ಟೌರಂಗಾ: ನ್ಯೂಜಿಲೆಂಡಿನ ಟೌರಂಗಾ ದಲ್ಲಿ ಇಂದು(ಫೆ.3) ನಡೆದ ಐಸಿಸಿ ಅಂಡರ್ 19 ಪುರುಷರ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದ ಭಾರತದ ಕಿರಿಯರ ತಂಡ ವಿಶ್ವಕಪ್ ತನ್ನದಾಗಿಸಿಕೊಂಡಿದೆ. 


COMMERCIAL BREAK
SCROLL TO CONTINUE READING

ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಜೆಜೆಎಸ್ ಸಂಘಾ ಬ್ಯಾಟಿಂಗ್ ಆಯ್ದುಕೊಂಡರು. ಆರಂಭದ 5 ಓವರ್'ಗಳವರೆಗೂ ಎಡ್ವರ್ಡ್ಸ್ ಹಾಗೂ ಬ್ರ್ಯಾಂತ್ ಬಿರುಸಿನ ಆಟವಾಡಿದರೂ ಪೋರೆಲ್ ದಾಳಿಗೆ ಇಬ್ಬರೂ ವಿಕೇಟ್ ಒಪ್ಪಿಸಿದರು. ಮೊದಲ ಕ್ರಮಾಂಕದಲ್ಲಿ ಆಗಮಿಸಿದ ಸಂಘಾ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಮಧ್ಯಮ ಕ್ರಮಾಂಕದ ಆಟಗಾರ ಮೆರ್ಲೋ(76) ಹಾಗೂ ಉಪ್ಪಲ್(34) 4ನೇ ವಿಕೆಟ್ ನಷ್ಟಕ್ಕೆ  95 ರನ್ ಪೇರಿಸಿದ ಕಾರಣ ಆಸಿಸ್ ತಂಡ ಸಾಧಾರಣ ಮೊತ್ತ ಕಲೆ ಹಾಕಲು ಸಾಧ್ಯವಾಯಿತು.


ನಂತರದಲ್ಲಿ ಆರಂಭಿಕ ಆಟಗಾರ ಮನ್‌ಜೋತ್ ಕಾಲ್ರಾ ಭರ್ಜರಿ ಶತಕದ (101 – 102 ಎಸೆತ, 8 ಬೌಂಡರಿ ಮತ್ತು 3 ಸಿಕ್ಸರ್) ನೆರವಿನಿಂದ, ಆಸ್ಟ್ರೇಲಿಯಾ ನೀಡಿದ್ದ 217 ರನ್‌ ಗುರಿ ಬೆನ್ನತ್ತುವುದು ಭಾರತಕ್ಕೆ ಸುಲಭ ಸಾಧ್ಯವಾಯಿತು. 38.5 ಓವರ್‌ಗಳಲ್ಲಿ ಭಾರತ ತಂಡ 2 ವಿಕೆಟ್ ನಷ್ಟಕ್ಕೆ 220 ರನ್ ಗಳಿಸಿ, ವಿಶ್ವಕಪ್ ಕ್ರಿಕೆಟ್‌ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 8 ವಿಕೆಟ್‌ಗಳ ಜಯದೊಂದಿಗೆ ಭಾರತ ತಂಡ ನಾಲ್ಕನೇ ಬಾರಿ ವಿಶ್ವ ಚಾಂಪಿಯನ್ ಆದಂತಾಗಿದೆ.



ಬ್ಯಾಟಿಂಗ್, ಬೌಲಿಂಗ್, ಫಿಲ್ಡಿಂಗ್ ಎಲ್ಲಾ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಭಾರತದ ಅಂಡರ್ 19 ತಂಡ ಫೈನಲ್ ಪಂದ್ಯದಲ್ಲಿ  ಗೆಲವು ಸಾಧಿಸಿತು. ಈ ಹಿಂದೆ, 2002ರಲ್ಲಿ (ಮಹಮ್ಮದ್ ಕೈಫ್‌ ನಾಯಕತ್ವ), 2008ರಲ್ಲಿ (ವಿರಾಟ್ ಕೊಹ್ಲಿ ನಾಯಕತ್ವ) ಮತ್ತು 2012ರಲ್ಲಿ (ಉನ್ಮುಕ್ತ್ ಚಾಂದ್ ನಾಯಕತ್ವ) 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾರತ ಚಾಂಪಿಯನ್ ಆಗಿದೆ.


ಬಹುಮಾನ ಘೋಷಣೆ : ಭಾರತ ಕ್ರಿಕೆಟ್ ಮಂಡಳಿಯ ನಿಯಂತ್ರಣ ಮಂಡಳಿ (ಬಿಸಿಸಿಐ) ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರತ U-19 ಕ್ರಿಕೆಟ್ ತಂಡಕ್ಕೆ ಬೃಹತ್ ಮೊತ್ತದ ಬಹುಮಾನಗಳನ್ನು ಘೋಷಿಸಿದೆ. ತಂಡದ ಅಸಾಧಾರಣ ಪ್ರದರ್ಶನಕ್ಕೆ ಕಾರಣಕರ್ತರಾದ ತಂಡದ ಮುಖ್ಯ ತರಬೇತುದಾರ ರಾಹುಲ್ ದ್ರಾವಿಡ್ ಗೆ 50 ಲಕ್ಷ ರೂ. ಘೋಷಣೆ ಮಾಡಲಾಗಿದ್ದು, ತಂಡದ ಸದಸ್ಯರಿಗೆ ತಲಾ 30 ಲಕ್ಷ ರೂ, ಹಾಗೂ ತಂಡದ ಸಿಬ್ಬಂದಿಗೆ ತಲಾ 20ಲಕ್ಷ ರೂ.ಗಳನ್ನೂ ಬಿಸಿಸಿಐ ಘೋಷಿಸಿದೆ.