ICC Ranking List: ವಿಶ್ವಕಪ್ ಟೂರ್ನಿ ಮಧ್ಯೆ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಸಾಕಷ್ಟು ಬದಲಾವಣೆಗಳು ಗೋಚರಿಸುತ್ತವೆ. ರೇಟಿಂಗ್‌ ಮತ್ತು ಶ್ರೇಯಾಂಕಗಳು ಪ್ರತಿ ವಾರ ಬದಲಾಗುತ್ತಿವೆ ಎಂಬುದನ್ನು ಗಮನಿಸಬೇಕಾದ ಅಂಶ. ಇನ್ನು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕಳೆದ ಎರಡು ಪಂದ್ಯಗಳಲ್ಲಿ ಅಂದರೆ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ವಿರುದ್ಧ ಭರ್ಜರಿ ಬ್ಯಾಟಿಂಗ್ ಮಾಡಿದ್ದು, ಈ ಹಿನ್ನೆಲೆಯಲ್ಲಿ ಈ ವಾರ ಬಿಡುಗಡೆಯಾದ ಶ್ರೇಯಾಂಕದಲ್ಲಿ ಭಾರಿ ಲಾಭ ಗಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ವಿರಾಟ್ ಕೊಹ್ಲಿ ಪ್ರಕಾರ ಈ ಶ್ರೇಷ್ಠ ಆಟಗಾರನೇ ವಿಶ್ವದ ಅತ್ಯಂತ ಅಪಾಯಕಾರಿ ಕ್ರಿಕೆಟಿಗ


ಐಸಿಸಿ ಬಿಡುಗಡೆ ಮಾಡಿರುವ ನೂತನ ಏಕದಿನ ರ್ಯಾಕಿಂಗ್‌’ನಲ್ಲಿ ಪಾಕ್ ನಾಯಕ ಬಾಬರ್ ಅಜಮ್ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಕಳೆದ ವಾರ 830 ರಷ್ಟಿದ್ದ ಅವರ ರೇಟಿಂಗ್ ಈಗ 836ಕ್ಕೆ ತಲುಪಿದೆ. ಅವರು ಭಾರತೀಯ ತಂಡದ ವಿರುದ್ಧ 50 ರನ್‌’ಗಳ ಇನ್ನಿಂಗ್ಸ್‌’ಗಳನ್ನು ಆಡಿದರು, ಆದ್ದರಿಂದ ಅವರು ಒಂದು ರೇಟಿಂಗ್ ಪಾಯಿಂಟ್‌’ನ ಪ್ರಯೋಜನವನ್ನು ಪಡೆದಿದ್ದಾರೆ.


ಇನ್ನು ಟೀಂ ಇಂಡಿಯಾದ ಸ್ಟಾರ್ ಓಪನರ್ ಶುಭ್ಮನ್ ಗಿಲ್ ಎರಡನೇ ಸ್ಥಾನದಲ್ಲಿದ್ದಾರೆ. ಅವರ ರೇಟಿಂಗ್ ಮಟ್ಟ ಕುಸಿದಿದೆ. ಕಳೆದ ವಾರ ಗಿಲ್ ಅವರ ರೇಟಿಂಗ್ 830 ಇತ್ತು. ಆದರೆ ಈ ಬಾರಿ ಅದು 818 ಕ್ಕೆ ಇಳಿದಿದೆ. ಅಂದರೆ ಮೊದಲ ಮತ್ತು ಎರಡನೇ ಬ್ಯಾಟ್ಸ್‌’ಮನ್ ನಡುವಿನ ಅಂತರವೂ ಹೆಚ್ಚಿದೆ.


ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಕ್ವಿಂಟನ್ ಡಿ ಕಾಕ್ ಮೂರನೇ ಸ್ಥಾನಕ್ಕೆ ಬಂದಿದ್ದಾರೆ. ದೀರ್ಘಕಾಲದವರೆಗೆ ಈ ತಂಡದ ರೊಸ್ಸಿ ಬ್ಯಾನ್ ಡೆರ್ ಡುಸ್ಸೆನ್ ಮೂರನೇ ಸ್ಥಾನದಲ್ಲಿದ್ದರು. ಆದರೆ ಈಗ ಅವರು ನಾಲ್ಕನೇ ಸ್ಥಾನಕ್ಕೆ ಕುಸಿದಿದ್ದಾರೆ. ಡಿ ಕಾಕ್ ಅವರ ರೇಟಿಂಗ್ 742 ಕ್ಕೆ ಏರಿದೆ. ಡಸ್ಸೆನ್ ಅವರ ರೇಟಿಂಗ್ ಈಗ 732 ಕ್ಕೆ ಕುಸಿದಿದೆ. ಐರ್ಲೆಂಡ್‌’ನ ಹ್ಯಾರಿ ಟ್ಯಾಕ್ಟರ್ 729 ರೇಟಿಂಗ್‌’ನೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.


ಇದನ್ನೂ ಓದಿ: ನವೆಂಬರ್ 16ರವರೆಗೆ ಈ 3 ರಾಶಿಯ ಜನರು ಮುಟ್ಟಿದ್ದೆಲ್ಲಾ ಚಿನ್ನ! ದೀಪಾವಳಿಗೂ ಮುನ್ನವೇ ಕೈತುಂಬಾ ದುಡ್ಡು, ಎಲ್ಲವೂ ಮಂಗಳವೇ…


ಇನ್ನು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅದ್ಭುತ ಪ್ರದರ್ಶನ ನೀಡಿ ಆರನೇ ಸ್ಥಾನವನ್ನು ವಶಪಡಿಸಿಕೊಂಡಿದ್ದಾರೆ. ಕಳೆದ ವಾರ ಅವರು 11 ನೇ ಸ್ಥಾನದಲ್ಲಿದ್ದರು. ಆದರೆ ಇದ್ದಕ್ಕಿದ್ದಂತೆ ಆರನೇ ಸ್ಥಾನಕ್ಕೆ ಹೈಜಂಪ್ ಮಾಡಿದ್ದಾರೆ. ಈ ಹಿಂದೆ ರೋಹಿತ್ ಶರ್ಮಾ ಅವರ ರೇಟಿಂಗ್ ತುಂಬಾ ಕಡಿಮೆ ಇತ್ತು. ಆದರೆ ಈಗ ಅದು 719 ಆಗಿದೆ. ಇದೇ ರೀತಿ ಬ್ಯಾಟಿಂಗ್ ಮುಂದುವರಿಸಿದರೆ ಶೀಘ್ರವೇ ಟಾಪ್ 5ರಲ್ಲಿ ಸ್ಥಾನ ಪಡೆಯಲಿದ್ದಾರೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್