Best Entertainer of Cricket: ಮುಂಬೈನಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಐತಿಹಾಸಿಕ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ 88 ರನ್ ಗಳಿಸಿದ ವಿರಾಟ್ ಕೊಹ್ಲಿ ಕೇವಲ 12 ರನ್ ಅಂತರದಿಂದ ತಮ್ಮ ಏಕದಿನ ವೃತ್ತಿಜೀವನದ 49 ನೇ ಶತಕವನ್ನು ಮಿಸ್ ಮಾಡಿಕೊಂಡರೂ ಸಹ ಕೆಲವು ವಿಶ್ವದಾಖಲೆಗಳನ್ನು ಬ್ರೇಕ್ ಮಾಡಿದರು. ವಿಶೇಷವೆಂದರೆ ವಿರಾಟ್ ಕೊಹ್ಲಿ ಕ್ರಿಕೆಟ್ ಮೈದಾನದಲ್ಲಿ ಕೇವಲ ಬ್ಯಾಟ್‌ನಿಂದ ಮಾತ್ರವಲ್ಲ ಎಲ್ಲಾ ರೀತಿಯಲ್ಲೂ ಮನರಂಜನೆ ನೀಡುತ್ತಾರೆ.
ಹೌದು, ವಿಶ್ವಕಪ್’ನಲ್ಲಿ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರೆಸಿರುವ ಟೀಂ ಇಂಡಿಯಾ ಸೆಮೀಸ್’ಗೆ ಲಗ್ಗೆ ಇಟ್ಟಿದೆ. ಈ ಮಧ್ಯೆ, ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರ ವಿಡಿಯೋ ವೈರಲ್ ಆಗುತ್ತಿದೆ. ಅದೂ ಸಹ ಒಂದಲ್ಲ, ಎರಡೆರಡು ವಿಡಿಯೋಗಳು ಸಕ್ಕಾಪಟ್ಟೆ ಸದ್ದು ಮಾಡುತ್ತಿವೆ.
ಮೊದಲನೆಯದಾಗಿ ಕ್ರಿಕೆಟ್ ಮೈದಾನದಲ್ಲಿ ಸಾವಿರಾರು ಪ್ರೇಕ್ಷಕರ ಸಮ್ಮುಖದಲ್ಲಿ ಡಿಜೆ ಹಾಡಿಗೆ ಹೆಜ್ಜೆ ಹಾಕಿದ ವಿರಾಟ್ ಕೊಹ್ಲಿ ಅವರ ವಿಡಿಯೋ ವೈರಲ್ ಆಗುತ್ತಿದೆ. ಇನ್ನೊಂದೆಡೆ, ಭಾರತೀಯ ದಂತಕಥೆ ಹರ್ಭಜನ್ ಸಿಂಗ್ ಜೊತೆ ಹೆಜ್ಜೆ ಹಾಕುವ ವಿಡಿಯೋ ಕೂಡ ವೈರಲ್ ಆಗುತ್ತಿದೆ.
ಇದನ್ನೂ ಓದಿ- ಟೀಂ ಇಂಡಿಯಾ ಬೆಂಕಿಯಾಟಕ್ಕೆ ವಿಲವಿಲ ಒದ್ದಾಡಿದ ಲಂಕಾ: 302 ರನ್’ಗಳ ಭರ್ಜರಿ ಜಯ ಸಾಧಿಸಿ ಸೆಮೀಸ್’ಗೆ ಭಾರತ ಲಗ್ಗೆ
ನಿನ್ನೆ ಮುಂಬೈನಲ್ಲಿ ಶ್ರೀಲಂಕಾ ವಿರುದ್ಧ ನಡೆದ ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ 302 ರನ್‌ಗಳ ಬೃಹತ್ ಅಂತರದಿಂದ ಮ್ಯಾಚ್ ಗೆಲ್ಲುವ ಮೂಲಕ ಐತಿಹಾಸಿಕ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ವಿರಾಟ್ ಫೀಲ್ಡಿಂಗ್ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಡ್ಯಾನ್ಸ್ ಮಾಡಲು ಆರಂಭಿಸಿದರು. ಈ ವೇಳೆ ಕ್ರೀಡಾಂಗಣದಲ್ಲಿ 'ಮೈ ನೇಮ್ ಈಸ್ ಲಖನ್' ಹಾಡು ಪ್ರತಿಧ್ವನಿಸುತ್ತಿತ್ತು. ಈ ವೈರಲ್ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ಅನಿಲ್ ಕಪೂರ್ ಅವರಂತೆಯೇ ಸ್ಟೆಪ್ ಹಾಕಿದ್ದು, ಇದನ್ನು ಪ್ರತ್ಯಕ್ಷವಾಗಿ ಕಂಡ ಸ್ಟೇಡಿಯಂನಲ್ಲಿ ನೆರೆದಿದ್ದ ಪ್ರೇಕ್ಷಕರು ಹರ್ಷಚಿತ್ತರಗಿದ್ದಾರೆ.
ಮೈ ನೇಮ್ ಈಸ್ ಲಖನ್ ಹಾಡಿಗೆ ವಿರಾಟ್ ಸ್ಟೆಪ್ ಹಾಕಿದ ಪರಿ ಹೇಗಿತ್ತು... ಇಲ್ಲಿ ವೀಕ್ಷಿಸಿ...
ಇದನ್ನೂ ಓದಿ- ವಿಶ್ವಕಪ್’ನಲ್ಲಿ ಈ ಶ್ರೇಷ್ಠ ದಾಖಲೆ ಬರೆದ ವಿಶ್ವದ ಎರಡನೇ ತಂಡ ಭಾರತ
ಪಂದ್ಯದ ನಡುವೆ ಮೈ ನೇಮ್ ಈಸ್ ಲಖನ್ ಗೀತೆ ಹೆಜ್ಜೆ ಹಾಕಿರುವ ವಿರಾಟ್ ಕೊಹ್ಲಿ, ಪಂದ್ಯ ಆರಂಭಕ್ಕೂ ಮೊದಲು ಕೂಡ ಡಾನ್ಸ್ ಮಾಡಿದ್ದರು. ಈ ವೇಳೆ ಅವರು ಟೀಂ ಇಂಡಿಯಾದ ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರೊಂದಿಗೆ ಹೆಜ್ಜೆ ಹಾಕಿದರು. ಈ ವಿಡಿಯೋದಲ್ಲಿ ಹರ್ಬಜನ್ ಸಿಂಗ್ ಮೈ ಹಿಡಿದು ಏನೋ ಹೇಳಲು ಬರುತ್ತಾರೆ, ಈ ಸಂದರ್ಭದಲ್ಲಿ ನಗುವಿನ ಸಂಭಾಷಣೆಯೊಂದಿಗೆ ವಿರಾಟ್ ಹೆಜ್ಜೆ ಹಾಕಲು ಪ್ರಾರಂಭಿಸುತ್ತಾರೆ. ಇದನ್ನು ಕಂಡ ಹರ್ಬಜನ್ ಸಿಂಗ್ ಹೊಟ್ಟೆ ಹುಣ್ಣಾಗುವಷ್ಟು ನಗುತ್ತಾರೆ. ಈ ಅದ್ಭುತವಾದ ವಿಡಿಯೋ ಇಲ್ಲಿದೆ ನೋಡಿ...
#INDvsSL #virat KOHLI Dancing with @harbhajan_singh #Dance pic.twitter.com/rmduKaWiFg
— Sid's_Rulz (@sidsrulz) November 2, 2023
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.