ಟೀಮ್ ಇಂಡಿಯಾದ ಟೆಸ್ಟ್ ನಾಯಕತ್ವ ವಹಿಸಿಕೊಳ್ಳಲು ಈ ಆಟಗಾರ ಸೂಕ್ತ ಎಂದ ಯುವರಾಜ್ ಸಿಂಗ್ ..!
ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರು ದೆಹಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಬ್ ಪಂತ್ ಅವರನ್ನು ರಾಷ್ಟ್ರೀಯ ತಂಡದ ಉಪನಾಯಕರನ್ನಾಗಿ ನೇಮಿಸುವಂತೆ ಟೀಮ್ ಇಂಡಿಯಾ ರಾಷ್ಟ್ರೀಯ ಆಯ್ಕೆದಾರರಿಗೆ ಹೇಳಿದ್ದಾರೆ.
ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರು ದೆಹಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಬ್ ಪಂತ್ ಅವರನ್ನು ರಾಷ್ಟ್ರೀಯ ತಂಡದ ಉಪನಾಯಕರನ್ನಾಗಿ ನೇಮಿಸುವಂತೆ ಟೀಮ್ ಇಂಡಿಯಾ ರಾಷ್ಟ್ರೀಯ ಆಯ್ಕೆದಾರರಿಗೆ ಹೇಳಿದ್ದಾರೆ.ಪಂತ್ ಸದ್ಯ ಐಪಿಎಲ್ 2022 ರಲ್ಲಿ ದೆಹಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸುತ್ತಿದ್ದರೆ, ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ರೋಹಿತ್ ಶರ್ಮಾ ನೇತೃತ್ವದ ರಾಷ್ಟ್ರೀಯ ತಂಡದ ಉಪನಾಯಕರಾಗಿದ್ದಾರೆ.
ಈಗ ಸ್ಪೋರ್ಟ್ಸ್ 18' ಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಯುವರಾಜ್ ಸಿಂಗ್ ಪಂತ್ ಅವರ ಆಟದ ಕುರಿತಾಗಿ ಮಾತನಾಡುತ್ತಾ "ಅವರಿಗೆ ಸೂಕ್ತ ಸಮಯ ನೀಡುವುದರ ಮೂಲಕ ಅವರನ್ನು ಬೆಳೆಸಬೇಕು,ಅವರ ಇತ್ತೀಚಿನ ದಿನಗಳಲ್ಲಿ ಅವರ ಆಟದಲ್ಲಿ ಸಾಕಷ್ಟು ಬೆಳವಣಿಗೆ ಕಂಡಿದೆ ಎಂದು ಅವರು ಹೇಳಿದರು.“ನೀವು ಯಾರನ್ನಾದರೂ ಸಿದ್ಧಗೊಳಿಸಬೇಕು.ಮಹಿ ನಾಯಕರಾಗಿ ಯಶಸ್ವಿಯಾಗುತ್ತಾರೆ ಎಂದು ಯಾರು ಭಾವಿಸಿರಲಿಲ್ಲ, ಆದರೆ ಅವರನ್ನು ನಾಯಕರನ್ನಾಗಿ ನೇಮಕ ಮಾಡಲಾಯಿತು.ತದನಂತರ ಅವರು ಅದರಲ್ಲಿ ಯಶಸ್ವಿಯಾದರು ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: IPL ಇತಿಹಾಸದಲ್ಲಿ 150 ವಿಕೆಟ್ ಪಡೆದ ದಾಖಲೆ ವೀರ ಅಶ್ವಿನ್
ಭವಿಷ್ಯದಲ್ಲಿ ಟೆಸ್ಟ್ ತಂಡವನ್ನು ಮುನ್ನಡೆಸಲು ಪಂತ್ ಸರಿಯಾದ ವ್ಯಕ್ತಿ ಎಂದು ಯುವರಾಜ್ ಹೇಳುತ್ತಾರೆ. "ಕೀಪರ್ ಯಾವಾಗಲೂ ಉತ್ತಮ ಚಿಂತಕನಾಗಿರುತ್ತಾನೆ, ಏಕೆಂದರೆ ಅವನು ಯಾವಾಗಲೂ ಗ್ರೌಂಡ್ ಮೇಲೆ ಉತ್ತಮ ದೃಷ್ಟಿಕೋನವನ್ನು ಹೊಂದಿರುತ್ತಾನೆ' ಎಂದು ಹೇಳಿದರು.
'ನೀವು ಭವಿಷ್ಯದ ನಾಯಕನಾಗಬಲ್ಲ ಯುವಕನನ್ನು ಆರಿಸಿಕೊಳ್ಳಿ, ಅವನಿಗೆ ಸಮಯ ನೀಡಿ ಮತ್ತು ಮೊದಲ ಆರು ತಿಂಗಳು ಅಥವಾ ಒಂದು ವರ್ಷದಲ್ಲಿ ಪವಾಡಗಳನ್ನು ನಿರೀಕ್ಷಿಸಬೇಡಿ.ಕೆಲಸವನ್ನು ಪೂರ್ಣಗೊಳಿಸಲು ನೀವು ಕಿರಿಯ ವ್ಯಕ್ತಿಗಳನ್ನು ನಂಬಬೇಕು ಎಂದು ನಾನು ಭಾವಿಸುತ್ತೇನೆ, ”ಎಂದು ಅವರು ಹೇಳಿದರು.
ಪಂತ್ ಅವರ ಪ್ರಬುದ್ದತೆಯನ್ನು ಪ್ರಶ್ನಿಸುವ ಆಟಗಾರರಿಗೆ ತಿರುಗೇಟು ನೀಡಿದ ಯುವರಾಜ್ ಸಿಂಗ್ ಅವರು 'ಆ ವಯಸ್ಸಿನಲ್ಲಿ ನಾನು ಅಪ್ರಬುದ್ಧನಾಗಿದ್ದೆ, ಆ ವಯಸ್ಸಿನಲ್ಲಿ ವಿರಾಟ್ ಅಪ್ರಬುದ್ಧನಾಗಿದ್ದ. ಆದರೆ ಪಂತ್ ಸಮಯದೊಂದಿಗೆ ಪ್ರಬುದ್ಧರಾಗುತ್ತಿದ್ದಾರೆ, ”ಎಂದು ಯುವರಾಜ್ ಹೇಳಿದರು."ಸಹಾಯಕ ಸಿಬ್ಬಂದಿ ಅದರ ಬಗ್ಗೆ ಹೇಗೆ ಯೋಚಿಸುತ್ತಾರೆಂದು ನನಗೆ ತಿಳಿದಿಲ್ಲ, ಆದರೆ ಟೆಸ್ಟ್ ತಂಡವನ್ನು ಮುನ್ನಡೆಸಲು ಅವರು ಸರಿಯಾದ ವ್ಯಕ್ತಿ ಎಂದು ನಾನು ಭಾವಿಸುತ್ತೇನೆ."ಎಂದು ಅವರು ತಿಳಿಸಿದರು.ಪಂತ್ ಐಪಿಎಲ್ 2022 ರಲ್ಲಿ 7 ಪಂದ್ಯಗಳಲ್ಲಿ 37.6 ಸರಾಸರಿಯಲ್ಲಿ 154.09 ಸ್ಟ್ರೈಕ್ ರೇಟ್‌ನೊಂದಿಗೆ 188 ರನ್ ಗಳಿಸಿದ್ದಾರೆ.
ಇದನ್ನೂ ಓದಿ: SRH vs GT : SRH ಟೀಂ ಮ್ಯಾಚ್ ವಿನ್ನರ್‌ಗಳು ಈ 2 ಬೌಲರ್‌ಗಳು : ಇವರ ವೇಗಕ್ಕೆ ಎದುರಾಳಿ ಎದೆಯಲ್ಲಿ ಗಡ ಗಡ!
ಯುವರಾಜ್ ಸಿಂಗು ಅವರು ಪಂತ್ ಅವರೊಂದಿಗಿನ ಮಾತುಕತೆಯಲ್ಲಿ ಅವರು ಆಸ್ಟ್ರೇಲಿಯಾದ ದಂತಕಥೆ ಆಡಮ್ ಗಿಲ್‌ಕ್ರಿಸ್ಟ್ ಅವರ ಉದಾಹರಣೆಯನ್ನು ಬಹಿರಂಗಪಡಿಸಿದರು, ಅವರು 17 ಟೆಸ್ಟ್ ಶತಕಗಳನ್ನು ನಂಬರ್ 7 ರಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. “ನೀವು ಈಗಾಗಲೇ ನಾಲ್ಕು ಟೆಸ್ಟ್ ಶತಕಗಳನ್ನು ಹೊಂದಿದ್ದೀರಿ ಮತ್ತು ನೀವು ಅದನ್ನು ಮಾಡಬಹುದು.ಅತ್ಯುತ್ತಮ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ನ ವಿಷಯದಲ್ಲಿ, ರಿಷಭ್ ಭವಿಷ್ಯದ ದಂತಕಥೆಯಾಗಬಹುದು ಎಂದು ನಾನು ನೋಡುತ್ತೇನೆ’ ಎಂದು ಯುವರಾಜ್ ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.