ನವದೆಹಲಿ: ಬಾಂಗ್ಲಾದೇಶದ ವಿರುದ್ಧದ 3 ಏಕದಿನ ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 0-2ರಿಂದ ಭಾರೀ ಹಿನ್ನಡೆ ಅನುಭವಿಸಿದೆ. ಢಾಕಾದಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 5 ರನ್‌ಗಳ ಸೋಲು ಅನುಭವಿಸಬೇಕಾಯಿತು. 3ನೇ ಏಕದಿನ ಪಂದ್ಯ ಇಂದು (ಡಿ.10) ನಡೆಯಲಿದೆ. ಆದರೆ ಗಾಯದ ಸಮಸ್ಯೆಯಿಂದ ನಾಯಕ ರೋಹಿತ್ ಶರ್ಮಾ, ಕುಲದೀಪ್ ಸೇನ್ ಮತ್ತು ದೀಪಕ್ ಚಹಾರ್ ಈ ಪಂದ್ಯದಿಂದ ಹೊರಗುಳಿದಿದ್ದಾರೆ. ಹೀಗಾಗಿ ಟೀಂ ಇಂಡಿಯಾದ ನಾಯಕನಾಗಿರುವ ಕೆ.ಎಲ್.ರಾಹುಲ್ ಆಡುವ 11ರಲ್ಲಿ ದೀಪಕ್ ಚಹಾರ್ ಬದಲಿಗೆ ಸ್ಟಾರ್ ಆಟಗಾರನಿಗೆ ಅವಕಾಶ ನೀಡಬಹುದು.


COMMERCIAL BREAK
SCROLL TO CONTINUE READING

ಈ ಆಟಗಾರನಿಗೆ ಅವಕಾಶ ಸಿಗಬಹುದು


3ನೇ ಏಕದಿನ ಪಂದ್ಯದಲ್ಲಿ ಶಹಬಾಜ್ ಅಹ್ಮದ್‌ಗೆ ಅವಕಾಶ ಸಿಗಬಹುದು. ಅದ್ಭುತ ಬೌಲಿಂಗ್ ಮತ್ತು ಬ್ಯಾಟಿಂಗ್‍ನಲ್ಲಿ ಪರಿಣಿತ ಆಟಗಾರನಾಗಿರುವ ಶಹಬಾಜ್ ಬಾಂಗ್ಲಾ ವಿರುದ್ಧದ ಮೊದಲ ಏಕದಿನದಲ್ಲಿ 10 ಓವರ್‌ಗಳಲ್ಲಿ 39 ರನ್‌ ನೀಡಿದ್ದರು. ಅವರ ಬೌಲಿಂಗ್ ಎಕಾನಮಿ ಚೆನ್ನಾಗಿತ್ತು, ಆದರೆ ಯಾವುದೇ ವಿಕೆಟ್‌ ಪಡೆಯಲು ಸಾಧ್ಯವಾಗಿರಲಿಲ್ಲ. ಭಾರತ ಪರ ಇದುವರೆಗೆ 3 ಏಕದಿನ ಪಂದ್ಯಗಳಲ್ಲಿ ಅವರು 3 ವಿಕೆಟ್ ಪಡೆದಿದ್ದಾರೆ.


ಇದನ್ನೂ ಓದಿ: IND vs BAN: ಟೀಂ ಇಂಡಿಯಾ ಪ್ಲೇಯಿಂಗ್ XI ರಿವೀಲ್: ರಾಹುಲ್ ಜೊತೆ ಆರಂಭಿಕ ಆಟಗಾರನಾಗಿ ಈತನಿಗೆ ಸ್ಥಾನ!


ದೇಶಿ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ  


ಶಹಬಾಜ್ ಅಹ್ಮದ್ ಅವರು ದಕ್ಷಿಣ ಆಫ್ರಿಕಾ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ವಿಜಯ್ ಹಜಾರೆ ಟ್ರೋಫಿಯಲ್ಲಿ ತಮ್ಮ ಅದ್ಭುತ ಪ್ರದರ್ಶನದ ಮೂಲಕ ಎಲ್ಲರ ಮನ ಗೆದ್ದರು. ಅವರು 51.2 ಓವರ್‌ಗಳಲ್ಲಿ 4.87ರ ಎಕಾನಮಿಯಲ್ಲಿ 6 ಪಂದ್ಯಗಳಲ್ಲಿ 11 ವಿಕೆಟ್‌ ಪಡೆದಿದ್ದಾರೆ. ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ಅವರು 2 ಅರ್ಧ ಶತಕ ಭಾರಿಸಿದ್ದಾರೆ.


RCBಯಲ್ಲಿ ಶಹಬಾಜ್ ಹೀರೋ!  


2022ರ ಐಪಿಎಲ್ ಟೂರ್ನಿಯಲ್ಲಿ ಶಹಬಾಜ್ ಅಹ್ಮದ್ ಅದ್ಭುತ ಪ್ರದರ್ಶನ ನೀಡಿದರು. RCB ಪರ 16 ಪಂದ್ಯ ಆಡಿದ್ದ ಅವರು 4 ವಿಕೆಟ್‍ಗಳನ್ನು ಪಡೆದಿದ್ದರು. ಅದೇ ರೀತಿ ಅವರು ಈ 16 ಪಂದ್ಯಗಳಲ್ಲಿ 27.38 ಸರಾಸರಿ ಮತ್ತು 120.99 ಸ್ಟ್ರೈಕ್ ರೇಟ್‍ನಲ್ಲಿ 219 ರನ್ ಗಳಿಸಿದ್ದರು.


ಇದನ್ನೂ ಓದಿ: Team India : ODI ವಿಶ್ವಕಪ್‌ಗೆ ಮುನ್ನ ರೋಹಿತ್-ದ್ರಾವಿಡ್ ಮುಂದಿವೆ ಈ ಸವಾಲುಗಳು!


3ನೇ ಪಂದ್ಯ ಗೆಲ್ಲುತ್ತಾ ಭಾರತ?


ಟೀಂ ಇಂಡಿಯಾ ಈಗಾಗಲೇ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯನ್ನು ಕಳೆದುಕೊಂಡಿದೆ. ಹೀಗಾಗಿ ಸರಣಿ ಕ್ಲೀನ್ ಸ್ವೀಪ್ ತಪ್ಪಿಸಲು ಭಾರತದ ಆಟಗಾರರು ಅತ್ಯುತ್ತಮ ಆಟ ಪ್ರದರ್ಶಿಸಬೇಕಾಗಿದೆ. ಬಾಂಗ್ಲಾದೇಶಕ್ಕೆ ಇಲ್ಲಿಯವರೆಗೂ ಏಕದಿನ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾವನ್ನು ಕ್ಲೀನ್ ಸ್ವೀಪ್ ಮಾಡಲು ಸಾಧ್ಯವಾಗಿಲ್ಲ. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ತಮ್ಮ ಜವಾಬ್ದಾರಿಯನ್ನು ಅರ್ಥಮಾಡಿಕೊಂಡು ಆಡಬೇಕಿದೆ. ಹೀಗಾಗಿ 3ನೇ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿ ಮರ್ಯಾದೆ ಉಳಿಸಿಕೊಳ್ಳುತ್ತಾ ಅನ್ನೋ ಪ್ರಶ್ನೆ ಮೂಡಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.