ICC World Cup 2023: ಭಾರತ vs ಶ್ರೀಲಂಕಾ, ಒಂದು ಪಂದ್ಯ ಹಲವು ದಾಖಲೆಗಳು..!
ICC World Cup 2023: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ 302 ರನ್‍ಗಳ ಭರ್ಜರಿ ಜಯ ಸಾಧಿಸುವ ಮೂಲಕ ವಿಶ್ವಕಪ್‍ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಮೊದಲ ತಂಡವೆನಿಸಿಕೊಂಡಿತು.
ನವದೆಹಲಿ: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಗುರುವಾರ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ 302 ರನ್‍ಗಳ ಭರ್ಜರಿ ಜಯ ಸಾಧಿಸುವ ಮೂಲಕ ವಿಶ್ವಕಪ್‍ನಲ್ಲಿ ಸೆಮಿಫೈನಲ್ ಪ್ರವೇಶಿಸಿದ ಮೊದಲ ತಂಡವೆನಿಸಿಕೊಂಡಿತು. ಟಾಸ್ ಗೆದ್ದ ಶ್ರೀಲಂಕಾ ಫೀಲ್ಡಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತ ತಂಡ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 357 ರನ್‍ಗಳ ಬೃಹತ್ ಮೊತ್ತ ಪೇರಿಸಿತು. ಬೃಹತ್ ಮೊತ್ತದ ಟಾರ್ಗೆಟ್ ಬೆನ್ನತ್ತಿದ ಲಂಕಾ 19.4 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಕೇವಲ 55 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಒಂದೇ ಒಂದು ಪಂದ್ಯದಲ್ಲಿ ಹಲವಾರು ದಾಖಲೆಗಳು ಮೂಡಿಬಂದವು. ಇವುಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಏಕದಿನ ಪಂದ್ಯದಲ್ಲಿ ಶ್ರೀಲಂಕಾದ ಅತಿ ಕಡಿಮೆ ಮೊತ್ತ
43 vs SA, ಪಾರ್ಲ್ 2012
50 vs IND, ಕೊಲಂಬೊ 2023
55 vs IND, ಮುಂಬೈ 2023
55 vs WI, ಶಾರ್ಜಾ 1986
67 vs ENG, ಮ್ಯಾಂಚೆಸ್ಟರ್ 2014
73 vs IND, ತಿರುವನಂತಪುರ 2023
ವಿಶ್ವಕಪ್ ಆವೃತ್ತಿಯಲ್ಲಿ ಅತಿಹೆಚ್ಚು 4 ವಿಕೆಟ್ ಗಳಿಕೆ
4 - 2011ರಲ್ಲಿ ಶಾಹಿದ್ ಅಫ್ರಿದಿ
4 - 2019ರಲ್ಲಿ ಮಿಚೆಲ್ ಸ್ಟಾರ್ಕ್
3 - 2019ರಲ್ಲಿ ಮೊಹಮ್ಮದ್ ಶಮಿ
3 - 2023ರಲ್ಲಿ ಆಡಮ್ ಝಂಪಾ
3 - 2023ರಲ್ಲಿ ಮೊಹಮ್ಮದ್ ಶಮಿ
ಇದನ್ನೂ ಓದಿ: My Name Is... ಕ್ರಿಕೆಟ್ ಮೈದಾನದಲ್ಲಿ ದೊಡ್ಡ ಎಂಟರ್ಟೈನರ್ ವಿರಾಟ್ ಕೊಹ್ಲಿ, ವಿಡಿಯೋ ವೈರಲ್
ಭಾರತದ ಪರ ಏಕದಿನದಲ್ಲಿ ಅತಿಹೆಚ್ಚು ಬಾರಿ 5 ವಿಕೆಟ್ ಗಳಿಕೆ
4 - ಮೊಹಮ್ಮದ್ ಶಮಿ
3 - ಜಾವಗಲ್ ಶ್ರೀನಾಥ್
3 - ಹರ್ಭಜನ್ ಸಿಂಗ್
ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅತಿಹೆಚ್ಚು ಬಾರಿ 5 ವಿಕೆಟ್ ಗಳಿಕೆ
3 - ಮಿಚೆಲ್ ಸ್ಟಾರ್ಕ್
3 - ಮೊಹಮ್ಮದ್ ಶಮಿ
ವಿಶ್ವಕಪ್ ಟೂರ್ನಿಯಲ್ಲಿ ಪೂರ್ಣ ಸದಸ್ಯರ ತಂಡದ ಕಡಿಮೆ ಮೊತ್ತ
55 - SL vs IND, ವಾಂಖೆಡೆ, 2023
58 - BAN vs WI, ಮೀರ್ಪುರ್, 2011
74 - PAK vs ENG, ಅಡಿಲೇಡ್, 1992
ಏಕದಿನ ಪಂದ್ಯದಲ್ಲಿ ಅತಿದೊಡ್ಡ ಗೆಲುವು (ರನ್‌ಗಳಿಂದ)
317 - IND vs SL, ತಿರುವನಂತಪುರ 2023
309 - AUS ವಿರುದ್ಧ NED, ದೆಹಲಿ 2023 (WC)
304 - ZIM vs UAE, ಹರಾರೆ, 2023
302 - IND vs SL, ವಾಂಖೆಡೆ, 2023 (WC)
290 - NZ vs IRE, ಅಬರ್ಡೀನ್ 2008
275 - AUS ವಿರುದ್ಧ AFG, ಪರ್ತ್ 2015 (WC)
ಭಾರತದ ವಿರುದ್ಧ ಎದುರಾಳಿ ತಂಡದ ಅತಿಕಡಿಮೆ(ODI) ಮೊತ್ತ
50 by SL, ಕೊಲಂಬೊ 2023
55 by SL, ಮುಂಬೈ 2023
58 by BAN, ಮೀರ್ಪುರ್ 2014
65 by ZIM, ಹರಾರೆ 2005
73 by SL, ತಿರುವನಂತಪುರ 2023
ಭಾರತದ ಪರ ವಿಶ್ವಕಪ್‌ನಲ್ಲಿ ಅತಿಹೆಚ್ಚು ವಿಕೆಟ್ ಗಳಿಕೆ
45 - ಮೊಹಮ್ಮದ್ ಶಮಿ
44 - ಜಹೀರ್ ಖಾನ್
44 - ಜಾವಗಲ್ ಶ್ರೀನಾಥ್
33 - ಜಸ್ಪ್ರೀತ್ ಬುಮ್ರಾ
31 - ಅನಿಲ್ ಕುಂಬ್ಳೆ
ಇದನ್ನೂ ಓದಿ: ಈತನ ಸಾಮರ್ಥ್ಯ ಅರಿಯುವಲ್ಲಿ ಎಡವಿದ್ದರು ರೋಹಿತ್ ಶರ್ಮಾ! ವಿಶ್ವಕಪ್ ನಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ್ದು ಇದೇ ಆಟಗಾರ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.