಹೆಚ್ಚಿನ ಒತ್ತಡದ ಸಂದರ್ಭಗಳನ್ನು ಇಷ್ಟಪಡುತ್ತಾರೆ ಮತ್ತು ಅವರು ವಿಕೆಟ್‌ ಕೀಪಿಂಗ್ ನಲ್ಲಿ ನಿರತ ಆಟಗಾರರಾಗಿದ್ದಾರೆ. ಆದರೆ ಅವರು ಅಷ್ಟಾಗಿ ಕ್ರಿಕೆಟ್ ಪಂದ್ಯಗಳನ್ನು ಆಡಿಲ್ಲ, ಐಪಿಎಲ್‌ಗೆ ಮುನ್ನ ನಾನು ಅವರನ್ನು ಕೊನೆಯ ಬಾರಿ ನೋಡಿದಾಗ ಅವರು ಯುಕೆಯಲ್ಲಿ ಕಾಮೆಂಟರಿ ಮಾಡುತ್ತಿದ್ದರು. ಅವರು ದೇಶೀಯ ಕ್ರಿಕೆಟ್‌ನಲ್ಲಿಯೂ ಕೂಡ  ಸಾಕಷ್ಟು ಆಡುತ್ತಿರಲಿಲ್ಲ. ಹಾಗಾಗಿ ನಾನು ಬಹುಶಃ ಅವರು ತಮ್ಮ ವೃತ್ತಿಜೀವನದ ಮುಕ್ತಾಯದ ಹಂತದಲ್ಲಿರಬಹುದು ಎಂದು ಭಾವಿಸಿದ್ದೆ. ಆದರೆ ಈಗ ಅವರು ನಮ್ಮೆಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದ್ದಾರೆ" ಎಂದು ಡಿ ವಿಲಿಯರ್ಸ್ ಹೇಳಿದ್ದಾರೆ.

ಇದನ್ನೂ ಓದಿ: IPL 2022: ಐಪಿಎಲ್ ಕ್ರಿಕೆಟ್ ಇತಿಹಾಸದಲ್ಲಿ ಅಪರೂಪದ ದಾಖಲೆ ನಿರ್ಮಿಸಿದ ಉಮ್ರಾನ್ ಮಲಿಕ್

ಇತ್ತೀಚಿಗೆ ದೆಹಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಅವರು ಕೇವಲ 34 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಐದು ಸಿಕ್ಸರ್ ಗಳ ಮೂಲಕ ಭರ್ಜರಿ 66 ರನ್ ಗಳಿಸಿದರು. ಆ ಮೂಲಕ ತಮ್ಮಲ್ಲಿನ ಕ್ರಿಕೆಟ್ ಆಟ ಇನ್ನೂ ಮುಗಿದಿಲ್ಲ ಎಂದು ಅವರು ಸೂಚ್ಯವಾಗಿ ಸಾಬೀತುಪಡಿಸಿದ್ದರು. ಅವರ ಈ ಭರ್ಜರಿ ಪ್ರದರ್ಶನದ ನಂತರ ಸುನಿಲ್ ಗವಾಸ್ಕರ್ ಸೇರಿದಂತೆ ಅನೇಕ ಮಾಜಿ ಆಟಗಾರರು ಮೆಚ್ಚುಗೆ ಸುರಿಮಳೆಯನ್ನು ಸುರಿಸಿದ್ದಷ್ಟೇ ಅಲ್ಲದೆ, ಮುಂಬರುವ ಟಿ20 ವಿಶ್ವಕಪ್ ನಲ್ಲಿ 6 ಮತ್ತು 7 ನೇ ಸ್ಥಾನದಲ್ಲಿ ಅವರು ಉತ್ತಮ ಫಿನಿಶರ್ ಆಗಬಹುದು ಎಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News